Product SiteDocumentation Site

Red Hat Enterprise Linux 7

7.1 ರ ಬಿಡುಗಡೆ ಟಿಪ್ಪಣಿಗಳು

Red Hat Enterprise Linux 7.17 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳು

Red Hat ಕಸ್ಟಮರ್‌ ಕಂಟೆಂಟ್ ಸರ್ವಿಸಸ್

ಲೀಗಲ್ ನೋಟೀಸ್

Copyright © 2015 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
MySQL® is a registered trademark of MySQL AB in the United States, the European Union and other countries.
All other trademarks are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701

ಸಾರಾಂಶ

ಬಿಡುಗಡೆ ಟಿಪ್ಪಣಿಯು Red Hat Enterprise Linux 7.1 ಬಿಡುಗಡೆಯಲ್ಲಿ ಅಳವಡಿಸಲಾದ ಪ್ರಮುಖ ಸೌಲಭ್ಯಗಳು ಮತ್ತು ಸುಧಾರಣೆಗಳನ್ನು ಹಾಗೂ ಈ 7.1 ಬಿಡುಗಡೆಯಲ್ಲಿನ ಗೊತ್ತಿರುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ಹೊಂದಿರುತ್ತದೆ. Red Hat Enterprise Linux 6 ಮತ್ತು 7 ನಡುವಿನ ಬದಲಾವಣೆಗಳ ಕುರಿತು ವಿವರವಾದ ಮಾಹಿತಿಗಾಗಿ, ವರ್ಗಾವಣೆ ಯೋಜನಾ ಮಾರ್ಗದರ್ಶಿಯನ್ನು ನೋಡಿ.
ಕೃತಜ್ಞತೆಗಳು
Red Hat Enterprise Linux 7 ಅನ್ನು ಪರೀಕ್ಷಿಸಲು ಗಮನಾರ್ಹ ಕೊಡುಗೆಯನ್ನು ನೀಡುದುದಕ್ಕಾಗಿ Sterling Alexander ಮತ್ತು Michael Everette ಅವರನ್ನು Red Hat ಗ್ಲೋಬಲ್ ಸಪೋರ್ಟ್ ಸರ್ವಿಸಸ್ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತದೆ.
ಮುನ್ನುಡಿ
I. ಹೊಸ ಸೌಲಭ್ಯಗಳು
1. ಆರ್ಕಿಟಿಕ್ಚೆರ್
2. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ
3. ಶೇಖರಣೆ
4. ಕಡತ ವ್ಯವಸ್ಥೆಗಳು
5. ಕರ್ನಲ್
6. ವರ್ಚುವಲೈಸೇಶನ್
7. ಕ್ಲಸ್ಟರಿಂಗ್
8. ಕಂಪೈಲರ್ ಹಾಗು ಉಪಕರಣಗಳು
9. ನೆಟ್‌ವರ್ಕಿಂಗ್
10. ಡಾಕರ್ ಫಾರ್ಮ್ಯಾಟ್‌ನಲ್ಲಿನ ಲಿನಕ್ಸ್ ಕಂಟೇನರ್‌ಗಳು
11. ದೃಢೀಕರಣ ಹಾಗು ಇಂಟರ್‌ಆಪರೇಬಿಲಿಟಿ
12. ಸುರಕ್ಷತೆ
13. ಗಣಕತೆರೆ
14. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ
15. Red Hat ತಂತ್ರಾಂಶ ಸಂಗ್ರಹಣೆಗಳು
II. ಸಾಧನದ ಚಾಲಕಗಳು
16. ಶೇಖರಣಾ ಚಾಲಕ ಅಪ್‌ಡೇಟ್‌ಗಳು
17. ಜಾಲಬಂಧ ಚಾಲಕ ಅಪ್‌ಡೇಟ್‌ಗಳು
18. ಗ್ರಾಫಿಕ್ಸ್ ಚಾಲಕ ಅಪ್ಡೇಟುಗಳು
A. ಪರಿಷ್ಕರಣೆಯ ಇತಿಹಾಸ

ಮುನ್ನುಡಿ

Red Hat Enterprise Linux ಕಿರು ಬಿಡುಗಡೆಗಳು ಪ್ರತ್ಯೇಕ ಸುಧಾರಣೆ, ಸುರಕ್ಷತೆ, ಮತ್ತು ದೋಷ ಪರಿಹಾರ ಎರಾಟದ ಒಂದು ಸಂಗ್ರಹವಾಗಿರುತ್ತವೆ. Red Hat Enterprise Linux 7.1 ಬಿಡುಗಡೆ ಟಿಪ್ಪಣಿಗಳು ದಸ್ತಾವೇಜಿನಲ್ಲಿ Red Hat Enterprise Linux 7 ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಮತ್ತು ಈ ಕಿರುಬಿಡುಗಡೆಗಾಗಿ ಅದರ ಜೊತೆಯಲ್ಲಿ ಸೇರಿಸಲಾದ ಅನ್ವಯಗಳಲ್ಲಿ ಪರಿಚಯಿಸಲಾಗುವ ಪ್ರಮುಖ ಬದಲಾವಣೆಗಳು, ಸೌಲಭ್ಯಗಳು, ಮತ್ತು ಸುಧಾರಣೆಯ ಕುರಿತಾದ ಮಾಹಿತಿಯನ್ನು ಬರೆಯಲಾಗಿರುತ್ತದೆ. ಇದರ ಜೊತೆಗೆ, Red Hat Enterprise Linux 7.1 ಬಿಡುಗಡೆ ಟಿಪ್ಪಣಿಗಳು ದಸ್ತಾವೇಜಿನಲ್ಲಿ Red Hat Enterprise Linux 7.1 ರಲ್ಲಿನ ಗೊತ್ತಿರುವ ತೊಂದರೆಗಳನ್ನೂ ಸಹ ಹೊಂದಿರುತ್ತದೆ.

ಪ್ರಮುಖ ಅಂಶ

ಆನ್‌ಲೈನಿನ ಎಂಬಲ್ಲಿ ಇರುವ Red Hat Enterprise Linux 7.1 ಬಿಡುಗಡೆ ಟಿಪ್ಪಣಿಗಳು ದಸ್ತಾವೇಜನ್ನು ಪರಿಪೂರ್ಣ ಹಾಗೂ ಅಪ್‌-ಟು-ಡೇಟ್ ಆಗಿದೆ ಎಂದು ಪರಿಗಣಿಸಲಾಗಿದೆ. ಬಿಡುಗಡೆಯ ಕುರಿತಾದ ಪ್ರಶ್ನೆಗಳನ್ನು ಹೊಂದಿರುವ ಗ್ರಾಹಕರು Red Hat Enterprise Linux ನ ಅವರಲ್ಲಿರುವ ಆವೃತ್ತಿಗಾಗಿನ ಬಿಡುಗಡೆ ಟಿಪ್ಪಣಿಗಳು ದಸ್ತಾವೇಜನ್ನು ನೋಡಿ ಎಂದು ಸಲಹೆ ಮಾಡಲಾಗುತ್ತದೆ.

ಗೊತ್ತಿರುವ ಸಮಸ್ಯೆಗಳು

ಗೊತ್ತಿರುವ ಸಮಸ್ಯೆಯ ವಿವರಣೆಗಳಿಗಾಗಿ, Red Hat Enterprise Linux 7.1 ಬಿಡುಗಡೆ ಟಿಪ್ಪಣಿಗಳ ಇಂಗ್ಲೀಷ್‌ನ ಆವೃತ್ತಿಯನ್ನು ನೋಡಿ.
Red Hat Enterprise Linux ಜೀವನಚಕ್ರದ ಕುರಿತು ಮಾಹಿತಿಯ ಅಗತ್ಯವಿದೆಯೆ, ಹಾಗಿದ್ದಲ್ಲಿ https://access.redhat.com/support/policy/updates/errata/ ಅನ್ನು ನೋಡಿ.

ಭಾಗ I. ಹೊಸ ಸೌಲಭ್ಯಗಳು

ಅಧ್ಯಾಯ 1. ಆರ್ಕಿಟಿಕ್ಚೆರ್

Red Hat Enterprise Linux 7.1 ಒಂದು ಕಿಟ್ ಆಗಿ ಈ ಕೆಳಗಿನ ಆರ್ಕಿಟೆಕ್ಚರುಗಳಲ್ಲಿ ಲಭ್ಯವಿರುತ್ತದೆ [1]:
  • 64-ಬಿಟ್ AMD
  • 64-ಬಿಟ್ Intel
  • IBM POWER7 ಮತ್ತು POWER8 (ಬಿಗ್ ಎಂಡಿಯನ್)
  • IBM POWER8 (ಲಿಟಲ್ ಎಂಡಿಯನ್) [2]
  • IBM System z [3]
Red Hat ಈ ಬಿಡುಗಡೆಯಲ್ಲಿ ಪೂರೈಕೆಗಣಕ, ವ್ಯವಸ್ಥೆಗಳಲ್ಲಿನ ಸುಧಾರಣೆ, ಮತ್ತು ಜೊತೆಗೆ ಒಟ್ಟಾರೆಯಾದ Red Hat ಮುಕ್ತ ತಂತ್ರಾಂಶ (ಓಪನ್ ಸೋರ್ಸ್) ಅನುಭವವನ್ನು ಒದಗಿಸುತ್ತದೆ.

1.1. POWER, ಲಿಟಲ್‌ ಎಂಡಿಯನ್‌ಗಾಗಿನ Red Hat Enterprise Linux

Red Hat Enterprise Linux 7.1 ರಲ್ಲಿ IBM POWER8 ಸಂಸ್ಕಾರಕಗಳನ್ನು ಬಳಸಿಕೊಂಡು IBM Power Systems ವ್ಯವಸ್ಥೆಗಳಲ್ಲಿ ಲಿಟಲ್‌ ಎಂಡಿಯನ್‌ ಬೆಂಬಲವನ್ನು ಪರಿಚಯಿಸುತ್ತದೆ. ಈ ಹಿಂದೆ Red Hat Enterprise Linux 7 ರಲ್ಲಿ, IBM Power Systems ಗಾಗಿ ಕೇವಲ ಬಿಗ್‌ ಎಂಡಿಯನ್‌ ಆವೃತ್ತಿಯನ್ನು ಮಾತ್ರ ನೀಡಲಾಗಿತ್ತು. POWER8-ಆಧರಿತವಾದ ಪೂರೈಕೆಗಣಕಗಳಿಗೆ ನೀಡಲಾಗುವ ಬೆಂಬಲವು 64-ಬಿಟ್ Intel ಹೊಂದಾಣಿಕೆಯಾಗುವ ವ್ಯವಸ್ಥೆಗಳಲ್ಲಿ (x86_64) ಮತ್ತು IBM Power Systems ನ ನಡುವೆ ಪೋರ್ಟೆಬಿಲಿಟಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ .
  • Red Hat Enterprise Linux ಅನ್ನು IBM Power Systems ಪೂರೈಕೆಗಣಕಗಳಲ್ಲಿನ ಅನುಸ್ಥಾಪನೆಗಾಗಿ ಪ್ರತ್ಯೇಕ ಅನುಸ್ಥಾಪನಾ ಮಾಧ್ಯಮವನ್ನು ನೀಡಲಾಗುತ್ತದೆ. ಈ ಮಾಧ್ಯಮಗಳು Red Hat ಕಸ್ಟಮರ್‌ ಪೋರ್ಟಲ್‌ನಲ್ಲಿನ ಡೌನ್‌ಲೋಡ್ ವಿಭಾಗದಲ್ಲಿ ಲಭ್ಯವಿರುತ್ತವೆ.
  • Red Hat Enterprise Linux ನಲ್ಲಿ POWER, ಲಿಟಲ್‌ ಎಂಡಿಯನ್‌ಗಾಗಿ ಕೇವಲ IBM POWER8 ಸಂಸ್ಕಾರವನ್ನು ಹೊಂದಿರುವ ಪೂರೈಕೆಗಣಕಗಳನ್ನು ಮಾತ್ರ ಬೆಂಬಲಿಸಲಾಗುತ್ತದೆ.
  • ಪ್ರಸಕ್ತ, Red Hat Enterprise Linux POWER, ಲಿಟಲ್ ಎಂಡಿಯನ್ ಅನ್ನು Power ಗಾಗಿನ Red Hat Enteprise Virtualizationನ ಅಡಿಯಲ್ಲಿ ಕೇವಲ ಒಂದು KVM ಅತಿಥಿಯಾಗಿ ಮಾತ್ರ ಬೆಂಬಲಿಸಲಾಗುತ್ತದೆ. ಬೇರ್ ಮೆಟಲ್ ಯಂತ್ರಾಂಶದಲ್ಲಿ ಅನುಸ್ಥಾಪಿಸುವುದನ್ನು ಬೆಂಬಲಿಸಲಾಗುವುದಿಲ್ಲ.
  • GRUB2 ಬೂಟ್‌ ಲೋಡರ್ ಅನ್ನು ಅನುಸ್ಥಾಪನಾ ಮಾಧ್ಯಮದಲ್ಲಿ ಮತ್ತು ಜಾಲಬಂಧ ಬೂಟ್‌ಗಾಗಿ ಬಳಸಲಾಗುತ್ತದೆ. ಅನುಸ್ಥಾಪನಾ ಮಾರ್ಗದರ್ಶಿಯನ್ನು IBM Power Systems ಕ್ಲೈಂಟ್‌ಗಳಿಗಾಗಿ GRUB2 ಅನ್ನು ಬಳಸಿಕೊಂಡು ಒಂದು ಜಾಲಬಂಧ ಬೂಟ್ ಪೂರೈಕೆಗಣಕವನ್ನು ಸಿದ್ಧಗೊಳಿಸುವುದಕ್ಕಾಗಿ ಸೂಚನೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.
  • IBM Power Systems ಗಾಗಿನ ಎಲ್ಲಾ ತಂತ್ರಾಂಶ ಪ್ಯಾಕೇಜ್‌ಗಳು POWER ಗಾಗಿ Red Hat Enterprise Linux ನ ಲಿಟಲ್ ಎಂಡಿಯನ್ ಮತ್ತು ಬಿಗ್ ಎಂಡಿಯನ್‌ ವೇರಿಯಂಟ್‌ಗಾಗಿ ಲಭ್ಯವಿರುತ್ತದೆ .
  • POWER, ಲಿಟಲ್‌ ಎಂಡಿಯನ್‌ಗಾಗಿನ, Red Hat Enterprise Linux ಗಾಗಿ ನಿರ್ಮಿಸಲಾದ ಪ್ಯಾಕೇಜ್‌ಗಳು ppc64le ಆರ್ಕಿಟೆಕ್ಚರ್‌ ಕೋಡ್ ಅನ್ನು ಬಳಸುತ್ತವೆ - ಉದಾಹರಣೆಗೆ, gcc-4.8.3-9.ael7b.ppc64le.rpm.


[1] Red Hat Enterprise Linux 7.1 ಅನುಸ್ಥಾಪನೆಯು ಕೇವಲ 64-ಬಿಟ್ ಯಂತ್ರಾಂಶದಲ್ಲಿ ಮಾತ್ರ ಬೆಂಬಲಿತವಾಗಿರುತ್ತದೆ ಎಂಬುದನ್ನು ನೆನಪಿಡಿ. Red Hat Enterprise Linux 7.1 32-ಬಿಟ್ ಕಾರ್ಯಾಚರಣೆ ವ್ಯವಸ್ಥೆಗಳನ್ನು, Red Hat Enterprise Linux ನ ಹಿಂದಿನ ಆವೃತ್ತಿಗಳೂ ಸಹ ಸೇರಿದಂತೆ, ವರ್ಚುವಲ್ ಗಣಕಗಳಾಗಿ ಚಲಾಯಿಸಲು ಸಾಧ್ಯವಿರುತ್ತದೆ.
[2] Red Hat Enterprise Linux 7.1 (ಲಿಟಲ್ ಎಂಡಿಯನ್) ಅನ್ನು Power ಗಾಗಿನ Red Hat Enteprise Virtualization ಮತ್ತು PowerVM ಹೈಪರ್‌ವೈಸರ್‌ಗಳಲ್ಲಿ ಪ್ರಸಕ್ತ ಕೇವಲ ಒಂದು KVM ಅತಿಥಿಯಾಗಿ ಮಾತ್ರ ಬೆಂಬಲಿಸಲಾಗುತ್ತದೆ.
[3] Red Hat Enterprise Linux 7.1, IBM zEnterprise 196 ಯಂತ್ರಾಂಶ ಅಥವ ನಂತರದ್ದನ್ನು ಬೆಂಬಲಿಸುತ್ತದೆ ಎಂಬುದನ್ನು ನೆನಪಿಡಿ; IBM System z10 ಮೇನ್‌ಫ್ರೇಮ್ ವ್ಯವಸ್ಥೆಗಳನ್ನು ಇನ್ನು ಮುಂದೆ ಬೆಂಬಲಿಸಲಾಗುವುದಿಲ್ಲ ಮತ್ತು Red Hat Enterprise Linux 7.1 ಅನ್ನು ಬೂಟ್ ಮಾಡಲು ಮಾಡುವುದಿಲ್ಲ.

ಅಧ್ಯಾಯ 2. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ

2.1. ಅನುಸ್ಥಾಪಕ

Red Hat Enterprise Linux ಅನುಸ್ಥಾಪಕವಾದಂತಹ, Anaconda ಅನ್ನು, Red Hat Enterprise Linux  7.1 ಗಾಗಿನ ಅನುಸ್ಥಾಪನೆಯ ಪ್ರಕ್ರಿಯೆಯನ್ನು ಉತ್ತಮಪಡಿಸಲಾಗಿದೆ.

ಸಂಪರ್ಕಸಾಧನ

  • ಗ್ರಾಫಿಕಲ್ ಅನುಸ್ಥಾಪಕ ಸಂಪರ್ಕಸಾಧನವು ಈಗ ಅನುಸ್ಥಾಪನೆಯ ಸಮಯದಲ್ಲಿ ಕರ್ನಲ್ ಕ್ರಾಶ್ ಡಂಪ್‌ ಮಾಡುವ ವ್ಯವಸ್ಥೆಯನ್ನು ಸಂರಚಿಸಲು Kdump ಅನ್ನು ಸಂರಚಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಈ ಹಿಂದೆ, ಇದನ್ನು ಫರ್ಸ್ಟ್‌ಬೂಟ್ ಸೌಲಭ್ಯದ ನಂತರ ನೀಡಲಾಗುತ್ತಿತ್ತು, ಇದನ್ನು ಒಂದು ಚಿತ್ರಾತ್ಮಕ ಸಂಪರ್ಕಸಾಧನವಿಲ್ಲದೆ ಪಡೆಯಲು ಸಾಧ್ಯವಿರುತ್ತಿರಲಿಲ್ಲ. ಈಗ, Kdump ಅನ್ನು ಯಾವುದೆ ಚಿತ್ರಾತ್ಮಕ ಪರಿಸರವಿಲ್ಲದ ಅನುಸ್ಥಾಪನಾ ಪ್ರಕ್ರಿಯೆಯ ಒಂದು ಭಾಗವಾಗಿ ನೀವು ಸಂರಚಿಸಲು ಸಾಧ್ಯವಿರುತ್ತದೆ. ಹೊಸ ತೆರೆಯನ್ನು ಮುಖ್ಯ ಅನುಸ್ಥಾಪನಾ ಪರಿವಿಡಿಯಿಂದ ನಿಲುಕಿಸಿಕೊಳ್ಳಲು ಸಾಧ್ಯವಿರುತ್ತದೆ (ಅನುಸ್ಥಾಪನಾ ಸಾರಾಂಶ).
    ಹೊಸ Kdump ತೆರೆ
    The new Kdump screen.

    ಚಿತ್ರ 2.1. ಹೊಸ Kdump ತೆರೆ


  • ಬಳಕೆದಾರರಿಗೆ ಸುಲಭವಾಗುವಂತೆ ಕೈಯಾರೆ ವಿಭಜನೆ ಮಾಡುವ ತೆರೆಯನ್ನು ಮರುವಿನ್ಯಾಸಗೊಳಿಸಲಾಗಿದೆ. ಕೆಲವು ನಿಯಂತ್ರಕಗಳನ್ನು ತೆರೆಯ ಬೇರೊಂದು ಸ್ಥಳಕ್ಕೆ ವರ್ಗಾಯಿಸಲಾಗಿದೆ.
    ಮರುವಿನ್ಯಾಸಗೊಳಿಸಲಾದ ಕೈಯಾರೆ ವಿಭಜನೆ ಮಾಡುವ ತೆರೆ
    The new Manual Partitioning screen.

    ಚಿತ್ರ 2.2. ಮರುವಿನ್ಯಾಸಗೊಳಿಸಲಾದ ಕೈಯಾರೆ ವಿಭಜನೆ ಮಾಡುವ ತೆರೆ


  • ಈಗ ನೀವು ಅನುಸ್ಥಾಪಕದ ಜಾಲಬಂಧ & ಆತಿಥೇಯ ತೆರೆಯಲ್ಲಿ ಜಾಲಬಂಧ ಬ್ರಿಜ್ ಅನ್ನು ಸಂರಚಿಸಬಹುದು. ಹಾಗೆ ಮಾಡಲು, ಸಂಪರ್ಕಸಾಧನದ ಪಟ್ಟಿಯಲ್ಲಿ ಕೆಳಭಾಗದಲ್ಲಿರುವ + ಗುಂಡಿಯ ಮೇಲೆ ಕ್ಲಿಕ್ ಮಾಡಿ, ಪರಿವಿಡಿಯಿಂದ ಬ್ರಿಜ್‌ನ ಮೇಲೆ ಕ್ಲಿಕ್ ಮಾಡಿ, ಮತ್ತು ನಂತರ ಕಾಣಿಸಿಕೊಳ್ಳುವ ಬ್ರಿಜ್ ಸಂಪರ್ಕವನ್ನು ಸಂಪಾದಿಸುವಿಕೆ ಸಂವಾದದಲ್ಲಿ ಬ್ರಿಜ್‌ ಅನ್ನು ಸಂರಚಿಸಿ. ಈ ಸಂವಾದಚೌಕವನ್ನು NetworkManager ಇಂದ ಒದಗಿಸಲಾಗುತ್ತದೆ ಮತ್ತು Red Hat Enterprise Linux 7.1 Networking Guideನಲ್ಲಿ ಸಂಪೂರ್ಣ ವಿವರಗಳನ್ನು ಕಾಣಬಹುದು.
    ಹಲವಾರು ಕಿಕ್‌ಸ್ಟಾರ್ಟ್ ಆಯ್ಕೆಗಳನ್ನೂ ಸಹ ಬ್ರಿಜ್‌ ಸಂರಚನೆಗಾಗಿ ಸೇರಿಸಲಾಗಿದೆ. ವಿವರಗಳಿಗಾಗಿ ಈ ಕೆಳಗೆ ನೋಡಿ.
  • ಅನುಸ್ಥಾಪಕವು ಇನ್ನು ಮುಂದೆ ಲಾಗ್‌ಗಳನ್ನು ತೋರಿಸಲು ಅನೇಕ ಕನ್ಸೋಲ್‌ಗಳನ್ನು ಬಳಸುವುದಿಲ್ಲ. ಬದಲಿಗೆ, ಎಲ್ಲಾ ಲಾಗ್‌ಗಳು ವರ್ಚುವಲ್ ಕನ್ಸೋಲ್‌ 1 ನ (tty1) tmux ಫಲಕಗಳಲ್ಲಿ ಇರುತ್ತವೆ. ಅನುಸ್ಥಾಪನೆಯ ಸಮಯದಲ್ಲಿ ಲಾಗ್‌ಗಳನ್ನು ನೋಡುವಂತೆ tmux ಗೆ ಬದಲಾಯಿಸಲು Ctrl+Alt+F1 ಅನ್ನು ಒತ್ತಿ, ನಂತರ ವಿವಿಧ ಕಿಟಕಿಗಳ ನಡುವೆ ಬದಲಾಯಿಸಲು Ctrl+b X ಅನ್ನು ಬಳಸಿ (X ಅನ್ನು ತೆರೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ನಿರ್ದಿಷ್ಟ ಕಿಟಕಿಯ ಸಂಖ್ಯೆಯೊಂದಿಗೆ ಬದಲಾಯಿಸಿ).
    ಚಿತ್ರಾತ್ಮಕ ಸಂಪರ್ಕಸಾಧನಕ್ಕೆ ಮರಳಲು, Ctrl+Alt+F6 ಅನ್ನು ಒತ್ತಿ.
  • Anacondaಗಾಗಿನ ಆದೇಶ-ಸಾಲಿನ ಸಂಪರ್ಕಸಾಧನವು ಈಗ ಸಂಪೂರ್ಣ ನೆರವಿನ ಮಾಹಿತಿಯನ್ನು ಹೊಂದಿದೆ. ಅದನ್ನು ನೋಡಲು, ಅನುಸ್ಥಾಪಿಸಲಾದ anaconda ಪ್ಯಾಕೇಜನ್ನು ಹೊಂದಿರುವ ವ್ಯವಸ್ಥೆಯಲ್ಲಿ anaconda -h ಅನ್ನು ಬಳಸಿ. ಆದೇಶ-ಸಾಲಿನ ಸಂಪರ್ಕಸಾಧನವು ಅನುಸ್ಥಾಪಿಸಲಾದ ವ್ಯವಸ್ಥೆಯಲ್ಲಿ ಅನುಸ್ಥಾಪಕವನ್ನು ಚಲಾಯಿಸಲು ನಿಮಗೆ ಅವಕಾಶ ನೀಡುತ್ತದೆ, ಇದು ಡಿಸ್ಕ್ ಚಿತ್ರಿಕೆ ಅನುಸ್ಥಾಪನೆಗಳಿಗಾಗಿ ಉಪಯುಕ್ತವಾಗಿರುತ್ತದೆ.

ಕಿಕ್‌ಸ್ಟಾರ್ಟ್ ಆದೇಶಗಳು ಮತ್ತು ಆಯ್ಕೆಗಳು

  • logvol ಆದೇಶವು ಒಂದು ಹೊಸ ಆಯ್ಕೆಯನ್ನು ಹೊಂದಿದೆ: --profile=. ತೆಳುವಾದ ಲಾಜಿಕಲ್ ಪರಿಮಾಣಗಳೊಂದಿಗೆ ಬಳಸಲು ಬೇಕಿರುವ ಸಂರಚನಾ ಪ್ರೊಫೈಲ್ ಹೆಸರಿನೊಂದಿಗೆ ಸೂಚಿಸಲು ಈ ಆಯ್ಕೆಯನ್ನು ಬಳಸಿ. ಬಳಸಲಾದಲ್ಲಿ, ಲಾಜಿಕಲ್ ಪರಿಮಾಣಕ್ಕಾಗಿನ ಮೆಟಾಡೇಟದಲ್ಲಿಯೂ ಸಹ ಹೆಸರನ್ನು ಸೇರಿಸಲಾಗುತ್ತದೆ.
    ಪೂರ್ವನಿಯೋಜಿತವಾಗಿ, ಲಭ್ಯವಿರುವ ಪ್ರೊಫೈಲ್‌ಗಳು default ಮತ್ತು thin-performance ಆಗಿರುತ್ತವೆ ಮತ್ತು ಅವುಗಳನ್ನು /etc/lvm/profile ಕೋಶದಲ್ಲಿ ಸೂಚಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ lvm(8) ಮ್ಯಾನ್ ಪುಟವನ್ನು ನೋಡಿ.
  • autostep ಕಿಕ್‌ಸ್ಟಾರ್ಟ್ ಆದೇಶದ --autoscreenshot ಆಯ್ಕೆಯನ್ನು ಸರಿಪಡಿಸಲಾಗಿದೆ, ಮತ್ತು ಅದು ಈಗ ತೆರೆಚಿತ್ರಗಳನ್ನು ಮೇಲೆ ತಿಳಿಸಿದ ತೆರೆಯಿಂದ ನಿರ್ಗಮಿಸಿದಾಗ ಸರಿಯಾಗಿ /tmp/anaconda-screenshots ಕೋಶದಲ್ಲಿ ಉಳಿಸುತ್ತದೆ. ಅನುಸ್ಥಾಪನೆಯು ಮುಗಿದ ನಂತರ, ಈ ತೆರೆಚಿತ್ರಗಳನ್ನು /root/anaconda-screenshots ಗೆ ಸ್ಥಳಾಂತರಿಸಲಾಗುತ್ತದೆ.
  • liveimg ಆದೇಶವು ಈಗ tar ಕಡತಗಳಿಂದ ಮತ್ತು ಡಿಸ್ಕ್‌ ಚಿತ್ರಿಕೆಗಳಿಂದ ಅನುಸ್ಥಾಪಿಸುವುದನ್ನು ಬೆಂಬಲಿಸುತ್ತದೆ. tar ಆರ್ಕೈವ್ ಅನುಸ್ಥಾಪನಾ ಮಾಧ್ಯಮದ ರೂಟ್ ಕಡತ ವ್ಯವಸ್ಥೆಯನ್ನು ಹೊಂದಿರಬೇಕು, ಮತ್ತು ಕಡತದ ಹೆಸರು .tar, .tbz, .tgz, .txz, .tar.bz2, .tar.gz, ಅಥವ .tar.xz ಇಂದ ಕೊನೆಗೊಳ್ಳಬೇಕು.
  • ಜಾಲಬಂಧ ಬ್ರಿಜ್‌ಗಳನ್ನು ಸಂರಚಿಸಲು ಹಲವಾರು ಹೊಸ ಆಯ್ಕೆಗಳನ್ನು network ಆದೇಶಕ್ಕೆ ಸೇರಿಸಲಾಗಿದೆ. ಈ ಆಯ್ಕೆಗಳೆಂದರೆ:
    • --bridgeslaves=: ಈ ಆಯ್ಕೆಯನ್ನು ಬಳಸಿದಾಗ, --device= ಆಯ್ಕೆ ಯಿಂದ ಸೂಚಿಸಲಾದ ಸಾಧನ ಹೆಸರಿನೊಂದಿಗೆ ಜಾಲಬಂಧ ಬ್ರಿಜ್‌ ಅನ್ನು ರಚಿಸಲಾಗುತ್ತದೆ ಮತ್ತು --bridgeslaves= ಆಯ್ಕೆಯಲ್ಲಿ ಸೂಚಿಸಲಾದ ಸಾಧನಗಳನ್ನು ಬ್ರಿಜ್‌ಗೆ ಸೇರಿಸಲಾಗುತ್ತದೆ. ಉದಾಹರಣೆಗೆ:
      network --device=bridge0 --bridgeslaves=em1
    • --bridgeopts=: ಬ್ರಿಜ್‌ ಮಾಡಿದ ಸಂಪರ್ಕಸಾಧನಕ್ಕಾಗಿನ ವಿರಾಮ-ಚಿಹ್ನೆಯಿಂದ ಪ್ರತ್ಯೇಕಿಸಲಾದ ಐಚ್ಛಿಕ ನಿಯತಾಂಕಗಳ ಪಟ್ಟಿ. ಲಭ್ಯವಿರುವ ಮೌಲ್ಯಗಳೆಂದರೆ stp, priority, forward-delay, hello-time, max-age, ಮತ್ತು ageing-time ಆಗಿರುತ್ತದೆ. ಈ ನಿಯತಾಂಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, nm-settings(5) ಮಾಹಿತಿ ಪುಟವನ್ನು ನೋಡಿ.
  • autopart ಆದೇಶವು ಒಂದು ಹೊಸ ಆಯ್ಕೆಯಾದ --fstype ಅನ್ನು ಹೊಂದಿದೆ. ಒಂದು ಕಿಕ್‌ಸ್ಟಾರ್ಟ್ ಕಡತದಲ್ಲಿ ಸ್ವಯಂಚಾಲಿತ ವಿಭಜನೆಯನ್ನು ಬಳಸುವಾಗ ಈ ಆಯ್ಕೆಯು ಪೂರ್ವನಿಯೋಜಿತ ಕಡತ ವ್ಯವಸ್ಥೆಯ ಬಗೆಯನ್ನು ಬದಲಾಯಿಸಲು ನಿಮಗೆ ಅವಕಾಶ ನೀಡುತ್ತದೆ (xfs).
  • ಉತ್ತಮವಾದ ಡಾಕರ್‌ ಬೆಂಬಲಕ್ಕಾಗಿ ಹಲವಾರು ಹೊಸ ಸೌಲಭ್ಯಗಳನ್ನು ಕಿಕ್‌ಸ್ಟಾರ್ಟ್‌ಗೆ ಸೇರಿಸಲಾಗಿದೆ. ಈ ಸೌಲಭ್ಯಗಳೆಂದರೆ:
    • repo --install: ಈ ಹೊಸ ಆಯ್ಕೆಯು ರೆಪೊಸಿಟರಿ ಸಂರಚನೆಯನ್ನು ಅನುಸ್ಥಾಪಿಸಲಾದ ವ್ಯವಸ್ಥೆಯಲ್ಲಿನ /etc/yum.repos.d/ ಕೋಶದಲ್ಲಿ ಉಳಿಸುತ್ತದೆ. ಈ ಆಯ್ಕೆಯನ್ನು ಬಳಸದೆ ಇದ್ದರೆ, ಒಂದು ಕಿಕ್‌ಸ್ಟಾರ್ಟ್ ಕಡತದಲ್ಲಿ ಸಂರಚಿಸಲಾದ ಒಂದು ರೆಪೊಸಿಟರಿಯು ಕೇವಲ ಅನುಸ್ಥಾಪನೆಯ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆಯೆ ಹೊರತು ಅನುಸ್ಥಾಪಿಸಲಾದ ವ್ಯವಸ್ಥೆಯಲ್ಲಿ ಇರುವುದಿಲ್ಲ.
    • bootloader --disabled: ಈ ಆಯ್ಕೆಯು ಬೂಟ್‌ ಲೋಡರ್ ಅನ್ನು ಅನುಸ್ಥಾಪಿಸದಂತೆ ತಡೆಯುತ್ತದೆ.
    • %packages --nocore: ಒಂದು ಕಿಕ್‌ಸ್ಟಾರ್ಟ್ ಕಡತದಲ್ಲಿನ %packages ವಿಭಾಗಕ್ಕಾಗಿನ ಒಂದು ಹೊಸ ಆಯ್ಕೆ, ಇದು @core ಪ್ಯಾಕೇಜ್‌ ಗುಂಪನ್ನು ಅನುಸ್ಥಾಪಿಸದಂತೆ ತಡೆಯುತ್ತದೆ. ಇದು ಕಂಟೇನರ್‌ನೊಂದಿಗೆ ಬಳಸಲು ಅತ್ಯಂತ ಕನಿಷ್ಟ ವ್ಯವಸ್ಥೆಗಳನ್ನು ಅನುಸ್ಥಾಪಿಸುವುದನ್ನು ಸಾಧ್ಯವಾಗಿಸುತ್ತದೆ.
    ಡಾಕರ್‌ನೊಂದಿಗೆ ಸಂಯೋಜನೆಗೊಳಿಸಿದಲ್ಲಿ ಮಾತ್ರ ವಿವರಿಸಲಾದ ಆಯ್ಕೆಗಳು ಪ್ರಯೋಜನಕಾರಿಯಾಗಿರುತ್ತವೆ, ಮತ್ತು ಒಂದು ಸಾಮಾನ್ಯ-ಉದ್ಧೇಶದ ಅನುಸ್ಥಾಪನೆಗಾಗಿ ಬಳಸುವುದರಿಂದ ಒಂದು ಅಪ್ರಯೋಜಕ ವ್ಯವಸ್ಥೆಗೆ ಕಾರಣವಾಗುತ್ತದೆ.

Anaconda ಎಂಟ್ರೋಪಿ

  • Red Hat Enterprise Linux 7.1 ದಲ್ಲಿ, Anacondaವು ಕಡಿಮೆ ಮಟ್ಟದ ಎಂಟ್ರೋಪಿಯನ್ನು ಹೊಂದಿರುವ ದತ್ತಾಂಶಕ್ಕಾಗಿನ ಗೂಢಲಿಪೀಕರಿಸಿದ ವಿನ್ಯಾಸದ ಕಾರಣದಿಂದಾಗಿ ಉಂಟಾಗಬಹುದಾದ ಸುರಕ್ಷತಾ ಸಮಸ್ಯೆಗಳನ್ನು ತಪ್ಪಿಸಲು ಡಿಸ್ಕ್ ಅನ್ನು ಗೂಢಲಿಪೀಕರಿಸಲು ಎಂಟ್ರೋಪಿಯನ್ನು ಸಂಗ್ರಹಿಸುತ್ತದೆ. ಆದ್ದರಿಂದ, ಗೂಢಲಿಪೀಕರಿಸಲಾದ ವಿನ್ಯಾಸವನ್ನು ರಚಿಸುವಾಗ Anacondaವು ಸಾಕಷ್ಟು ಎಂಟ್ರೋಪಿಯು ಸಂಗ್ರಹಿಸಲ್ಪಡುವಂತೆ ಕಾಯುತ್ತದೆ ಮತ್ತು ಕಾಯುವ ಸಮಯವನ್ನು ಹೇಗೆ ಕಡಿಮೆ ಮಾಡುವುದು ಎನ್ನುವುದನ್ನು ಬಳಕೆದಾರರಿಗೆ ಸೂಚಿಸುತ್ತದೆ.

ಚಿತ್ರಾತ್ಮಕ ಅನುಸ್ಥಾಪಕದಲ್ಲಿನ ಒಳ-ನಿರ್ಮಿತ ಸಹಾಯ

ಅನುಸ್ಥಾಪಕದ ಚಿತ್ರಾತ್ಮಕ ಸಂಪರ್ಕಸಾಧನ ಮತ್ತು ಇನಿಶಿಯಲ್ ಸೆಟ್‌ಅಪ್‌ ಸೌಲಭ್ಯದ ಪ್ರತಿ ತೆರೆಯು ಮೇಲಿನ ಎಡ ಮೂಲೆಯಲ್ಲಿ ಈಗ ನೆರವು ಎಂಬ ಗುಂಡಿಯನ್ನು ಹೊಂದಿರುತ್ತದೆ. ಈ ಗುಂಡಿಯ ಮೇಲೆ ಕ್ಲಿಕ್ ಮಾಡುವುದರಿಂದ Yelp ನೆರವಿನ ವೀಕ್ಷಕವನ್ನು ಬಳಸಿಕೊಂಡು ಪ್ರಸಕ್ತ ತೆರೆಗೆ ಅನುಸ್ಥಾಪನಾ ಮಾರ್ಗದರ್ಶಿಯಲ್ಲಿನ ಸೂಕ್ತವಾದ ಅಧ್ಯಾಯವನ್ನು ತೆರೆಯುತ್ತದೆ.

2.2. ಬೂಟ್ ಲೋಡರ್

IBM Power Systems ಈಗ ಈ ಹಿಂದೆ ನೀಡಲಾಗುತ್ತಿದ್ದಂತಹ yaboot ಬದಲಿಗೆ GRUB2 ಬೂಟ್ ಲೋಡರ್ ಅನ್ನು ಬಳಸುತ್ತದೆ. POWER ಗಾಗಿನ Red Hat Enterprise Linux ನ ಬಿಗ್‌ ಎಂಡಿಯನ್‌ ಆವೃತ್ತಿಗಾಗಿ, GRUB2 ಗೆ ಆದ್ಯತೆ ನೀಡಬೇಕು ಆದರೆ yaboot ಅನ್ನೂ ಸಹ ಬಳಸಬಹುದು. ಹೊಸದಾಗಿ ಪರಿಚಯಿಸಲಾದ ಲಿಟಲ್ ಎಂಡಿಯನ್‌ ಅನ್ನು ಬೂಟ್‌ ಮಾಡಲು GRUB2 ನ ಅಗತ್ಯವಿರುತ್ತದೆ.
ಅನುಸ್ಥಾಪನಾ ಮಾರ್ಗದರ್ಶಿಯನ್ನು IBM Power Systems ಗಾಗಿನ GRUB2 ಅನ್ನು ಬಳಸಿಕೊಂಡು ಒಂದು ಜಾಲಬಂಧ ಬೂಟ್ ಪೂರೈಕೆಗಣಕವನ್ನು ಸಿದ್ಧಗೊಳಿಸುವುದಕ್ಕಾಗಿ ಸೂಚನೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 3. ಶೇಖರಣೆ

LVM ಕ್ಯಾಶ್

Red Hat Enterprise Linux 7.1 ರಲ್ಲಿ LVM ಕ್ಯಾಶ್ ಅನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ. ಈ ಸೌಲಭ್ಯವು ದೊಡ್ಡದಾದ ನಿಧಾನಗತಿಯ ಸಾಧನಗಳಿಗೆ ಕ್ಯಾಶ್ ಆಗಿ ಕೆಲಸ ಮಾಡುತ್ತಿರುವ ಸಣ್ಣ ವೇಗವಾದ ಸಾಧನಗಳನ್ನು ಹೊಂದಿರುವ ತಾರ್ಕಿಕ (ಲಾಜಿಕಲ್) ಪರಿಮಾಣಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕ್ಯಾಶ್ ತಾರ್ಕಿಕ ಪರಿಮಾಣಗಳನ್ನು ರಚಿಸುವುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು lvm(8) ಮಾಹಿತಿ (ಮ್ಯಾನುವಲ್) ಪುಟವನ್ನು ನೋಡಿ.
ಕ್ಯಾಶ್ ಲಾಜಿಕಲ್ ವಾಲ್ಯೂಮ್‌ಗಳ (LV) ಬಳಕೆಗೆ ಈ ಕೆಳಗಿನ ನಿರ್ಬಂಧಗಳನ್ನು ಸೇರಿಸಲಾಗಿದೆ ಎಂಬುದನ್ನು ನೆನಪಿಡಿ:
  • ಕ್ಯಾಶ್ LV ಯು ಮೇಲ್ಮಟ್ಟದ ಸಾಧನವಾಗಿರಬೇಕು. ಇದನ್ನು ತಿನ್‌-ಪೂಲ್‌ LV ಆಗಿ, ಒಂದು RAID LV ಯ ಚಿತ್ರಿಕೆಯಾಗಿ, ಅಥವ ಯಾವುದೆ ಇತರ ಉಪ-LV ಬಗೆಯಾಗಿ ಬಳಸಲು ಸಾಧ್ಯವಿರುವುದಿಲ್ಲ.
  • ಕ್ಯಾಶ್ LV ಯನ್ನು ರಚಿಸಿದ ನಂತರ ಅದರ ಗುಣಗಳನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ. ಕ್ಯಾಶ್ ಗುಣವನ್ನು ಬದಲಾಯಿಸಲು, ಕ್ಯಾಶ್ ಅನ್ನು ತೆಗೆದುಹಾಕಿ ಮತ್ತು ಅದನ್ನು ನಿಮ್ಮ ಇಚ್ಛೆಯ ಗುಣದೊಂದಿಗೆ ಮರಳಿ ರಚಿಸಿ.

libStorageMgmt API ನೊಂದಿಗೆ ಸ್ಟೋರೇಜ್ ಅರೇ ಮ್ಯಾನೇಜ್ಮೆಂಟ್

Red Hat Enterprise Linux 7.1 ರಲ್ಲಿ, ಶೇಖರಣಾ ವ್ಯೂಹ ಸ್ವತಂತ್ರ API ಆದಂತಹ, libStorageMgmtನೊಂದಿಗೆ ಶೇಖರಣಾ ವ್ಯೂಹ ನಿರ್ವಹಣೆಯನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ. ಒದಗಿಸಲಾದ API ಯು ಸ್ಥಿರವಾಗಿದೆ, ಹೊಂದಿಕೆಯಾಗುತ್ತದೆ, ಮತ್ತು ವಿವಿಧ ಶೇಖರಣಾ ವ್ಯೂಹಗಳನ್ನು ಪ್ರೊಗ್ರಾಮ್ಯಾಟಿಕಲಿ ನಿಭಾಯಿಸಲು ಮತ್ತು ಒದಗಿಸಲಾದ ಯಂತ್ರಾಂಶ-ವೇಗವರ್ಧಿತ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಕಸನೆಗಾರರಿಗೆ ಅವಕಾಶ ನೀಡುತ್ತದೆ. ವ್ಯವಸ್ಥೆಯ ನಿರ್ವಾಹಕರು ಶೇಖರಣೆಯನ್ನು ಕೈಯಾರೆ ಸಂರಚಿಸಲು ಮತ್ತು ಒಳಗೊಳ್ಳಿಸಲಾದ ಆದೇಶ-ಸಾಲಿನ ಇಂಟರ್‌ಫೇಸ್‌ನೊಂದಿಗೆ ಶೇಖರಣಾ ನಿರ್ವಹಣೆಯ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು libStorageMgmt ಅನ್ನು ಬಳಸಬಹುದಾಗಿರುತ್ತದೆ. Targetd ಪ್ಲಗ್‌ಇನ್ ಸಂಪೂರ್ಣವಾಗಿ ಬೆಂಬಲಿತವಾಗಿಲ್ಲ ಮತ್ತು ಇನ್ನೂ ಸಹ ತಂತ್ರಜ್ಞಾನ ಮುನ್ನೋಟವಾಗಿಯೆ ಉಳಿದಿದೆ ಎಂಬುದನ್ನು ನೆನಪಿಡಿ.
  • NetApp ಫಿಲ್ಲರ್ (ontap 7-Mode)
  • Nexenta (nstor 3.1.x ಮಾತ್ರ)
  • ಈ ಕೆಳಗಿನ ಮಾರಾಟಗಾರರಿಗಾಗಿ, SMI-S:
    • HP 3PAR
      • OS ಬಿಡುಗಡೆ 3.2.1 ಅಥವ ನಂತರದ್ದು
    • EMC VMAX ಮತ್ತು VNX
      • Solutions Enabler V7.6.2.48 ಅಥವ ನಂತರದ್ದು
      • SMI-S Provider V4.6.2.18 ಹಾಟ್‌ಫಿಕ್ಸ್ ಕಿಟ್ ಅಥವ ನಂತರದ್ದು
    • HDS VSP ಅರೆ ನಾನ್-ಎಂಬೆಡೆಡ್ ಪ್ರೊವೈಡರ್
      • Hitachi Command Suite v8.0 ಅಥವ ನಂತರದ್ದು
libStorageMgmt ಬಗೆಗಿನ ಹೆಚ್ಚಿನ ಮಾಹಿತಿಗಾಗಿ, Storage Administration Guideನಲ್ಲಿನ ಸೂಕ್ತವಾದ ಅಧ್ಯಾಯವನ್ನು ನೋಡಿ.

LSI ಸಿಂಕ್ರೊಗಾಗಿನ ಬೆಂಬಲ

Red Hat Enterprise Linux  7.1 ರಲ್ಲಿ LSI Syncro CS ಹೈ-ಅವೆಲಿಬಿಲಿಟಿ ಡೈರೆಕ್ಟ್-ಅಟ್ಯಾಚ್ಡ್ ಸ್ಟೋರೇಜ್ (HA-DAS) ಅಡಾಪ್ಟರುಗಳನ್ನು ಸಕ್ರಿಯಗೊಳಿಸಲು megaraid_sas ಚಾಲಕದಲ್ಲಿನ ಕೋಡ್ ಅನ್ನು ಸೇರಿಸಲಾಗಿದೆ. megaraid_sas ಚಾಲಕವನ್ನು ಈ ಹಿಂದೆ ಸಕ್ರಿಯಗೊಳಿಸಲಾದ ಅಡಾಪ್ಟರುಗಳಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗಿದ್ದರೂ ಸಹ, Syncro CS ಗಾಗಿನ ಈ ಚಾಲಕದ ಬಳಕೆಯು ಒಂದು ತಂತ್ರಜ್ಞಾನ ಮುನ್ನೋಟವಾಗಿತ್ತು. ಈ ಅಡಾಪ್ಟರಿಗಾಗಿನ ಬೆಂಬಲವನ್ನು ನೇರವಾಗಿ LSI ಇಂದ, ನಿಮ್ಮ ವ್ಯವಸ್ಥೆಯ ಸಂಘಟಕನಿಂದ, ಅಥವ ವ್ಯವಸ್ಥೆಯ ಮಾರಾಟಗಾರನಿಂದ ಒದಗಿಸಲಾಗುತ್ತದೆ. Red Hat Enterprise Linux  7.1 ರಲ್ಲಿ Syncro CS ಅನ್ನು ನಿಯೋಜನೆ ಮಾಡುವ ಬಳಕೆದಾರರಿಗೆ Red Hat ಮತ್ತು LSI ಗೆ ಅಭಿಪ್ರಾಯವನ್ನು ತಿಳಿಸುವಂತೆ ಉತ್ತೇಜಿಸಲಾಗುತ್ತದೆ. LSI Syncro CS ಪರಿಹಾರಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು http://www.lsi.com/products/shared-das/pages/default.aspx ಅನ್ನು ನೋಡಿ.

LVM ಅನ್ವಯ ಪ್ರೊಗ್ರಾಮಿಂಗ್ ಸಂಪರ್ಕಸಾಧನ

Red Hat Enterprise Linux 7.1 ರಲ್ಲಿ ಹೊಸ LVM ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಈ API ಅನ್ನು LVM ನ ಕೆಲವು ಅಂಶಗಳನ್ನು ಮನವಿ ಮಾಡಲು ಮತ್ತು ನಿಯಂತ್ರಿಸಲು ಬಳಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ lvm2app.h ಹೆಡರ್ ಕಡತವನ್ನು ನೋಡಿ.

DIF/DIX ಬೆಂಬಲ

DIF/DIX ಎನ್ನುವುದು SCSI ಶಿಷ್ಟತೆಗೆ ಒಂದು ಹೊಸ ಸೇರ್ಪಡೆಯಾಗಿದೆ ಹಾಗು Red Hat Enterprise Linux  7.1 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿದೆ. DIF/DIX ಡೇಟಾ ಇಂಟಿಗ್ರಿಟಿ ಫೀಲ್ಡ್ (DIF) ಅನ್ನು ಸೇರಿಸುವ ಮೂಲಕ ಸಾಮಾನ್ಯವಾಗಿ ಬಳಸಲಾಗುವ 512-ಬೈಟ್ ಡಿಸ್ಕ್ ಬ್ಲಾಕ್ ಅನ್ನು 512 ಇಂದ 520 ಬೈಟ್‌ಗಳಿಗೆ ಹೆಚ್ಚಿಸುತ್ತದೆ. ಒಂದು ಬರೆಯುವಿಕೆಯು ಸಂಭವಿಸಿದಾಗ, ಹೋಸ್ಟ್ ಬಸ್ ಅಡಾಪ್ಟರ್ (HBA) ಇಂದ ದತ್ತಾಂಶ ಬ್ಲಾಕ್‌ಗಾಗಿ ಲೆಕ್ಕಹಾಕಲಾದ ಒಂದು ಚೆಕ್‌ಸಮ್ ಮೌಲ್ಯವನ್ನು DIF ಶೇಖರಿಸಿ ಇರಿಸುತ್ತದೆ. ಶೇಖರಣಾ ಸಾಧನವು ಚೆಕ್‌ಸಮ್ ಅನ್ನು ಸ್ವೀಕರಿಸಿದಾಗ ಖಚಿತಪಡಿಸುತ್ತದೆ, ಮತ್ತು ದತ್ತಾಂಶ ಮತ್ತು ಚೆಕ್‌ಸಮ್ ಎರಡನ್ನೂ ಸಹ ಶೇಖರಿಸಿ ಇರಿಸುತ್ತದೆ. ಇದೇ ರೀತಿ, ಓದುವಿಕೆಯು ಸಂಭವಿಸಿದಾಗ, ಚೆಕ್‌ಸಮ್ ಅನ್ನು ಶೇಖರಣಾ ಸಾಧನದಿಂದ ಮತ್ತು ಸ್ವೀಕರಿಸುವ HBA ಇಂದ ಪರೀಶೀಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ, Storage Administration Guideನಲ್ಲಿನ DIF/DIX ಸಕ್ರಿಯಗೊಂಡ Block Devices ಅನ್ನು ನೋಡಿ .

device-mapper-multipath ಸಿಂಟ್ಯಾಕ್ಸ್ ದೋಷ ಪರಿಶೀಲನೆ ಮತ್ತು ಔಟ್‌ಪುಟ್‌ನಲ್ಲಿ ಸುಧಾರಣೆ

multipath.conf ಕಡತವನ್ನು ಹೆಚ್ಚು ನಂಬಿಕಾರ್ಹವಾಗಿ ಪರಿಶೀಲಿಸಲು device-mapper-multipath ಉಪಕರಣವನ್ನು ಸೇರಿಸಲಾಗಿದೆ. ಇದರ ಪರಿಣಾಮವಾಗಿ, ಪಾರ್ಸ್ ಮಾಡಲು ಸಾಧ್ಯವಾಗದೆ ಇರುವಂತಹ ಯಾವುದೆ ಸಾಲನ್ನು multipath.conf ಹೊಂದಿದ್ದರೆ, device-mapper-multipath ಒಂದು ದೋಷವನ್ನು ವರದಿ ಮಾಡುತ್ತದೆ ಮತ್ತು ತಪ್ಪಾದ ಪಾರ್ಸಿಂಗ್ ಅನ್ನು ತಪ್ಪಿಸಲು ಈ ಸಾಲುಗಳನ್ನು ಕಡೆಗಣಿಸುತ್ತದೆ.
ಇದರೆ ಜೊತೆಗೆ, multipathd show paths format ಆದೇಶಕ್ಕೆ ಈ ಕೆಳಗಿನ ವೈಲ್ಡ್‌ ಕಾರ್ಡ್ ಎಕ್ಸ್‌ಪ್ರೆಶನ್ ಅನ್ನು ಸೇರಿಸಲಾಗಿದೆ:
  • ಆತಿಥೇಯ ಮತ್ತು ಗುರಿ ಫೈಬರ್‌ ಚಾನಲ್ ವರ್ಲ್ಡ್‌ ವೈಡ್ ನೋಡ್‌ ನೇಮ್ಸ್‌ಗಾಗಿ ಅನುಕ್ರಮವಾಗಿ %N ಮತ್ತು %n ಆಗಿರುತ್ತದೆ.
  • ಆತಿಥೇಯ ಮತ್ತು ಗುರಿ ಫೈಬರ್‌ ಚಾನಲ್ ವರ್ಲ್ಡ್‌ ವೈಡ್ ಪೋರ್ಟ್‌ ನೇಮ್ಸ್‌ಗಾಗಿ ಅನುಕ್ರಮವಾಗಿ %R ಮತ್ತು %r ಆಗಿರುತ್ತದೆ.
ಈಗ, ನಿರ್ದಿಷ್ಟ ಫೈಬರ್ ಚಾನಲ್ ಆತಿಥೇಯಗಣಕಗಳು, ಟಾರ್ಗೆಟ್‌ಗಳು, ಮತ್ತು ಅವುಗಳ ಪೋರ್ಟ್‌ಗಳೊಂದಿಗೆ ಮಲ್ಟಿಪಾತ್‌ಗಳನ್ನು ಜೋಡಿಸಲು ಸುಲಭವಾಗಿರುತ್ತದೆ, ಇದರಿಂದಾಗಿ ಬಳಕೆದಾರರು ತಮ್ಮ ಶೇಖರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿರುತ್ತದೆ.

ಅಧ್ಯಾಯ 4. ಕಡತ ವ್ಯವಸ್ಥೆಗಳು

Btrfs ಕಡತ ವ್ಯವಸ್ಥೆಯ ಬೆಂಬಲ

Btrfs (B-Tree)ಕಡತ ವ್ಯವಸ್ಥೆಯನ್ನು Red Hat Enterprise Linux 7.1 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸಲಾಗುತ್ತದೆ. ಈ ಕಡತ ವ್ಯವಸ್ಥೆಯು ಆಧುನಿಕ ನಿರ್ವಹಣೆ, ನಂಬಿಕಾರ್ಹತೆ, ಮತ್ತು ಗಾತ್ರಬದಲಾವಣೆ ಸೌಲಭ್ಯಗಳನ್ನು ಒದಗಿಸುತ್ತದೆ. Btrfs ಕಡತಗಳು ಮತ್ತು ಮೆಟಾಡೇಟಾಕ್ಕಾಗಿ ಚೆಕ್‌ಸಮ್ ಅನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ಸ್ನ್ಯಾಪ್‌ಶಾಟ್‌ಗಳನ್ನು ರಚಿಸಲು ಸಕ್ರಿಯವಾಗಿರುತ್ತದೆ, ಸಂಕುಚನಗೊಳಿಸಲು ಸಕ್ರಿಯವಾಗಿರುತ್ತದೆ ಮತ್ತು ಸಂಘಟಿತ ಸಾಧನ ನಿರ್ವಹಣೆಯನ್ನು ಒದಗಿಸುತ್ತದೆ.

ಸಮಾನಾಂತರ NFS ಗೆ ಬೆಂಬಲ

ಪ್ಯಾರಲೆಲ್ NFS (pNFS) ಎನ್ನುವುದು ಕ್ಲೈಂಟ್‌ಗಳಿಗೆ ಶೇಖರಣೆಯ ಸಾಧನಗಳನ್ನು ನೇರವಾಗಿ ಮತ್ತು ಸಮಾನಾಂತರವಾಗಿ ನಿಲುಕಿಸಿಕೊಳ್ಳಲು ಅವಕಾಶ ಮಾಡಿಕೊಡುವ NFS v4.1 ಶಿಷ್ಟತೆಯ ಒಂದು ಭಾಗವಾಗಿರುತ್ತದೆ. pNFS ಆರ್ಕಿಟೆಕ್ಚರ್ ಹಲವಾರು ಸಾಮಾನ್ಯ ಕಾರ್ಯಹೊರೆಗಳಿಗಾಗಿ NFS ಪೂರೈಕೆಗಣಕಗಳ ಸ್ಕೇಲೆಬಿಲಿಟಿ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
pNFS ಮೂರು ವಿವಿಧ ಶೇಖರಣೆ ಪ್ರೊಟೊಕಾಲ್‌ ಅಥವ ರೂಪವಿನ್ಯಾಸಗಳನ್ನು ಸೂಚಿಸುತ್ತದೆ: ಕಡತಗಳು, ವಸ್ತುಗಳು ಮತ್ತು ಬ್ಲಾಕ್‌ಗಳು. Red Hat Enterprise Linux  7.1 ಕ್ಲೈಂಟ್ ಕಡತಗಳ ರೂಪವಿನ್ಯಾಸವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಮತ್ತು ಬ್ಲಾಕ್‌ಗಳು ಮತ್ತು ವಸ್ತು ರೂಪವಿನ್ಯಾಸಗಳನ್ನು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸುತ್ತದೆ.
Red Hat ಹೊಸ pNFS ವಿನ್ಯಾಸದ ಬಗೆಗಳನ್ನು ಅರ್ಹಗೊಳಿಸಲು ಪಾಲುದಾರರೊಂದಿಗೆ ಮತ್ತು ಮುಕ್ತ ತಂತ್ರಾಂಶ ಯೋಜನೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಬಗೆಯ ವಿನ್ಯಾಸಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸುತ್ತದೆ.
pNFS ಕುರಿತು ಹೆಚ್ಚಿನ ಮಾಹಿತಿಗಾಗಿ, http://www.pnfs.com/ ಅನ್ನು ನೋಡಿ.

ಅಧ್ಯಾಯ 5. ಕರ್ನಲ್

Ceph ಬ್ಲಾಕ್ ಸಾಧನಗಳಿಗಾಗಿನ ಬೆಂಬಲ

Red Hat Enterprise Linux 7.1 ಕರ್ನಲ್‌ಗೆ libceph.ko ಮತ್ತು rbd.ko ಮಾಡ್ಯೂಲ್‌ಗಳನ್ನು ಸೇರಿಸಲಾಗಿದೆ. ಈ RBD ಕರ್ನಲ್ ಮಾಡ್ಯೂಲ್‌ಗಳು Ceph ಬ್ಲಾಕ್ ಸಾಧನವನ್ನು ಲಿನಕ್ಸ್ ಆತಿಥೇಯ ಗಣಕಕ್ಕೆ ಒಂದು ಸಾಮಾನ್ಯ ಡಿಸ್ಕ್ ಸಾಧನದ ನಮೂದಾಗಿ ಕಾಣಿಸಿಕೊಳ್ಳುವಂತೆ, ಮತ್ತು ಅದನ್ನು XFS ಅಥವ ext4ನಂತಹ ಶಿಷ್ಟ ಕಡತ ವ್ಯವಸ್ಥೆಯೊಂದಿಗೆ ಫಾರ್ಮ್ಯಾಟ್ ಮಾಡುವುದರೊಂದಿಗೆ ಒಂದು ಕೋಶಕ್ಕೆ ಮೌಂಟ್ ಮಾಡಲು ಅವಕಾಶ ನೀಡುತ್ತದೆ.
CephFS ಮಾಡ್ಯೂಲ್‌ ಆದಂತಹ, ceph.ko ಅನ್ನು, Red Hat Enterprise Linux 7.1 ನಲ್ಲಿ ಪ್ರಸಕ್ತ ಬೆಂಬಲಿಸಲಾಗುವುದಿಲ್ಲ.

ಸಮವರ್ತಿ ಫ್ಲ್ಯಾಶ್ MCL ಅಪ್‌ಡೇಟ್‌ಗಳು

ಮೈಕ್ರೋಕೋಡ್‌ ಲೆವೆಲ್ ನವೀಕರನಗಳನ್ನು (MCL) IBM System z ಆರ್ಕಿಟೆಕ್ಚರ್‌ನಲ್ಲಿನ Red Hat Enterprise Linux 7.1 ನಲ್ಲಿ ನವೀಕರಿಸಲಾಗಿದೆ. ಈ ನವೀಕರಣಗಳನ್ನು I/O ಕಾರ್ಯಾಚರಣೆಗಳು ಫ್ಲಾಶ್ ಶೇಖರಣಾ ಮಾಧ್ಯಮದ ಮೇಲೆ ಯಾವುದೆ ಪ್ರಭಾವ ಬೀರದಂತೆ ಮತ್ತು ಬದಲಾಯಿಸಲಾದ ಫ್ಲಾಶ್ ಯಂತ್ರಾಂಶ ಸೇವಾ ಮಟ್ಟದ ಬಗೆಗೆ ಬಳಕೆದಾರರಿಗೆ ಸೂಚಿಸುವಂತೆ ನವೀಕರಿಸಬಹುದಾಗಿರುತ್ತದೆ.

ಡೈನಮಿಕ್ ಕರ್ನಲ್ ಪ್ಯಾಚ್ ಮಾಡುವಿಕೆ

Red Hat Enterprise Linux  7.1 ರಲ್ಲಿ "ಕರ್ನಲ್ ಪ್ಯಾಚ್‌ ಮಾಡುವ ಸೌಲಭ್ಯ" ಆದಂತಹ kpatch ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. kpatch ಸೌಲಭ್ಯವನ್ನು ಬಳಸಿಕೊಂಡು ಬಳಕೆದಾರರು ಕರ್ನಲ್‌ ಅನ್ನು ಮರಳಿ ಬೂಟ್‌ ಮಾಡದೆ ಕ್ರಿಯಾತ್ಮಕವಾಗಿ ಪ್ಯಾಚ್‌ ಮಾಡಲು ನೆರವಾಗುವ ಬೈನರಿ ಕರ್ನಲ್ ಪ್ಯಾಚ್‌ಗಳ ಸಂಗ್ರಹವನ್ನು ನೋಡಿಕೊಳ್ಳಲು ಅವಕಾಶ ಹೊಂದಿರುತ್ತಾರೆ. kpatch ಅನ್ನು ಕೇವಲ AMD64 ಮತ್ತು Intel 64 ಆರ್ಕಿಟೆಕ್ಚರ್‌ಗಳಲ್ಲಿ ಮಾತ್ರ ಚಲಾಯಿಸಲು ಸಾಧ್ಯವಿರುತ್ತದೆ ಎನ್ನುವುದನ್ನು ನೆನಪಿಡಿ.

1 CPU ಗಿಂತ ಹೆಚ್ಚಿನವುಗಳೊಂದಿಗಿನ ಕ್ರಾಶ್‌ಕರ್ನಲ್

Red Hat Enterprise Linux  7.1 ರಲ್ಲಿ ಒಂದಕ್ಕಿಂತ ಹೆಚ್ಚಿನ CPU ನೊಂದಿಗೆ ಕ್ರಾಶ್‌ಕರ್ನಲ್ ಅನ್ನು ಬೂಟ್ ಮಾಡುವುದನ್ನು ಸಕ್ರಿಯಗೊಳಿಸುತ್ತದೆ. ಈ ಸೌಲಭ್ಯವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ.

dm-era ಗುರಿ

Red Hat Enterprise Linux  7.1 ರಲ್ಲಿ dm-era device-mapper ಗುರಿಯನ್ನು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. dm-era ವು ಯಾವ ಬ್ಲಾಕ್‌ ಅನ್ನು "era" ಎಂದು ಕರೆಯಲಾಗುವ ಬಳಕೆದಾರ-ಸೂಚಿತ ಅವಧಿಯ ಒಳಗೆ ಯಾವ ಬ್ಲಾಕ್‌ ಅನ್ನು ಬರೆಯಲಾಗಿದೆ ಎಂಬ ಜಾಡನ್ನು ಇರಿಸುತ್ತದೆ. ಪ್ರತಿ era ಗುರಿ ಸನ್ನಿವೇಶವು ಪ್ರಸಕ್ತ era ಅನ್ನು ಏಕತಾನತೆಯಿಂದ ಹೆಚ್ಚಳಗೊಳ್ಳುವ 32-ಬಿಟ್ ಕೌಂಟರ್ ಆಗಿರುವಂತೆ ನೋಡಿಕೊಳ್ಳುತ್ತದೆ. ಈ ಗುರಿಯು ಹಿಂದಿನ ಬಾರಿಯ ಬ್ಯಾಕ್‌ಅಪ್‌ನ ನಂತರ ಯಾವ ಬ್ಲಾಕ್‌ಗಳು ಬದಲಾಗಿವೆ ಎಂಬುದರ ಜಾಡನ್ನು ಇರಿಸಲು ಬ್ಯಾಕ್ಅಪ್ ತಂತ್ರಾಂಶಕ್ಕೆ ನೆರವಾಗುತ್ತದೆ. ಇದು ವೆಂಡರ್ ಸ್ನ್ಯಾಪ್‌ಶಾಟ್‌ಗೆ ಹಿಮ್ಮರಳಿದ ನಂತರ ಕ್ಯಾಶ್ ಸುಸಂಬದ್ಧಗೊಳಿಕೆಯನ್ನು ಮರುಸ್ಥಾಪಿಸಲು ಕ್ಯಾಶ್‌ನ ಕಂಟೆಂಟ್‌ಗಳ ಆಂಶಿಕ ಅಮಾನ್ಯಗೊಳಿಕೆಗೂ ಸಹ ಅವಕಾಶ ನೀಡುತ್ತದೆ. dm-era ಗುರಿಯು ಪ್ರಾಥಮಿಕವಾಗಿ dm-cache ಗುರಿಯೊಂದಿಗೆ ಜೋಡಿಯಾಗಿರಬೇಕು ಎಂದು ನಿರೀಕ್ಷಿಸಲಾಗಿದೆ.

Cisco VIC ಕರ್ನಲ್ ಚಾಲಕ

Cisco VIC Infiniband ಕರ್ನಲ್ ಚಾಲಕವನ್ನು Red Hat Enterprise Linux 7.1 ಗೆ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಈ ಚಾಲಕವು ಪ್ರೊಪ್ರೈಟರಿ Cisco ಆರ್ಕಿಟೆಕ್ಚರ್‌ಗಳಲ್ಲಿ ಸಿಮ್ಯಾಂಟೆಕ್ಸ್‌ನಂತಹ ರಿಮೋಟ್ ಡಿರೆಕ್ಟರಿ ಮೆಮೊರಿ ಎಕ್ಸೆಸ್ (RDMA) ಅನ್ನು ಬಳಸಲು ಅವಕಾಶ ನೀಡುತ್ತದೆ.

hwrng ನಲ್ಲಿ ಎಂಟ್ರೋಪಿ ನಿರ್ವಹಣೆಯಲ್ಲಿ ಸುಧಾರಣೆ

Red Hat Enterprise Linux 7.1 ನಲ್ಲಿ virtio-rng ಮೂಲಕ ಲಿನಕ್ಸ್ ಅತಿಥಿಗಳಿಗಾಗಿನ ಪ್ಯಾರಾವರ್ಚುವಲೈಸ್ಡ್ ಯಂತ್ರಾಂಶ RNG (hwrng) ಅನ್ನು ಸುಧಾರಣೆಗೊಳಿಸಲಾಗಿದೆ. ಈ ಹಿಂದೆ, rngd ಡೀಮನ್ ಅನ್ನು ಅತಿಥಿಯಲ್ಲಿ ಆರಂಭಿಸಬೇಕಿತ್ತು ಮತ್ತು ಅತಿಥಿ ಕರ್ನಲ್‌ನ ಎಂಟ್ರೋಪಿ ಪೂಲ್ ಅನ್ನು ನಿರ್ದೇಶಿಸಬೇಕಿತ್ತು. Red Hat Enterprise Linux 7.1 ರ ನಂತರ, ಈ ಮ್ಯಾನುವಲ್ ಹಂತವನ್ನು ತೆಗೆದುಹಾಕಲಾಗಿದೆ. ಅತಿಥಿಯ ಎಂಟ್ರೋಪಿಯು ನಿಶ್ಚಿತ ಮಟ್ಟದಿಂದ ಕೆಳಗೆ ಹೋದಲ್ಲಿ khwrngd ಎಂಬ ಒಂದು ಹೊಸ ತ್ರೆಡ್ virtio-rng ಸಾಧನದಿಂದ ಎಂಟ್ರೋಪಿಯನ್ನು ಪಡೆದುಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವುದರಿಂದ KVM ಆತಿಥೇಯಗಳಿಂದ ಒದಗಿಸಲಾದ ಪ್ಯಾರಾವರ್ಚುವಲೈಸ್ಡ್ ಯಂತ್ರಾಂಶ RNG ಅನ್ನು ಹೊಂದುವ ಸುಧಾರಿತ ಸುರಕ್ಷತಾ ಪ್ರಯೋಜನಗಳನ್ನು ಎಲ್ಲಾ Red Hat Enterprise Linux ಅತಿಥಿಗಳು ಬಳಸಿಕೊಳ್ಳಲು ನೆರವಾಗುತ್ತದೆ.

ಶೆಡ್ಯೂಲರ್ ಲೋಡ್-ಬ್ಯಾಲೆನ್ಸಿಂಗ್ ಕಾರ್ಯನಿರ್ವಹಣಾ ಸುಧಾರಣೆ

ಈ ಹಿಂದೆ, ಎಲ್ಲಾ ಜಡ CPUಗಳಿಗಾಗಿ ಶೆಡ್ಯೂಲರ್ ಲೋಡ್-ಬ್ಯಾಲೆನ್ಸಿಂಗ್ ಕೋಡ್ ಸಮತೋಲನಗೊಳಿಸುತ್ತಿತ್ತು. Red Hat Enterprise Linux 7.1 ರಲ್ಲಿ, CPU ವಿನ ಹೊರೆಯ ಸಮತೋಲನ ಬಾಕಿ ಇದ್ದಲ್ಲಿ ಮಾತ್ರ ಒಂದು ಜಡ CPU ವಿನ ಪರವಾಗಿ ಜಡ ಹೊರ ಸಮತೋಲವನ್ನು ಮಾಡಲಾಗುತ್ತದೆ. ಈ ಹೊಸ ವರ್ತನೆಯು ಜಡವಲ್ಲದ CPUಗಳಲ್ಲಿ ಹೊರೆ-ಸಮತೋಲನದ ದರವನ್ನು ಮತ್ತು ಇದೇ ಕಾರಣದಿಂದಾಗಿ ಶೆಡ್ಯೂಲರ್‌ನಿಂದಾಗಿ ಮಾಡಲಾಗುವ ಅನಗತ್ಯ ಕೆಲಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಅದರ ಕಾರ್ಯಕ್ಷಮತೆ ಸುಧಾರಿಸುತ್ತದೆ.

ಶೆಡ್ಯೂಲರ್‌ನಲ್ಲಿನ ಸುಧಾರಿತ ನ್ಯೂಐಡಲ್ ಬ್ಯಾಲೆನ್ಸ್

ಚಲಾಯಿಸಬಹುದಾದ ಕೆಲಸಗಳಿದಲ್ಲಿ, newidle ಬ್ಯಾಲೆನ್ಸ್ ಕೋಡ್‌ಗಾಗಿ ಹುಡುಕಾಡುವುದನ್ನು ನಿಲ್ಲಿಸುವಂತೆ ಶೆಡ್ಯೂಲರ್‌ನ ವರ್ತನೆಯನ್ನು ಮಾರ್ಪಡಿಸಲಾಗಿದ್ದು, ಇದು ಉತ್ತಮ ಕಾರ್ಯನಿರ್ವಹಣೆಗೆ ಕಾರಣವಾಗುತ್ತದೆ.

HugeTLB ಈಗ ಪರ್-ನೋಡ್ 1GB ಹ್ಯೂಜ್ ಪೇಜ್ ನಿಯೋಜನೆಯನ್ನು ಬೆಂಬಲಿಸುತ್ತದೆ

Red Hat Enterprise Linux 7.1 ಚಾಲನಾಸಮಯದಲ್ಲಿ ಬೃಹತ್ ಪುಟದ ನಿಯೋಜನೆಗೆ ಬೆಂಬಲವನ್ನು ಸೇರಿಸಲಾಗಿದೆ ಇದರಿಂದಾಗಿ 1GB hugetlbfs ನ ಬಳಕೆದಾರರು ಚಾಲನಾ ಸಮಯದಲ್ಲಿ 1 GB ಯಲ್ಲಿನ ಯಾವ ನಾನ್-ಯುನಿಫಾರ್ಮ್ ಮೆಮೊರಿ ಎಕ್ಸೆಸ್ (NUMA) ನೋಡ್ ಅನ್ನು ನಿಯೋಜಿಸಬೇಕು ಎನ್ನುವುದನ್ನು ಸೂಚಿಸುತ್ತದೆ.

ಹೊಸ MCS-ಆಧರಿತವಾದ ಲಾಕಿಂಗ್ ವ್ಯವಸ್ಥೆ

Red Hat Enterprise Linux 7.1 ರಲ್ಲಿ MCS ಲಾಕ್ಸ್ ಎಂಬ ಹೊಸ ಲಾಕ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ಹೊಸ ಲಾಕಿಂಗ್ ವ್ಯವಸ್ಥೆಯು ದೊಡ್ಡ ವ್ಯವಸ್ಥೆಗಳಲ್ಲಿ spinlock ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಇದರಿಂದಾಗಿ Red Hat Enterprise Linux 7.1 ನಲ್ಲಿ spinlocks ಸಾಮಾನ್ಯವಾಗಿ ಹೆಚ್ಚು ಸಕ್ಷಮವಾಗಿರುತ್ತದೆ.

ಪ್ರಕ್ರಿಯೆಯ ಸ್ಟಾಕ್ ಅನ್ನು 8KB ಇಂದ 16KB ಗೆ ಹೆಚ್ಚಿಸಲಾಗಿದೆ

Red Hat Enterprise Linux 7.1 ರ ನಂತರ, ಕರ್ನಲ್ ಪ್ರಕ್ರಿಯೆಯ ಸ್ಟಾಕ್ ಗಾತ್ರವನ್ನು ಸ್ಟಾಕ್ ಸ್ಥಳವನ್ನು ಬಳಸುವ ದೊಡ್ಡ ಪ್ರಕ್ರಿಯೆಗಳಿಗೆ ನೆರವಾಗುವಂತೆ 8KB ಇಂದ 16KB ಗೆ ಹೆಚ್ಚಿಸಲಾಗಿದೆ .

uprobe ಮತ್ತು uretprobe ಸೌಲಭ್ಯಗಳನ್ನು perf ಮತ್ತು systemtap ನಲ್ಲಿ ಸಕ್ರಿಯಗೊಳಿಸಲಾಗಿದೆ

Red Hat Enterprise Linux 7.1 ರ ನಂತರ, uprobe ಮತ್ತು uretprobe ಸೌಲಭ್ಯಗಳು perf ಆದೇಶ ಮತ್ತು systemtap ಸ್ಕ್ರಿಪ್ಟ್‌ನೊಂದಿಗೆ ಸರಿಯಾಗಿ ಕೆಲಸ ಮಾಡುತ್ತದೆ.

ತುದಿಯಿಂದ-ತುದಿಯ ದತ್ತಾಂಶ ಸ್ಥಿರತೆಯ ಪರಿಶೀಲನೆ

IBM System z ನಲ್ಲಿ ಎಂಡ್-ಟು-ಎಂಡ್ ದತ್ತಾಂಶ ಸ್ಥಿರತೆಯ ಪರಿಶೀಲನೆಯನ್ನು Red Hat Enterprise Linux 7.1 ರಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ. ಇದು ದತ್ತಾಂಶದ ಸಮಗ್ರತೆಯನ್ನು ಸುಧಾರಿಸುತ್ತದೆ ಮತ್ತು ದತ್ತಾಂಶ ಹಾಳಾಗದಂತೆ ಹಾಗೂ ದತ್ತಾಂಶವು ನಷ್ಟಗೊಳ್ಳದಂತೆ ಹೆಚ್ಚು ಪರಿಣಾಮಕಾರಿಯಾಗಿ ತಡೆಯುತ್ತದೆ.

32-ಬಿಟ್‌ ವ್ಯವಸ್ಥೆಯಲ್ಲಿ DRBG

Red Hat Enterprise Linux 7.1 ರಲ್ಲಿ, ಡಿಟರ್ಮಿನಿಸ್ಟಿಕ್ ರಾಂಡಮ್ ಬಿಟ್ ಜನರೇಟರ್ (DRBG) ಅನ್ನು 32-ವ್ಯವಸ್ಥೆಗಳಲ್ಲಿ ಕೆಲಸ ಮಾಡುವಂತೆ ಅಪ್‌ಡೇಟ್ ಮಾಡಲಾಗಿದೆ.

ದೊಡ್ಡದಾದ ಕ್ರಾಶ್‌ಕರ್ನಲ್ ಗಾತ್ರಗಳಿಗಾಗಿ ಬೆಂಬಲ ನೀಡುತ್ತದೆ

ದೊಡ್ಡದಾದ (4TB ಗಿಂತಲೂ ಹೆಚ್ಚಿನ) ಮೆಮೊರಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ Kdump ಕರ್ನಲ್ ಡಂಪ್ ಮಾಡುವ ವ್ಯವಸ್ಥೆಯನ್ನು Red Hat Enterprise Linux 7.1 ರಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

ಅಧ್ಯಾಯ 6. ವರ್ಚುವಲೈಸೇಶನ್

KVM ನಲ್ಲಿ ಹೆಚ್ಚಿಸಲಾದ ಗರಿಷ್ಟ vCPU ಗಳ ಸಂಖ್ಯೆ

ಒಂದು KVM ಅತಿಥಿಯಲ್ಲಿ ಬೆಂಬಲಿಸಲಾಗುವ ಗರಿಷ್ಟ ವರ್ಚುವಲ್ CPUಗಳ (vCPUಗಳ) ಸಂಖ್ಯೆಯನ್ನು 240 ಗೆ ಹೆಚ್ಚಿಸಲಾಗಿದೆ. ಇದು ಅತಿಥಿಗೆ ಒಬ್ಬ ಬಳಕೆದಾರನು ನಿಯೋಜಿಸುವ ವರ್ಚುವಲ್ ಪ್ರೊಸೆಸಿಂಗ್ ಯುನಿಟ್‌ಗಳ ಪ್ರಮಾಣಗಳನ್ನು ಹೆಚ್ಚಿಸುತ್ತದೆ, ಮತ್ತು ಆದ್ದರಿಂದ ಅದರ ಕಾರ್ಯನಿರ್ವಹಣೆಯ ಸಾಮರ್ಥ್ಯವು ಸುಧಾರಿಸುತ್ತದೆ.

QEMU, KVM, ಮತ್ತು libvirt API ನಲ್ಲಿ 5th ಜನರೇಶನ್ Intel Core ನ್ಯೂ ಇನ್‌ಸ್ಟ್ರಕ್ಶನ್ ಬೆಂಬಲ

Red Hat Enterprise Linux 7.1 ರಲ್ಲಿ, 5th ಜನರೇಶನ್ Intel Core ಸಂಸ್ಕಾರಕಗಳಿಗಾಗಿನ ಬೆಂಬಲವನ್ನು QEMU ಹೈಪರ್ವೈಸರ್, KVM ಕರ್ನಲ್ ಕೋಡ್, ಮತ್ತು libvirt API ಗೆ ಸೇರಿಸಲಾಗಿದೆ. ಇದರಿಂದಾಗಿ KVM ಈ ಕೆಳಗಿನ ಸೂಚನೆಗಳು ಮತ್ತು ಸೌಲಭ್ಯಗಳನ್ನು ಬಳಸಲು ಅವಕಾಶವಿರುತ್ತದೆ: ADCX, ADOX, RDSFEED, PREFETCHW, ಮತ್ತು ಸೂಪರ್ವಿಶನ್ ಮೋಡ್ ಎಕ್ಸೆಸ್ ಪ್ರಿವೆಂಶನ್ (SMAP).

KVM ಅತಿಥಿಗಳಿಗೆ USB 3.0 ಬೆಂಬಲ

Red Hat Enterprise Linux 7.1 ರಲ್ಲಿ USB 3.0 ಹೋಸ್ಟ್‌ಅಡಾಪ್ಟರ್ (xHCI) ಎಮ್ಯುಲೇಶನ್ ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸುವ ಮೂಲಕ ಸುಧಾರಿತ USB ಬೆಂಬಲವನ್ನು ಹೊಂದಿರುತ್ತದೆ.

dump-guest-memory ಆದೇಶಕ್ಕಾಗಿನ ಸಂಕುಚನ

Red Hat Enterprise Linux 7.1 ರಲ್ಲಿ, dump-guest-memory ಆದೇಶವು ಕ್ರಾಶ್ ಡಂಪ್ ಸಂಕುಚನವನ್ನು ಬೆಂಬಲಿಸುತ್ತದೆ. ಇದರಿಂದಾಗಿ ಅತಿಥಿ ಕ್ರಾಶ್ ಡಂಪ್‌ಗಾಗಿ ಕಡಿಮೆ ಹಾರ್ಡ್ ಡ್ರೈವ್ ಅನ್ನು ಬಳಕೆದಾರರು virsh dump ಚಲಾಯಿಸಲು ಸಾಧ್ಯವಾಗದೆ ಇದ್ದಾಗ ಸಹಾಯವಾಗುತ್ತದೆ. ಇದರ ಜೊತೆಗೆ, ಪದೇ ಪದೆ ಸಂಕುಚನಗೊಳಿಸಲಾದ ಅತಿಥಿ ಕ್ರಾಶ್ ಡಂಪ್ ಅನ್ನು ಉಳಿಸುವುದು ಸಂಕುಚನಗೊಳಿಸದೆ ಇರುದುದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಓಪನ್ ವರ್ಚುವಲ್ ಮೆಶೀನ್ ಫರ್ಮ್‌ವೇರ್

ಓಪನ್ ವರ್ಚುವಲ್ ಮೆಶೀನ್ ಫರ್ಮ್‌ವೇರ್ (OVMF) Red Hat Enterprise Linux 7.1 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಲಭ್ಯವಿದೆ. OVMF ಯು AMD64 ಮತ್ತು Intel 64 ಅತಿಥಿಗಳಿಗಾಗಿ ಒಂದು UEFI ಸುರಕ್ಷಿತ ಬೂಟ್ ಪರಿಸರವಾಗಿದೆ.

ಹೈಪರ್-V ಯಲ್ಲಿ ಸುಧಾರಿತ ಜಾಲಬಂಧ ಕಾರ್ಯನಿರ್ವಹಣೆ

ಜಾಲಬಂಧ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಹೈಪರ್-V ಜಾಲಬಂಧ ಚಾಲಕದ ಹಲವಾರು ಸೌಲಭ್ಯಗಳಿಗೆ ಬೆಂಬಲ ನೀಡಲಾಗುತ್ತೆ. ಉದಾಹರಣೆಗೆ, ರಿಸೀವ್-ಸೈಡ್ ಸ್ಕೇಲಿಂಗ್, ಲಾರ್ಜ್ ಸೆಂಡ್ ಆಫ್‌ಲೋಡ್, ಸ್ಕ್ಯಾಟರ್/ಗ್ಯಾದರ್ I/O ಗೆ ಈಗ ಬೆಂಬಲಿಸಲಾಗುತ್ತದೆ, ಮತ್ತು ಜಾಲಬಂಧ ತ್ರೂಪುಟ್ ಅನ್ನು ಹೆಚ್ಚಿಸಲಾಗುತ್ತದೆ.

hyperv-ಡೀಮನ್‌ಗಳಲ್ಲಿ hypervfcopyd

hypervfcopyd ಡೀಮನ್ ಅನ್ನು hyperv-ಡೀಮನ್ಸ್ ಪ್ಯಾಕೇಜುಗಳಿಗೆ ಸೇರಿಸಲಾಗಿದೆ. hypervfcopyd ಎನ್ನುವುದು Hyper-V 2012 R2 ಆತಿಥೇಯದಲ್ಲಿ ಚಲಾಯಿತಗೊಳ್ಳುವ ಲಿನಕ್ಸ್ ಅತಿಥಿಗಾಗಿನ ಕಡತ ಪ್ರತಿ ಮಾಡುವ ಸೇವೆಯ ಅಳವಡಿಕೆಯಾಗಿದೆ. ಇದು ಒಂದು ಕಡತದ (VMBUS ಮುಖಾಂತರ) ಲಿನಕ್ಸ್ ಅತಿಥಿಗೆ ಪ್ರತಿ ಮಾಡಲು ಆತಿಥೇಯವನ್ನು ಸಕ್ರಿಯಗೊಳಿಸುತ್ತದೆ.

libguestfs ನಲ್ಲಿನ ಹೊಸ ಸೌಲಭ್ಯಗಳು

Red Hat Enterprise Linux 7.1, libguestfsನಲ್ಲಿ ಹಲವಾರು ದೊಡ್ಡ ಸಂಖ್ಯೆಯ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತದೆ, ವರ್ಚುವಲ್ ಗಣಕದ ಡಿಸ್ಕ್ ಚಿತ್ರಿಕೆಗಳನ್ನು ನಿಲುಕಿಸಿಕೊಳ್ಳುವ ಮತ್ತು ಮಾರ್ಪಡಿಸುವುದಕ್ಕಾಗಿನ ಉಪಕರಣಗಳ ಸಂಗ್ರಹಗಳನ್ನು ಒದಗಿಸುತ್ತದೆ.
ಹೊಸ ಉಪಕರಣಗಳು
  • virt-builder — ವರ್ಚುವಲ್ ಗಣಕದ ಚಿತ್ರಿಕೆಗಳನ್ನು ನಿರ್ಮಿಸುವುದಕ್ಕಾಗಿನ ಒಂದು ಹೊಸ ಉಪಕರಣ. ಅತಿಥಿಗಳನ್ನು ಸುರಕ್ಷಿತವಾಗಿ ರಚಿಸಲು ಮತ್ತು ಅಗತ್ಯಾನುಗುಣಗೊಳಿಸಲು virt-builder ಅನ್ನು ಬಳಸಿ.
  • virt-customize — ವರ್ಚುವಲ್ ಗಣಕದ ಡಿಸ್ಕ್ ಚಿತ್ರಿಕೆಗಳನ್ನು ಅಗತ್ಯಾನುಗುಣಗೊಳಿಸುವುದಕ್ಕಾಗಿ ಒಂದು ಹೊಸ ಉಪಕರಣ. ಪ್ಯಾಕೇಜುಗಳನ್ನು ಅನುಸ್ಥಾಪಿಸಲು, ಸಂರಚನಾ ಕಡತಗಳನ್ನು ಸಂಪಾದಿಸಲು, ಸ್ಕ್ರಿಪ್ಟ್‌ಗಳನ್ನು ಚಲಾಯಿಸಲು, ಮತ್ತು ಗುಪ್ತಪದಗಳನ್ನು ಹೊಂದಿಸಲು virt-customize ಅನ್ನು ಬಳಸಿ.
  • virt-diff — ಎರಡು ವರ್ಚುವಲ್ ಗಣಕಗಳ ಕಡತ ವ್ಯವಸ್ಥೆಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಕ್ಕಾಗಿನ ಒಂದು ಹೊಸ ಉಪಕರಣ. ಸ್ನ್ಯಾಪ್‌ಶಾಟ್‌ಗಳ ನಡುವೆ ಯಾವ ಕಡತಗಳನ್ನು ಬದಲಾಯಿಸಲಾಗಿದೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಲು virt-diff ಅನ್ನು ಬಳಸಿ.
  • virt-log — ಅತಿಥಿಗಳಿಂದ ಲಾಗ್ ಕಡತಗಳನ್ನು ಪಟ್ಟಿ ಮಾಡುವ ಒಂದು ಹೊಸ ಉಪಕರಣ. virt-log ಉಪಕರಣವು ಸಾಂಪ್ರದಾಯಿಕ Linux, ಜರ್ನಲ್‌ ಬಳಸುವ Linux, ಮತ್ತು Windows ಇವೆಂಟ್ ಲಾಗ್‌ ಸಹ ಸೇರಿದಂತೆ ವಿವಿಧ ಅತಿಥಿಗಳನ್ನು ಬೆಂಬಲಿಸುತ್ತದೆ.
  • virt-v2v — libvirt, OpenStack, oVirt, Red Hat Enterprise Virtualization (RHEV), ಮತ್ತು ಹಲವಾರು ಇತರೆ ಗುರಿಗಳಿಂದ ನೋಡಿಕೊಳ್ಳಲಾಗುವ ಒಂದು ಹೊರಗಿನ ಹೈಪರ್ವೈಸರ್‌ನಿಂದ ಅತಿಥಿಗಳನ್ನು KVM ಚಲಾಯಿತಗೊಳ್ಳುವಂತೆ ಪರಿವರ್ತಿಸುವ ಹೊಸ ಉಪಕರಣವಾಗಿದೆ. virt-v2v ಪ್ರಸಕ್ತ, Xen ಮತ್ತು VMware ESX ನಲ್ಲಿ ಚಲಾಯಿತಗೊಳ್ಳುವ Red Hat Enterprise Linux ಮತ್ತು Windows ಅತಿಥಿಗಳನ್ನು ಪರಿವರ್ತಿಸಬಲ್ಲದು.

virtio-blk-data-plane ಬಳಸಿಕೊಂಡು ಸುಧಾರಿತ ಬ್ಲಾಕ್ I/O ಕಾರ್ಯನಿರ್ವಹಣೆ

Red Hat Enterprise Linux 7.1 ರಲ್ಲಿ, virtio-blk-data-plane I/O ವರ್ಚುವಲೈಸೇಶನ್ ಕಾರ್ಯಶೀಲತೆಯು ಸಂಪೂರ್ಣವಾಗಿ ಬೆಂಬಲಿತವಾಗಿದೆ . ಈ ಕ್ರಿಯಾಶೀಲತೆಯನ್ನು I/O ಕಾರ್ಯನಿರ್ವಹಣೆಗಾಗಿ ಸೂಕ್ತಗೊಳಿಸಲಾದ ಒಂದು ಮೀಸಲಾದ ತ್ರೆಡ್‌ನಲ್ಲಿ ಡಿಸ್ಕ್ I/O ಅನ್ನು ನಿರ್ವಹಿಸಲು QEMU ಗೆ ವಿಸ್ತರಿಸಲಾಗಿದೆ.

ಫ್ಲೈಟ್ ರೆಕಾರ್ಡ್ ಟ್ರೇಸಿಂಗ್

SystemTap-ಆಧರಿತವಾದ ಟ್ರೇಸಿಂಗ್ ಅನ್ನು Red Hat Enterprise Linux 7.1 ರಲ್ಲಿ ಪರಿಚಯಿಸಲಾಗಿದೆ. SystemTap-ಆಧರಿತವಾದ ಟ್ರೇಸಿಂಗ್‌ ಅತಿಥಿ ಗಣಕವು ಚಲಾಯಿತಗೊಳ್ಳುವವರೆಗೆ ಸ್ವಯಂಚಾಲಿತವಾಗಿ qemu-kvm ದತ್ತಾಂಶವನ್ನು ಪಡೆದುಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದು qemu-kvm ಕೋರ್ ಡಂಪ್‌ಗಳಿಗಿಂತ ಸುಲಭವಾಗಿ ಹೊಂದಿಕೊಳ್ಳುವ qemu-kvm ತೊಂದರೆಗಳನ್ನು ಪತ್ತೆ ಹಚ್ಚುವ ಹೆಚ್ಚುವರಿ ಮಾರ್ಗವನ್ನು ಒದಗಿಸುತ್ತದೆ.
ಫ್ಲೈಟ್ ರೆಕಾರ್ಡರ್ ಟ್ರೇಸಿಂಗ್ ಅನ್ನು ಹೇಗೆ ಸಂರಚಿಸುವುದು ಮತ್ತು ಬಳಸುವುದು ಎಂಬುದರ ಬಗೆಗಿನ ವಿವರವಾದ ಸೂಚನೆಗಳಿಗಾಗಿ Virtualization Deployment and Administration Guide ಅನ್ನು ನೋಡಿ.

NUMA ನೋಡ್ ಮೆಮೊರಿ ನಿಯೋಜನಾ ನಿಯಂತ್ರಣ

libvirtನ ಡೊಮೇನ್ XML ಸಂರಚನೆಯಲ್ಲಿನ <memtune> ಸಿದ್ಧತೆಗಾಗಿ <numanode> ಅನ್ನು ಸೇರಿಸಲಾಗಿದೆ. ಇದು ಅತಿಥಿ ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ಪ್ರತಿ ನಾನ್-ಯುನಿಫಾರ್ಮ್ ಮೆಮೊರಿ ಎಕ್ಸೆಸ್‌ಗಾಗಿನ (NUMA) ಮೆಮೊರಿ ನಿರ್ಬಂಧಗಳನ್ನು ನಿಯಂತ್ರಿಸಲು ಬಳಕೆದಾರರಿಗೆ ನೆರವಾಗುತ್ತದೆ, ಇದು qemu-kvm ಗಾಗಿನ ಕಾರ್ಯನಿರ್ವಹಣೆ ಸರಿಪಡಿಸುವಿಕೆಯನ್ನು ಅನುಮತಿಸುತ್ತದೆ.

ಅಧ್ಯಾಯ 7. ಕ್ಲಸ್ಟರಿಂಗ್

Corosync ಗಾಗಿ ಡೈನಮಿಕ್ ಟೋಕನ್ ಕಾಲಾವಧಿ ತೀರಿಕೆ

token_coefficient ಆಯ್ಕೆಯನ್ನು Corosync Cluster Engineಗೆ ಸೇರಿಸಲಾಗಿದೆ. nodelist ವಿಭಾಗವನ್ನು ಸೂಚಿಸಲಾದಲ್ಲಿ ಮಾತ್ರ token_coefficientನ ಮೌಲ್ಯವನ್ನು ಬಳಸಲಾಗುತ್ತದೆ ಮತ್ತು ಕನಿಷ್ಟ ಮೂರು ನೋಡ್‌ಗಳನ್ನು ಮಾತ್ರ ಹೊಂದಿರುತ್ತದೆ. ಅಂತಹ ಸನ್ನಿವೇಶದಲ್ಲಿ, ಟೋಕನ್ ಕಾಲಾವಧಿ ತೀರಿಕೆಯನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:
[token + (amount of nodes - 2)] * token_coefficient
ಒಂದು ಹೊಸ ನೋಡ್ ಅನ್ನು ಪ್ರತಿ ಬಾರಿಯೂ ಸಹ ಸೇರಿಸಿದಾಗ ಟೋಕನ್‌ ಕಾಲಾವಧಿ ತೀರಿಕೆಯನ್ನು ಕೈಯಾರೆ ಬದಲಾಯಿಸದೆ ಗಾತ್ರವನ್ನು ಬದಲಿಸಲು ಕ್ಲಸ್ಟರ್‌ಗೆ ಅವಕಾಶವನ್ನು ನೀಡುತ್ತದೆ. ಪೂರ್ವನಿಯೋಜಿತ ಮೌಲ್ಯವು 650 ಮಿಲಿಸೆಕೆಂಡುಗಳಾಗಿರುತ್ತವೆ, ಆದರೆ ಅದನ್ನು 0 ಗೆ ಹೊಂದಿಸಲು ಸಾಧ್ಯವಿರುತ್ತದೆ, ಇದರಿಂದಾಗಿ ಈ ಸೌಲಭ್ಯವನ್ನು ತೆಗೆದುಹಾಕಿದಂತಾಗುತ್ತದೆ.
ಈ ಸೌಲಭ್ಯವು ನೋಡ್‌ಗಳನ್ನು ಕ್ರಿಯಾತ್ಮಕವಾಗಿ ಸೇರಿಸಲು ಮತ್ತು ತೆಗೆದುಹಾಕಲು Corosyncಗೆ ಅವಕಾಶ ನೀಡುತ್ತದೆ.

Corosync ಟೈ ಬ್ರೇಕರ್ ಸುಧಾರಣೆ

Corosyncauto_tie_breakerಕೋರಮ್ ಸೌಲಭ್ಯವನ್ನು ಹೆಚ್ಚು ಸುಲಲಿತವಾದಂತಹ ಸಂರಚನೆಗಾಗಿ ಮತ್ತು ಟೈ ಬ್ರೇಕರ್‌ ನೋಡ್‌ಗಳ ಮಾರ್ಪಡಣೆಗಾಗಿ ಆಯ್ಕೆಗಳನ್ನು ಒದಗಿಸಲು ಸುಧಾರಿಸಲಾಗಿದೆ. ಬಳಕೆದಾರರು ಈಗ ಒಂದು ಸರಿಸಂಖ್ಯೆಯ ಕ್ಲಸ್ಟರ್‌ ವಿಭಜನೆಗೆ ಸಂದರ್ಭದಲ್ಲಿ ಒಂದು ಕೋರಮ್ ಅನ್ನು ಉಳಿಸುವ ನೋಡ್‌ಗಳ ಪಟ್ಟಿಯಿಂದ ಒಂದನ್ನು ಆರಿಸಬಹುದು, ಅಥವ ಅತ್ಯಂತ ಕೆಳಮಟ್ಟದ ನೋಡ್ ID ಅಥವ ಅತ್ಯಂತ ಮೇಲ್ಮಟ್ಟದ ನೋಡ್‌ ID ಯನ್ನು ಹೊಂದಿರುವ ನೋಡ್‌ಗಳಿಂದ ಉಳಿಸಿಕೊಳ್ಳಲಾಗುವಂತೆ ಆರಿಸಬಹುದು.

Red Hat ಹೈ ಅವೆಲಿಬಿಲಿಟಿಯಲ್ಲಿ ಸುಧಾರಣೆಗಳು

Red Hat Enterprise Linux 7.1 ಬಿಡುಗಡೆಗಾಗಿ, Red Hat High Availability Add-On ಈ ಕೆಳಗಿನ ಸೌಲಭ್ಯಗಳನ್ನು ಬೆಂಬಲಿಸುತ್ತದೆ. ಈ ಸೌಲಭ್ಯಗಳ ಕುರಿತಾದ ಮಾಹಿತಿಗಾಗಿ, High Availability Add-On Reference ಕೈಪಿಡಿಯನ್ನು ನೋಡಿ.
  • pcs resource cleanup ಆದೇಶವು ಈಗ ಎಲ್ಲಾ ಸಂಪನ್ಮೂಲಗಳನ್ನು, ಮತ್ತು ಸಂಪನ್ಮೂಲದ ಸ್ಥಿತಿಯನ್ನು ಮರಳಿಹೊಂದಿಸಲು ಶಕ್ತವಾಗಿರುತ್ತದೆ.
  • ನೀವು ಒಂದು pcs resource move ಆದೇಶವು ರಚಿಸುವ ಸಂಪನ್ಮೂಲ ನಿರ್ಬಂಧವು ಯಾವ ಸಮಯದವರೆಗೆ ಪರಿಣಾಮಕಾರಿಯಾಗಿರುತ್ತದೆ ಎನ್ನುವುದನ್ನು lifetime ನಿಯತಾಂಕವನ್ನು ಬಳಸುವ ಮೂಲಕ ಸೂಚಿಸಬಹುದು.
  • pcs acl ಆದೇಶವನ್ನು ಬಳಸಿಕೊಂಡು ಎಕ್ಸೆಸ್ ಕಂಟ್ರೋಲ್ ಲಿಸ್ಟ್ (ACLs) ಮುಖಾಂತರ ಸ್ಥಳೀಯ ಬಳಕೆದಾರರಿಗೆ ಕ್ಲಸ್ಟರ್‌ ಸಂರಚನೆಯನ್ನು ಓದಲು-ಮಾತ್ರವಾದ ಅಥವ ಓದು-ಬರೆಯುವ (ರೀಡ್-ರೈಟ್) ಅನುಮತಿಗಳನ್ನು ಹೊಂದಿಸಬಹುದು.
  • pcs constraint ಆದೇಶವು ಈಗ ಸಾಮಾನ್ಯ ಆಯ್ಕೆಗಳ ಜೊತೆಗೆ ನಿಶ್ಚಿತ ನಿರ್ಬಂಧ ಆಯ್ಕೆಗಳನ್ನೂ ಸಹ ಬೆಂಬಲಿಸುತ್ತದೆ.
  • ರಚಿಸಲಾಗುತ್ತಿರುವ ಸಂಪನ್ಮೂಲವನ್ನು ಸ್ವಯಂಚಾಲಿತವಾಗಿ ಆರಂಭಿಸಲಾಗುವುದಿಲ್ಲ ಎಂಬುದನ್ನು ಸೂಚಿಸಲು pcs resource create ಆದೇಶವುdisabled ನಿಯತಾಂಕವನ್ನು ಬಳಸುವುದನ್ನು ಬೆಂಬಲಿಸುತ್ತದೆ.
  • pcs cluster quorum unblock ಆದೇಶವು ಒಂದು ಕೋರಮ್ ಅನ್ನು ಸಾಧಿಸುವಾಗ ಕ್ಲಸ್ಟರ್ ಎಲ್ಲಾ ನೋಡ್‌ಗಳಿಗಾಗಿ ಕಾಯುವುದನ್ನು ತಪ್ಪಿಸುತ್ತದೆ.
  • ನೀವು pcs resource create ಆದೇಶದಲ್ಲಿನ before ಮತ್ತು after ನಿಯತಾಂಕಗಳನ್ನು ಬಳಸಿಕೊಂಡು ಸಂಪನ್ಮೂಲ ಗುಂಪಿನ ಕ್ರಮವನ್ನು ಸಂರಚಿಸಬಹುದು.
  • ನೀವು ಕ್ಲಸ್ಟರ್ ಸಂರಚನೆಯನ್ನು ಒಂದು ಟಾರ್‌ಬಾಲ್‌ನಲ್ಲಿ ಬ್ಯಾಕ್ಅಪ್ ಮಾಡಬಹುದು ಮತ್ತು pcs config ಆದೇಶದಲ್ಲಿನ backup ಮತ್ತು restore ಆಯ್ಕೆಗಳನ್ನು ಬಳಸಿಕೊಂಡು ಬ್ಯಾಕ್‌ಅಪ್‌ನಿಂದ ಎಲ್ಲಾ ನೋಡ್‌ಗಳಲ್ಲಿನ ಕ್ಲಸ್ಟರ್ ಸಂರಚನೆಯ ಕಡತಗಳನ್ನು ಮರಳಿಸ್ಥಾಪಿಸಬಹುದು.

ಅಧ್ಯಾಯ 8. ಕಂಪೈಲರ್ ಹಾಗು ಉಪಕರಣಗಳು

System z ಬೈನರಿಗಳಲ್ಲಿನ ಲಿನಕ್ಸ್‌ಗಾಗಿ ಹಾಟ್‌-ಪ್ಯಾಚ್‌ ಮಾಡುವಿಕೆಯ ಬೆಂಬಲ

GNU ಕಂಪೈಲರ್ ಕಲೆಕ್ಶನ್‌ (GCC) System z ಬೈನರಿಗಳಲ್ಲಿ ಲಿನಕ್ಸ್‌ಗಾಗಿ ಮಲ್ಟಿ-ತ್ರೆಡ್‌ ಮಾಡಲಾದ ಕೋಡ್‌ನ ಆನ್‌-ಲೈನ್‌ ಪ್ಯಾಚ್‌ ಮಾಡುವಿಕೆಗೆ ಬೆಂಬಲವನ್ನು ಅಳವಡಿಸುತ್ತದೆ. ಹಾಟ್‌-ಪ್ಯಾಚ್‌ ಮಾಡುವುದಕ್ಕಾಗಿ ನಿಶ್ಚಿತ ಕ್ರಿಯೆಗಳನ್ನು ಆರಿಸುವುದನ್ನು "function attribute" ಬಳಸುವ ಮೂಲಕ ಸಕ್ರಿಯಗೊಳಿಸಬಹುದಾಗಿರುತ್ತದೆ ಮತ್ತು -mhotpatch ಆದೇಶ-ಸಾಲಿನ ಆಯ್ಕೆಯನ್ನು ಬಳಸಿಕೊಂಡು ಎಲ್ಲಾ ಕ್ರಿಯೆಗಳಿಗಾಗಿ ಹಾಟ್‌-ಪ್ಯಾಚ್ ಮಾಡುವಿಕೆಯನ್ನು ಸಕ್ರಿಯಗೊಳಿಸಬಹುದು.
ಹಾಟ್-ಪ್ಯಾಚ್‌ ಮಾಡುವುದನ್ನು ಸಕ್ರಿಯಗೊಳಿಸುವುದರಿಂದ ತಂತ್ರಾಂಶದ ಗಾತ್ರ ಮತ್ತು ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಎಲ್ಲಾ ಕ್ರಿಯೆಗಳಿಗೆ ಹಾಟ್-ಪ್ಯಾಚ್‌ ಮಾಡುವುದಕ್ಕೆ ಬೆಂಬಲವನ್ನು ಸಕ್ರಿಯಗೊಳಿಸುವುದರ ಬದಲಿಗೆ ಹಾಟ್‌-ಪ್ಯಾಚ್‌ ಮಾಡುವಿಕೆಯನ್ನು ನಿಶ್ಚಿತ ಕ್ರಿಯೆಗಳಿಗೆ ಮಾತ್ರ ಬಳಸಬೇಕು ಎಂದು ಸಲಹೆ ಮಾಡಲಾಗುತ್ತದೆ.
System z ಬೈನರಿಗಳಲ್ಲಿ ಲಿನಕ್ಸ್‌ಗಾಗಿ ಹಾಟ್‌-ಪ್ಯಾಚ್‌ ಮಾಡುವಿಕೆಯ ಬೆಂಬಲವನ್ನು Red Hat Enterprise Linux 7.0 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿತ್ತು. Red Hat Enterprise Linux 7.1 ಬಿಡುಗಡೆಯಲ್ಲಿ ಈಗ ಅದನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

ಪರ್ಫಾಮೆನ್ಸ್‍ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್‌ನಲ್ಲಿ (PAPI) ಸುಧಾರಣೆ

Red Hat Enterprise Linux 7 ರಲ್ಲಿ ಪರ್ಫಾಮೆನ್ಸ್‍ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (PAPI) ಅನ್ನು ಪರಿಚಯಿಸಲಾಗುತ್ತಿದೆ. PAPI ಎನ್ನುವುದು ಆಧುನಿಕ ಮೈಕ್ರೊಪ್ರೊಸೆಸರುಗಳಲ್ಲಿನ ಯಂತ್ರಾಂಶ ಕಾರ್ಯನಿರ್ವಹಣೆ ಕೌಂಟರಿನ ಕ್ರಾಸ್‌-ಪ್ಲಾಟ್‌ಫಾರ್ಮ್ ಸಂಪರ್ಕಸಾಧನಗಳಿಗಾಗಿ ಗುಣನಿಶ್ಚಯವಾಗಿದೆ. ಈ ಕೌಂಟರುಗಳು ಘಟನೆಗಳನ್ನು ಎಣಿಸುವ ಸಣ್ಣ ರಿಜಸ್ಟರುಗಳ ರೂಪದಲ್ಲಿ ಇದ್ದು, ಇದು ಸಂಸ್ಕಾರಕದ ಕಾರ್ಯಕ್ಕೆ ಸಂಬಂಧಿಸಿದ ನಿಶ್ಚಿತ ಸಂಕೇತಗಳು ಕಾಣಿಸುವಿಕೆಯಾಗಿರುತ್ತದೆ. ಈ ಘಟನೆಗಳ ಮೇಲ್ವಿಚಾರಣೆ ನಡೆಸುವುದು ಅನ್ವಯದ ಕಾರ್ಯನಿರ್ವಹಣೆ ಹಾಗು ಟ್ಯೂನಿಂಗ್ ಅನ್ನು ವಿಶ್ಲೇಷಿಸುವಲ್ಲಿ ಇದು ಅನೇಕ ಪ್ರಯೋಜನವನ್ನು ನೀಡುತ್ತದೆ.
Red Hat Enterprise Linux 7.1 ನಲ್ಲಿ PAPI ಮತ್ತು ಸಂಬಂಧಿತ libpfm ಲೈಬ್ರರಿಗಳನ್ನು IBM Power 8, Applied Micro X-Gene, ARM Cortex A57, ಮತ್ತು ARM Cortex A53 ಸಂಸ್ಕಾರಕಗಳಿಗಾಗಿ ಬೆಂಬಲವನ್ನು ಒದಗಿಸುವಂತೆ ಸುಧಾರಿಸಲಾಗಿದೆ. ಇದರ ಜೊತೆಗೆ, Intel Haswell, Ivy Bridge, ಮತ್ತು Sandy Bridge ಸಂಸ್ಕಾರಕಗಳಿಗಾಗಿ ಇವೆಂಟ್‌ಗಳ ಸಮೂಹಗಳನ್ನು ಅಪ್‌ಡೇಟ್ ಮಾಡಲಾಗಿದೆ.

OProfile

OProfile ಎನ್ನುವುದು ಲಿನಕ್ಸ್ ವ್ಯವಸ್ಥೆಗಳಿಗಾಗಿನ ವ್ಯವಸ್ಥೆಯಾದ್ಯಂತದ ಪ್ರೊಫೈಲರ್ ಆಗಿರುತ್ತದೆ. ಪ್ರೊಫೈಲಿಂಗ್ ಹಿನ್ನಲೆಯಲ್ಲಿ ಪಾರದರ್ಶಕವಾಗಿ ಚಲಾಯಿಸಲ್ಪಡುತ್ತದೆ ಹಾಗು ಪ್ರೊಫೈಲ್ ದತ್ತಾಂಶವು ಯಾವುದೆ ಸಂದರ್ಭದಲ್ಲಿ ಸಂಗ್ರಹಿಸಬಹುದಾಗಿರುತ್ತದೆ. Red Hat Enterprise Linux 7.1 ರಲ್ಲಿ, ಈ ಕೆಳಗಿನ ಸಂಸ್ಕಾರಕ ಕುಟುಂಬಗಳಿಗೆ ಬೆಂಬಲವನ್ನು ಒದಗಿಸುವಂತೆ OProfile ಅನ್ನು ಉತ್ತಮಗೊಳಿಸಲಾಗಿದೆ: Intel Atom Processor C2XXX, 5th Generation Intel Core Processors, IBM Power8, AppliedMicro X-Gene, ಮತ್ತು ARM Cortex A57.

OpenJDK8

ಒಂದು ತಂತ್ರಜ್ಞಾನ ಮುನ್ನೋಟವಾಗಿ, Red Hat Enterprise Linux 7.1 ರಲ್ಲಿ java-1.8.0-openjdk ಪ್ಯಾಕೇಜುಗಳನ್ನು ಹೊಂದಿವೆ, ಇದು ಅತ್ಯಂತ ಇತ್ತೀಚಿನ Open Java Development Kit (OpenJDK), OpenJDK8 ಆವೃತ್ತಿಗಳನ್ನು ಹೊಂದಿದೆ. ಈ ಪ್ಯಾಕೇಜುಗಳು ಸಂಪೂರ್ಣ ಹೊಂದಿಕೆಯಾಗುವ Java SE 8 ಅಳವಡಿಕೆಯನ್ನು ಹೊಂದಿದೆ ಮತ್ತು ಅದನ್ನು Red Hat Enterprise Linux 7.1 ರಲ್ಲಿ ಲಭ್ಯವಿರುವ ಈಗಿರುವ java-1.7.0-openjdk ಪ್ಯಾಕೇಜುಗಳೊಂದಿಗೆ ಬಳಸಬಹುದು.
Lambda expressions, ಪೂರ್ವನಿಯೋಜಿತ ವಿಧಾನಗಳು, ಸಂಗ್ರಹಗಳಿಗಾಗಿ ಒಂದು ಹೊಸ Stream API, JDBC 4.2, ಯಂತ್ರಾಂಶ AES ಬೆಂಬಲ, ಮತ್ತು ಇನ್ನೂ ಹೆಚ್ಚಿನವುಗಳಂತಹ ಹೊಸ ಸುಧಾರಣೆಗಳನ್ನು Java 8 ರಲ್ಲಿ ಸೇರಿಸಲಾಗಿದೆ. ಇವುಗಳ ಜೊತೆಗೆ, OpenJDK8 ಹಲವಾರು ಇತರೆ ಕಾರ್ಯನಿರ್ವಹಣಾ ಅಪ್‌ಡೇಟ್‌ಗಳನ್ನು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತದೆ.

snap ಅನ್ನು sosreport ನಿಂದ ಬದಲಾಯಿಸಲಾಗಿದೆ

ಬಳಕೆಯಲ್ಲಿ ಇರದ snap ಉಪಕರಣವನ್ನು powerpc-utils ಪ್ಯಾಕೇಜಿನಿಂದ ತೆಗೆದುಹಾಕಲಾಗಿದೆ. ಇದರ ಕ್ರಿಯಾಶೀಲತೆಯನ್ನು sosreport ಉಪಕರಣದೊಂದಿಗೆ ಸೇರಿಸಲಾಗಿದೆ.

ಲಿಟಲ್-ಎಂಡಿಯನ್ 64-bit PowerPC ಗಾಗಿನ GDB ಬೆಂಬಲ

Red Hat Enterprise Linux 7.1 ರಲ್ಲಿ GNU ಡಿಬಗ್ಗರ್‌ನಲ್ಲಿನ (GDB) 64-bit PowerPC ಲಿಟಲ್-ಎಂಡಿಯನ್ ಆರ್ಕಿಟೆಕ್ಚರ್‌ಗಾಗಿ ಬೆಂಬಲವನ್ನು ಸೇರಿಸಲಾಗಿದೆ.

Tuna ಸುಧಾರಣೆ

Tuna ಎನ್ನುವುದು ಶೆಡ್ಯೂಲರ್ ಟ್ಯೂನೆಬಲ್‌ಗಳು, ಶೆಡ್ಯೂಲರ್ ಪಾಲಿಸಿ, RT ಆದ್ಯತೆ, ಮತ್ತು CPU ಒಲವು ಮುಂತಾದವನ್ನು ಸರಿಪಡಿಸುವ ಒಂದು ಉಪಕರಣವಾಗಿದೆ. Red Hat Enterprise Linux 7.1 ರಲ್ಲಿ, Tuna GUI ಅನ್ನು ಆರಂಭಿಸಿದಾಗ ನಿರ್ವಾಹಕ ದೃಢೀಕರಣಕ್ಕಾಗಿ ಮನವಿ ಮಾಡುವಂತೆ ಸುಧಾರಿಸಲಾಗಿದೆ, ಆದ್ದರಿಂದ ಬಳಕೆದಾರರು Tuna GUI ಅನ್ನು ಚಲಾಯಿಸಲು ನಿರ್ವಾಹಕರಾಗಿ ಡೆಸ್ಕ್‌ಟಾಪ್ ಅನ್ನು ಚಲಾಯಿಸುವ ಅಗತ್ಯವಿರುವುದಿಲ್ಲ. Tuna ಬಗೆಗಿನ ಹೆಚ್ಚಿನ ಮಾಹಿತಿಗಾಗಿ, Tuna User Guide ಅನ್ನು ನೋಡಿ.

ಅಧ್ಯಾಯ 9. ನೆಟ್‌ವರ್ಕಿಂಗ್

ಟ್ರಸ್ಟೆಡ್ ಜಾಲಬಂಧ ಜೋಡಣೆ

Red Hat Enterprise Linux 7.1 ರಲ್ಲಿ ಟ್ರಸ್ಟೆಡ್ ನೆಟ್‌ವರ್ಕ್ ಕ್ರಿಯಾಶೀಲತೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್ ಅನ್ನು ಅಂತ್ಯಬಿಂದುವಿನ ಪರಿಸ್ಥಿತಿಯ ಮೌಲ್ಯಮಾಪನೆಗಾಗಿ TLS, 802.1X, ಅಥವ IPsec ನಂತಹ ಈಗಿರುವ ನೆಟ್‌ವರ್ಕ್ ಎಕ್ಸೆಸ್ ಕಂಟ್ರೋಲ್‌ (NAC) ಪರಿಹಾರಗಳೊಂದಿಗೆ ಬಳಸಲಾಗುತ್ತದೆ; ಅಂದರೆ, ಒಂದು ಅಂತ್ಯಬಿಂದುವಿನ ವ್ಯವಸ್ಥೆಯ ಮಾಹಿತಿಯನ್ನು ಸಂಗ್ರಹಿಸುವಿಕೆ (ಕಾರ್ಯಾಚರಣೆ ವ್ಯವಸ್ಥೆಯ ಸಂರಚನಾ ಸಿದ್ಧತೆಗಳು, ಅನುಸ್ಥಾಪಿಸಲಾದ ಪ್ಯಾಕೇಜುಗಳು, ಮತ್ತು ಇತರೆಯವುಗಳನ್ನು ಸಮಗ್ರತೆ ಅಳತೆಗಳು ಎಂದು ಕರೆಯಲಾಗುತ್ತದೆ). ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್ ಅನ್ನು ಜಾಲಬಂಧಕ್ಕೆ ಅಂತ್ಯಬಿಂದು ನಿಲುಕನ್ನು ಅನುಮತಿಸುವ ಮೊದಲು ಜಾಲಬಂಧ ನಿಲುಕು ನಿಯಮಗಳ ಅನುಸಾರವಾಗಿ ಈ ಅಳತೆಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ.

qlcnic ಚಾಲಕದಲ್ಲಿನ SR-IOV ಕ್ರಿಯಾಶೀಲತೆ

qlcnic ಚಾಲಕಕ್ಕೆ ಸಿಂಗಲ್-ರೂಟ್ I/O ವರ್ಚುವಲೈಸೇಶನ್‌ಗಾಗಿನ (SR-IOV) ಬೆಂಬಲವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಕ್ರಿಯಾಶೀಲತೆಗಾಗಿನ ಬೆಂಬಲವನ್ನು ನೇರವಾಗಿ QLogic ನಿಂದ ಒದಗಿಸಲಾಗುತ್ತದೆ, ಮತ್ತು ಬಳಕೆದಾರರು QLogic ಹಾಗೂ Red Hat ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ಉತ್ತೇಜಿಸಲಾಗುತ್ತದೆ. qlcnic ಚಾಲಕದ ಇತರೆ ಕ್ರಿಯಾಶೀಲತೆಯನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

ಬರ್ಕಲೆ ಪ್ಯಾಕೆಟ್ ಫಿಲ್ಟರ್

ಒಂದು ಬರ್ಕ್‌ಲೆ ಪ್ಯಾಕೆಟ್ ಫಿಲ್ಟರ್ (BPF) ಆಧರಿತವಾದ ಟ್ರಾಫಿಕ್ ಕ್ಲಾಸಿಫೈರ್ ಅನ್ನು Red Hat Enterprise Linux 7.1 ಗೆ ಸೇರಿಸಲಾಗಿದೆ. ಸೆಕ್ಯೂರ್ ಕಂಪ್ಯೂಟಿಂಗ್ ನೋಡ್‌ seccomp), ಮತ್ತು ನೆಟ್‌ಫಿಲ್ಟರ್‌ನಲ್ಲಿ ಸ್ಯಾಂಡ್‌-ಬಾಕ್ಸಿಂಗ್ ಮಾಡುವುದಕ್ಕಾಗಿನ BPF ಅನ್ನು ಪ್ಯಾಕೆಟ್‌ ಸಾಕೆಟ್‌ಗಳಿಗಾಗಿ ಪ್ಯಾಕೆಟ್ ಫಿಲ್ಟರ್ ಮಾಡಲು ಬಳಸಲಾಗುತ್ತದೆ. BPF ಅತಿ ಪ್ರಮುಖ ಆರ್ಕಿಟೆಕ್ಚರ್‌ಗಳಿಗಾಗಿ ಒಂದು ಸರಿಯಾದ ಸಮಯದಲ್ಲಿನ ಅಳವಡಿಕೆಯನ್ನು ಹೊಂದಿದೆ ಮತ್ತು ಫಿಲ್ಟರ್‌ಗಳನ್ನು ನಿರ್ಮಿಸುವುದಕ್ಕಾಗಿ ಒಂದು ಸಮೃದ್ಧ ಸಿಂಟ್ಯಾಕ್ಸ್ ಅನ್ನು ಹೊಂದಿದೆ.

ಸುಧಾರಿತ ಕ್ಲಾಕ್ ಸ್ಥಿರತೆ

ಈ ಹಿಂದೆ, ಟಿಕ್‌ಲೆಸ್ ಕರ್ನಲ್ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸುವುದರಿಂದ ವ್ಯವಸ್ಥೆಯ ಗಡಿಯಾರದ ಸ್ಥಿರತೆಯು ಗಮನಾರ್ಹವಾಗಿ ಸುಧಾರಣೆಗೊಳ್ಳುತ್ತದೆ ಎನ್ನುವುದನ್ನು ಪರೀಕ್ಷೆಯ ಫಲಿತಾಂಶಗಳಿಂದ ತಿಳಿದು ಬಂದಿದೆ. ಕರ್ನಲ್ ಬೂಟ್ ಆಯ್ಕೆಯ ನಿಯತಾಂಕಗಳಿಗೆ nohz=off ಸೇರಿಸುವುದರಿಂದ ಕರ್ನಲ್ ಟಿಕ್‌ಲೆಸ್ ಸ್ಥಿತಿಯನ್ನು ನಿಷ್ಕ್ರಿಯಗೊಳಿಸಬಹುದು. ಆದರೆ, Red Hat Enterprise Linux 7.1 ನಲ್ಲಿ ಸೇರಿಸಲಾದ ಇತ್ತೀಚಿನ ಸುಧಾರಣೆಗಳು ವ್ಯವಸ್ಥೆಯ ಗಡಿಯಾರದ ಸ್ಥಿರತೆಯನ್ನು ಗಮನಾರ್ಹವಾಗಿ ಉತ್ತಮಗೊಳಿಸಿದೆ ಮತ್ತು ಹೆಚ್ಚಿನ ಬಳಕೆದಾರರಿಗೆ nohz=off ಅನ್ನು ಬಳಸುವಾಗ ಮತ್ತು ಬಳಸದೆ ಇರುವಾಗ ಸ್ಥಿರತೆಯ ನಡುವಿನ ವ್ಯತ್ಯಾಸವು ಅತ್ಯಂತ ಕಡಿಮೆ ಇರುತ್ತದೆ. ಇದು PTP ಮತ್ತು NTP ಬಳಸುವ ಸಮಯ ಹೊಂದಾಣಿಕೆ ಅನ್ವಯಗಳಲ್ಲಿ ಉಪಯುಕ್ತವಾಗಿರುತ್ತದೆ .

libnetfilter_queue ಪ್ಯಾಕೇಜುಗಳು

libnetfilter_queue ಪ್ಯಾಕೇಜ್ ಅನ್ನು Red Hat Enterprise Linux 7.1 ಗೆ ಸೇರಿಸಲಾಗಿದೆ. libnetfilter_queue ಎನ್ನುವುದು ಕರ್ನಲ್ ಪ್ಯಾಕೆಟ್ ಫಿಲ್ಟರ್ ಇಂದ ಸರತಿ ಮಾಡಲಾದ ಪ್ಯಾಕೆಟ್‌ಗಳಿಗೆ ಒಂದು API ಅನ್ನು ಒದಗಿಸುವ ಬಳಕೆದಾರ ಸ್ಥಳದ ಲೈಬ್ರರಿಯಾಗಿದೆ. ಇದು ಕರ್ನಲ್ nfnetlink_queue ಉಪವ್ಯವಸ್ಥೆಯಿಂದ ಸರತಿ ಮಾಡಲಾದ ಪ್ಯಾಕೆಟ್‌ಗಳನ್ನು ಸ್ವೀಕರಿಸಲು, ಪ್ಯಾಕೆಟ್‌ಗಳನ್ನು ಪಾರ್ಸ್ ಮಾಡಲು, ಪ್ಯಾಕೆಟ್‌ ಹೆಡರ್‌ಗಳನ್ನು ಮರಳಿ ಬರೆಯಲು, ಮತ್ತು ಬದಲಾಯಿಸಲಾದ ಪ್ಯಾಕೆಟ್‌ಗಳನ್ನು ಮರಳಿ-ಸೇರಿಸಲು ಅವಕಾಶ ನೀಡುತ್ತದೆ.

ಟೀಮಿಂಗ್‌ನಲ್ಲಿನ ಸುಧಾರಣೆಗಳು

libteam ಪ್ಯಾಕೇಜನ್ನು Red Hat Enterprise Linux 7.1 ನಲ್ಲಿ ಆವೃತ್ತಿ 1.14-1 ಗೆ ಅಪ್‌ಡೇಟ್ ಮಾಡಲಾಗಿದೆ. ಇದು, ಹಲವಾರು ದೋಷ ಪರಿಹಾರಗಳನ್ನು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ನಿರ್ದಿಷ್ಟವಾದುದೆಂದರೆ, teamd ಈಗ systemd ಇಂದ ಮರಳಿ-ಸ್ಪಾನ್‌ ಮಾಡಲು ಸಾಧ್ಯವಿರುತ್ತದೆ, ಇದು ಒಟ್ಟಾರೆಯಾದ ನಂಬಿಕಾರ್ಹತೆಯನ್ನು ಹೆಚ್ಚಿಸುತ್ತದೆ.

Intel QuickAssist ಟೆಕ್ನಾಲಜಿ ಚಾಲಕ

Intel QuickAssist ಟೆಕ್ನಾಲಜಿ (QAT) ಚಾಲಕವನ್ನು Red Hat Enterprise Linux 7.1 ಗೆ ಸೇರಿಸಲಾಗಿದೆ. QAT ಚಾಲಕವು QuickAssist ತಂತ್ರಾಂಶವನ್ನು ಸಕ್ರಿಯಗೊಳಿಸುತ್ತದೆ, ಇದು ಒಂದು ವ್ಯವಸ್ಥೆಗೆ ಯಂತ್ರಾಂಶ ಆಫ್‌ಲೋಡ್ ಕ್ರಿಪ್ಟೋ ಸಾಮರ್ಥ್ಯಗಳನ್ನು ಸೇರಿಸುತ್ತದೆ.

PTP ಮತ್ತು NTP ಯ ನಡುವಿನ ವಿಫಲತೆಗಾಗಿ LinuxPTP ಟೈಮ್‌ಮಾಸ್ಟರ್ ಬೆಂಬಲ

linuxptp ಪ್ಯಾಕೇಜನ್ನು Red Hat Enterprise Linux 7.1 ನಲ್ಲಿ ಆವೃತ್ತಿ 1.4 ಗೆ ಅಪ್‌ಡೇಟ್ ಮಾಡಲಾಗಿದೆ. ಇದು, ಹಲವಾರು ದೋಷ ಪರಿಹಾರಗಳನ್ನು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ನಿರ್ದಿಷ್ಟವಾದುದೆಂದರೆ, timemaster ಅನ್ನು ಬಳಸಿಕೊಂಡು PTP ಡೊಮೇನ್‌ಗಳು ಮತ್ತು NTP ಆಕರಗಳ ನಡುವಿನ ವಿಫಲತೆಗಾಗಿನ ಬೆಂಬಲ. ಜಾಲಬಂಧದಲ್ಲಿ ಅನೇಕ PTP ಲಭ್ಯವಿದ್ದಾಗ, ಅಥವ NTPಗೆ ಹಿಮ್ಮರಳುವುದು ಅಗತ್ಯವಿದ್ದಾಗ ಲಭ್ಯವಿರುವ ಸಮಯದ ಆಕರಗಳಿಗಾಗಿ ವ್ಯವಸ್ಥೆಯ ಗಡಿಯಾರಗಳನ್ನು ಹೊಂದಾಣಿಕೆ ಮಾಡಲು timemaster ಪ್ರೊಗ್ರಾಮ್ ಅನ್ನು ಬಳಸು ಸಾಧ್ಯವಿರುತ್ತದೆ.

ಜಾಲಬಂಧ ಸ್ಕ್ರಿಪ್ಟ್‌ಗಳು

Red Hat Enterprise Linux 7.1 ನಲ್ಲಿ ಅಗತ್ಯಾನುಗುಣ VLAN ಹೆಸರುಗಳಿಗೆ ಬೆಂಬಲವನ್ನು ಸೇರಿಸಲಾಗಿದೆ. GRE ಟನಲ್‌ಗಳಿಗಾಗಿ IPv6 ಸುಧಾರಿತ ಬೆಂಬಲವನ್ನು ಸೇರಿಸಲಾಗಿದೆ; ಒಳಗಿನ ವಿಳಾಸವು ಈಗ ಮರಳಿ ಬೂಟ್ ಮಾಡಿದ ನಂತರವೂ ಹಾಗೆ ಉಳಿದುಕೊಳ್ಳುತ್ತದೆ.

TCP ವಿಳಂಬಿತ ACK

ಸಂರಚಿಸಬಹುದಾದ TCP ವಿಳಂಬಿತ ACK ಗೆ ಬೆಂಬಲವನ್ನು Red Hat Enterprise Linux 7.1 ರಲ್ಲಿನ iproute ಪ್ಯಾಕೇಜ್‌ಗೆ ಸೇರಿಸಲಾಗಿದೆ. ಇದನ್ನು ip route quickack ಆದೇಶದಿಂದ ಸಕ್ರಿಯಗೊಳಿಸಲು ಸಾಧ್ಯವಿರುತ್ತದೆ.

NetworkManager

ಬಾಂಡಿಂಗ್ ಆಯ್ಕೆ lacp_rate ಈಗ Red Hat Enterprise Linux 7.1 ರಲ್ಲಿ ಬೆಂಬಲಿತವಾಗಿದೆ. ಸ್ಲೇವ್ ಸಂಪರ್ಕಸಾಧನಗಳೊಂದಿಗೆ ಮಾಸ್ಟರ್ ಸಂಪರ್ಕಸಾಧನಗಳನ್ನು ಮರುಹೆಸರಿಸುವಾಗ ಸುಲಭವಾದ ಮರುಹೆಸರಿಸುವಿಕೆಯನ್ನು ಒದಗಿಸುವಂತೆ NetworkManager ಅನ್ನು ಸುಧಾರಿಸಲಾಗಿದೆ.
ಇದರ ಜೊತೆಗೆ, NetworkManagerನ ಸ್ವಯಂ-ಸಂಪರ್ಕದ ಕ್ರಿಯೆಗೆ ಒಂದು ಆದ್ಯತೆಯ ಸಿದ್ಧತೆಯನ್ನು ಸೇರಿಸಲಾಗಿದೆ. ಸ್ವಯಂ-ಸಂಪರ್ಕಕ್ಕಾಗಿ ಒಂದಕ್ಕಿಂತ ಹೆಚ್ಚಿನ ಅರ್ಹ ಅಬ್ಯರ್ಥಿಯು ಈಗ ಲಭ್ಯವಿದ್ದರೆ, NetworkManager ಆ ಸಂಪರ್ಕವನ್ನು ಹೆಚ್ಚಿನ ಆದ್ಯತೆಯೊಂದಿಗೆ ಆಯ್ಕೆ ಮಾಡುತ್ತದೆ. ಲಭ್ಯವಿರುವ ಎಲ್ಲಾ ಸಂಪರ್ಕಗಳು ಸಮಾನವಾದ ಆದ್ಯತೆಯ ಮೌಲ್ಯಗಳನ್ನು ಹೊಂದಿದ್ದರೆ, NetworkManager ಪೂರ್ವನಿಯೋಜಿತ ವರ್ತನೆಯನ್ನು ಬಳಸುತ್ತದೆ ಕೊನೆಯ ಸಕ್ರಿಯ ಸಂಪರ್ಕವನ್ನು ಆರಿಸುತ್ತದೆ.

ಜಾಲಬಂಧ ನೇಮ್‌ಸ್ಪೇಸ್‌ಗಳು ಮತ್ತು VTI

ಜಾಲಬಂಧ ನೇಮ್‌ಸ್ಪೇಸ್‌ಗಳೊಂದಿಗೆ Red Hat Enterprise Linux 7.1 ನಲ್ಲಿ ವರ್ಚುವಲ್ ಟನಲ್ ಟರ್ಮಿನಲ್‌ಗಾಗಿ (VTI) ಬೆಂಬಲವನ್ನು ಸೇರಿಸಲಾಗಿದೆ. ಪ್ಯಾಕೆಟ್‌ಗಳನ್ನು ಎನ್‌ಕ್ಯಾಪ್ಸುಲೇಟ್‌ ಮಾಡಿದಾಗ ಅಥವ ಡಿ-ಕ್ಯಾಪ್ಸುಲೇಟ್‌ ಮಾಡಿದಾಗ ಇದು ಒಂದು VTI ಇಂದ ವಿವಿಧ ನೇಮ್‌ಸ್ಪೇಸ್‌ಗಳ ನಡುವೆ ರವಾನಿಸಲು ಟ್ರಾಫಿಕ್‌ಗೆ ಅವಕಾಶ ಒದಗಿಸುತ್ತದೆ.

MemberOf ಪ್ಲಗ್‌-ಇನ್‌ಗಾಗಿನ ಸಕ್ರಿಯ ಸಂರಚನಾ ಶೇಖರಣೆ

MemberOf ಪ್ಲಗ್‌-ಇನ್ 389 ಡಿರಕ್ಟರಿ ಸರ್ವರ್‌ನ ಸಂರಚನೆಯನ್ನು ಈಗ ಬ್ಯಾಕ್‌-ಎಂಡ್ ದತ್ತಸಂಚಯಕ್ಕೆ ಮ್ಯಾಪ್‌ ಮಾಡಲಾದ ಒಂದು ಸಫಿಕ್ಸ್‌ನಲ್ಲಿ ಉಳಿಸಲು ಸಾಧ್ಯವಿರುತ್ತದೆ. ಇದು MemberOf ಪ್ಲಗ್‌-ಇನ್ ಸಂರಚನೆಯನ್ನು ತದ್ರೂಪುಗೊಳಿಸಲು ಅವಕಾಶ ನೀಡುತ್ತದೆ, ಹಾಗೂ ಇದರಿಂದಾಗಿ ತದ್ರೂಪುಗೊಳಿಸಲಾದ ಪರಿಸರದಲ್ಲಿ ಒಂದು ಸ್ಥಿರವಾದ MemberOf ಪ್ಲಗ್‌-ಇನ್‌ ಸಂರಚನೆಯು ಇರುವಂತೆ ನೋಡಿಕೊಳ್ಳಲು ಸುಲಭವಾಗಿರುತ್ತದೆ.

ಅಧ್ಯಾಯ 10. ಡಾಕರ್ ಫಾರ್ಮ್ಯಾಟ್‌ನಲ್ಲಿನ ಲಿನಕ್ಸ್ ಕಂಟೇನರ್‌ಗಳು

ಡಾಕರ್ ಎನ್ನುವುದು ಒಂದು ಮುಕ್ತ ತಂತ್ರಾಂಶವಾಗಿದ್ದು, ಇದು ಲಿನಕ್ಸ್ ಕಂಟೇನರ್‌ನ ಒಳಗೆ ಅನ್ವಯಗಳ ನಿಯೋಜನೆಯನ್ನು ಸ್ವಯಂಚಾಲಿತಗೊಳಿಸುತ್ತದೆ, ಮತ್ತು ಒಂದು ಕಂಟೇನರ್‌ನ ಒಳಗೆ ಚಾಲನಾಸಮಯದ ಅವಲಂಬನೆಗಳೊಂದಿಗೆ ಒಂದು ಅನ್ವಯವನ್ನು ಪ್ಯಾಕೇಜ್‌ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಚಿತ್ರಿಕೆ-ಆಧರಿತವಾದ ಕಂಟೇನರ್‌ಗಳ ಜೀವನ-ಚಕ್ರದ ನಿರ್ವಹಣೆಗಾಗಿ ಇದು ಡಾಕರ್ CLI ಆದೇಶ ಸಾಲಿನ ಉಪಕರಣವನ್ನು ಒದಗಿಸುತ್ತದೆ. ಲಿನಕ್ಸ್ ಕಂಟೇನರ್‌ಗಳು ಸುರಕ್ಷತೆಯನ್ನು ಸುಧಾರಿಸುವುದರ ಜೊತೆಗೆ, ಕ್ಷಿಪ್ರವಾದ ಅನ್ವಯ ನಿಯೋಜನೆ, ಸರಳವಾದ ಪರೀಕ್ಷಣೆ, ನಿರ್ವಹಣೆ, ಮತ್ತು ದೋಷಪತ್ತೆಮಾಡುವಿಕೆಯನ್ನು ಸಕ್ರಿಯಗೊಳಿಸುತ್ತವೆ. ಡಾಕರ್‌ನೊಂದಿಗೆ Red Hat Enterprise Linux 7 ಅನ್ನು ಬಳಸುವುದರಿಂದ ಬಳಕೆದಾರರು ಸ್ಟಾಫ್‌ನ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಬಹುದು, ತರ್ಡ್-ಪಾರ್ಟಿ ಅನ್ವಯಗಳನ್ನು ವೇಗವಾಗಿ ನಿಯೋಜಿಸಗೊಳಿಸಬಹುದು, ಹೆಚ್ಚು ಎಜೈಲ್ ವಿಕಸನಾ ಪರಿಸರವನ್ನು ಸಕ್ರಿಯಗೊಳಸಬಹುದು, ಮತ್ತು ಸಂಪನ್ಮೂಲಗಳನ್ನು ಹೆಚ್ಚು ಕ್ಷಮತೆಯಿಂದ ನಿಭಾಯಿಸಬಹುದಾಗಿರುತ್ತದೆ.
ಡಾಕರ್‌ ಕಂಟೇನರ್‌ಗಳು ಮತ್ತು ಅದರ ಬಳಕೆಯ ಕುರಿತು ಕ್ಷಿಪ್ರವಾದ ಮಾಹಿತಿಗಾಗಿ, Get Started with Docker Containers ಅನ್ನು ನೋಡಿ.
Red Hat Enterprise Linux 7.1 ರಲ್ಲಿ ಡಾಕರ್‌ 1.3.2 ಇದೆ, ಮತ್ತು ಇದು,ಈ ಕೆಳಗಿನ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ.
  • ಡಿಜಿಟಲ್ ಸಿಗ್ನೇಚರ್ ವೇರಿಫಿಕೇಶನ್ ಅನ್ನು ಡಾಕರ್‌ನಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಡಾಕರ್ ಎಂಜಿನ್ ಈಗ ಸ್ವಯಂಚಾಲಿತವಾಗಿ ಡಿಜಿಟಲ್ ಸಹಿಗಳನ್ನು ಬಳಸಿಕೊಂಡು ಅಧೀಕೃತ ರೆಪೊಗಳ ಮೂಲವನ್ನು ಮತ್ತು ಸಮಗ್ರತೆಯನ್ನು ಪರಿಶೀಲಿಸುತ್ತದೆ.
  • docker exec ಆದೇಶವು ಪ್ರಕ್ರಿಯೆಗಳು ಡಾಕರ್ API ಅನ್ನು ಬಳಸಿಕೊಂಡು ಡಾಕರ್‌ನ ಒಳಗೆಯೆ ಸ್ಪಾನ್ ಆಗುವುದನ್ನು ಸಕ್ರಿಯಗೊಳಿಸುತ್ತದೆ.
  • docker create ಆದೇಶವು ಒಂದು ಕಂಟೇನರ್ ಅನ್ನು ರಚಿಸುತ್ತದೆ ಆದರೆ ಅದರ ಒಳಗೆ ಒಂದು ಪ್ರಕ್ರಿಯೆಯನ್ನು ಸ್ಪಾನ್ ಮಾಡುವುದಿಲ್ಲ. ಇದು ಕಂಟೇನರ್‌ನ ಜೀವನ ಚಕ್ರಗಳ ನಿರ್ವಹಣೆಯನ್ನು ಸುಧಾರಿಸುತ್ತದೆ.
Red Hat Enterprise Linux 6 ಮತ್ತು Red Hat Enterprise Linux 7 ಎರಡರಲ್ಲಿಯೂ ಅನ್ವಯಗಳನ್ನು ನಿರ್ಮಿಸಲು Red Hat ಡಾಕರ್ ಬೇಸ್‌ ಚಿತ್ರಿಕೆಗಳನ್ನು ಒದಗಿಸುತ್ತದೆ.
ಕಂಟೇನರ್‌ಗಳ ವ್ಯವಸ್ಥಿತ ನಿಯೋಜನೆಯಲ್ಲಿ ಬಳಸಲು Red Hat ಕ್ಯುಬರ್ನೇಟ್ಸ್‌ ಅನ್ನೂ ಒದಗಿಸುತ್ತದೆ. ಕ್ಯುಬರ್ನೇಟ್ಸ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ Get Started Orchestrating Docker Containers with Kubernetes ಅನ್ನು ನೋಡಿ.
ಡಾಕರ್ ಫಾರ್ಮ್ಯಾಟ್‌ ಅನ್ನು ಹೊಂದಿರುವ ಲಿನಕ್ಸ್‌ ಕಂಟೇನರ್‌ಗಳು SELinux ಸಕ್ರಿಯವಾಗಿರುವ ಆತಿಥೇಯದಲ್ಲಿ ಚಲಾಯಿಸುವಂತೆ ಬೆಂಬಲಿತವಾಗಿರುತ್ತವೆ. /var/lib/docker/ ಕೋಶವು ಬಿ-ಟ್ರೀ ಕಡತ ವ್ಯವಸ್ಥೆಯನ್ನು (Btrfs) ಬಳಸುವ ಪರಿಮಾಣದಲ್ಲಿ ಇದ್ದರೆ SELinux ಅನ್ನು ಬೆಂಬಲಿಸಲಾಗುವುದಿಲ್ಲ.

10.1. ಡಾಕರ್ ಕಂಟೇನರ್‌ಗಳ ಘಟಕಗಳು

ಡಾಕರ್ ಈ ಕೆಳಗಿನ ಮೂಲಭೂತ ಘಟಕಗಳೊಂದಿಗೆ ಕೆಲಸ ಮಾಡುತ್ತದೆ:
  • ಕಂಟೇನರ್ – ಒಂದು ಅನ್ವಯ ಸ್ಯಾಂಡ್‌ಬಾಕ್ಸ್‌ ಆಗಿದೆ. ಪ್ರತಿಯೊಂದು ಕಂಟೇನರ್‌ ಸಹ ಅಗತ್ಯವಿರುವ ಸಂರಚನಾ ಮಾಹಿತಿಯನ್ನು ಹೊಂದಿರುವ ಚಿತ್ರಿಕೆನ (ಇಮೇಜ್‌) ಮೇಲೆ ಆಧರಿತವಾಗಿರುತ್ತದೆ. ನೀವು ಒಂದು ಚಿತ್ರಿಕೆಯಿಂದ ಒಂದು ಕಂಟೇನರ್ ಅನ್ನು ಚಲಾಯಿಸಿದಾಗ, ಈ ಚಿತ್ರಿಕೆಯ ಮೇಲ್ಭಾಗದಲ್ಲಿ ಒಂದು ಬರೆಯಬಹುದಾದ ಪದರವನ್ನು ಸೇರಿಸಲಾಗುತ್ತದೆ. ನೀವು ಪ್ರತಿ ಬಾರಿಯೂ ಸಹ ಒಂದು ಕಂಟೇನರ್ ಅನ್ನು ಸಲ್ಲಿಸಿದಾಗ (docker commit ಆದೇಶವನ್ನು ಬಳಸಿಕೊಂಡು), ನೀವು ಮಾಡಿದ ಬದಲಾವಣೆಗಳನ್ನು ಶೇಖರಿಸಿ ಇರಿಸಲು ಒಂದು ಹೊಸ ಚಿತ್ರಿಕೆ ಪದರವನ್ನು ಸೇರಿಸಲಾಗುತ್ತದೆ.
  • ಚಿತ್ರಿಕೆ (ಇಮೇಜ್) – ಕಂಟೇನರ್‌ಗಳ ಸಂರಚನೆಯ ಒಂದು ಸ್ಥಿರ ಸ್ನ್ಯಾಪ್‌ಶಾಟ್ ಆಗಿದೆ. ಚಿತ್ರಿಕೆ ಎನ್ನುವುದು ಎಂದಿಗೂ ಸಹ ಮಾರ್ಪಡಿಸಲು ಸಾಧ್ಯವಿರದೆ ಇರುವ ಓದಲು-ಮಾತ್ರವಾದ ಪದರವಾಗಿದೆ, ಎಲ್ಲಾ ಬದಲಾವಣೆಗಳನ್ನು ಮೇಲ್ಮಟ್ಟದ ಬರೆಯಬಹುದಾದ ಪದರದಲ್ಲಿ ಮಾಡಲಾಗುತ್ತದೆ, ಮತ್ತು ಕೇವಲ ಒಂದು ಹೊಸ ಚಿತ್ರಿಕೆಯನ್ನು ರಚಿಸುವ ಮೂಲಕ ಮಾತ್ರ ಉಳಿಸಲು ಸಾಧ್ಯವಿರುತ್ತದೆ. ಪ್ರತಿಯೊಂದು ಚಿತ್ರಿಕೆಯೂ ಸಹ ಒಂದು ಅಥವ ಹೆಚ್ಚಿನ ಪೋಷಕ ಚಿತ್ರಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.
  • ಪ್ಲಾಟ್‌ಫಾರ್ಮ್ ಚಿತ್ರಿಕೆ – ಯಾವುದೆ ಪೋಷಕವಿಲ್ಲದ ಒಂದು ಚಿತ್ರಿಕೆ. ಪ್ಲಾಟ್‌ಫಾರ್ಮ್ ಚಿತ್ರಿಕೆಗಳು ಚಾಲನಾಸಮಯದ ಪರಿಸರ, ಪ್ಯಾಕೇಜುಗಳು, ಮತ್ತು ಕಂಟೇನರ್‌ ಮಾಡಲಾದ ಅನ್ವಯಗಳನ್ನು ಚಲಾಯಿಸಲು ಅಗತ್ಯವಿರುವ ಸೌಲಭ್ಯಗಳನ್ನು ಸೂಚಿಸುತ್ತವೆ. ಪ್ಲಾಟ್‌ಫಾರ್ಮ್ ಚಿತ್ರಿಕೆಯು ಓದಲು-ಮಾತ್ರವಾಗಿದೆ, ಆದ್ದರಿಂದ ಮಾಡಲಾದ ಯಾವುದೆ ಬದಲಾವಣೆಗಳು ಮೇಲ್ಭಾಗದಲ್ಲಿ ಸ್ಟಾಕ್‌ ಮಾಡಲಾದ ಪ್ರತಿ ಮಾಡಲಾದ ಚಿತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂತಹ ಒಂದು ಸ್ಟಾಕ್‌ ಮಾಡುವಿಕೆಯ ಉದಾಹರಣೆಯನ್ನು ಚಿತ್ರ 10.1, “ಡಾಕರ್ ಫಾರ್ಮ್ಯಾಟ್‌ನಲ್ಲಿನ ಚಿತ್ರಿಕೆಯ ಪದರ (ಲೇಯರ್) ಮಾಡುವಿಕೆ” ಎಂಬಲ್ಲಿ ನೋಡಿ.
  • ರಿಜಿಸ್ಟ್ರಿ – ಚಿತ್ರಿಕೆಗಳ (ಇಮೇಜ್) ಒಂದು ರೆಪೊಸಿಟರಿ. ಡೌನ್‌ಲೋಡ್‌ ಮಾಡಬಹುದಾದ ಚಿತ್ರಿಕೆಗಳನ್ನು ಹೊಂದಿರುವ ಸಾರ್ವಜನಿಕ ಅಥವ ಖಾಸಗಿ ರೆಪೊಸಿಟರಿಗಳೆ ರಿಜಿಸ್ಟ್ರಿಗಳಾಗಿರುತ್ತವೆ. ಕೆಲವು ರಿಜಿಸ್ಟ್ರಿಗಳು ಇತರರಿಗೆ ಚಿತ್ರಿಕೆಗಳು ಲಭ್ಯವಾಗುವಂತೆ ಬಳಕೆದಾರರು ಅಪ್‌ಲೋಡ್ ಮಾಡಲು ಅವಕಾಶ ನೀಡುತ್ತವೆ.
  • ಡಾಕರ್‌ಫೈಲ್ – ಡಾಕರ್‌ ಚಿತ್ರಿಕೆಗಳಿಗಾಗಿ ನಿರ್ಮಾಣ ಮಾಹಿತಿಯನ್ನು ಹೊಂದಿರುವ ಒಂದು ಸಂರಚನಾ ಕಡತವಾಗಿರುತ್ತದೆ. ಡಾಕರ್‌ಫೈಲ್‌ಗಳು ನಿರ್ಮಾಣ ವಿಧಾನಗಳನ್ನು ಸ್ವಯಂಚಾಲಿತಗೊಳಿಸಲು, ಮರಳಿ ಬಳಸಲು, ಮತ್ತು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಡಾಕರ್ ಫಾರ್ಮ್ಯಾಟ್‌ನಲ್ಲಿನ ಚಿತ್ರಿಕೆಯ ಪದರ (ಲೇಯರ್) ಮಾಡುವಿಕೆ
A scheme depicting image layers used in Docker.

ಚಿತ್ರ 10.1. ಡಾಕರ್ ಫಾರ್ಮ್ಯಾಟ್‌ನಲ್ಲಿನ ಚಿತ್ರಿಕೆಯ ಪದರ (ಲೇಯರ್) ಮಾಡುವಿಕೆ


10.2. ಡಾಕರ್‌ ಬಳಕೆಯ ಪ್ರಯೋಜನಗಳು

ಕಂಟೇನರ್ ನಿರ್ವಹಣೆಗಾಗಿ ಡಾಕರ್ ಒಂದು API ಅನ್ನು, ಒಂದು ಚಿತ್ರಿಕೆ ಫಾರ್ಮ್ಯಾಟ್, ಮತ್ತು ಹಂಚಿಕೊಳ್ಳಲಾದ ಕಂಟೇನರ್‌ಗಾಗಿ ಒಂದು ರಿಮೋಟ್ ರಿಜಿಸ್ಟ್ರಿ ಅನ್ನು ಬಳಸುವ ಸಾಧ್ಯತೆಯನ್ನು ಒದಗಿಸುತ್ತದೆ. ಈ ಸ್ಕೀಮ್‌ನಿಂದ ವಿಕಸನೆಗಾರರು ಮತ್ತು ವ್ಯವಸ್ಥೆಯ ನಿರ್ವಾಹಕರು ಇಬ್ಬರಿಗೂ ಈ ಕೆಳಗಿನಂತಹ ಪ್ರಯೋಜನಗಳು ಉಂಟಾಗುತ್ತವೆ:
  • ಕ್ಷಿಪ್ರ ಅನ್ವಯ ನಿಯೋಜನೆ – ಕಂಟೇನರ್‌ಗಳು ಅನ್ವಯದ ಕನಿಷ್ಟ ಚಾಲನಾಸಮಯದ ಅಗತ್ಯತೆಗಳನ್ನು ಒಳಗೊಂಡಿರುತ್ತದೆ, ಇದರಿಂದ ಅವುಗಳ ಗಾತ್ರ ಕಡಿಮೆಯಾಗುತ್ತದೆ ಮತ್ತು ಆ ಮೂಲಕ ಅವುಗಳನ್ನು ಕ್ಷಿಪ್ರವಾಗಿ ನಿಯೋಜಿಸಲು ಸಾಧ್ಯವಿರುತ್ತದೆ.
  • ಗಣಕಗಳ ನಡುವೆ ಪೋರ್ಟೆಬಿಲಿಟಿ – ಒಂದು ಅನ್ವಯ ಮತ್ತು ಅದರ ಎಲ್ಲಾ ಅವಲಂಬನೆಗಳನ್ನು ಲಿನಕ್ಸ್‌ ಕರ್ನಲ್‌ನ ಆತಿಥೇಯ ಆವೃತ್ತಿ, ಪ್ಲಾಟ್‌ಫಾರ್ಮ್ ವಿತರಣೆ, ಅಥವ ನಿಯೋಜನಾ ಮಾದರಿಯಿಂದ ಸ್ವತಂತ್ರವಾದ ಒಂದು ಕಂಟೇನರ್‌ನೊಂದಿಗೆ ಕಟ್ಟು ಮಾಡಲು ಸಾಧ್ಯವಿರುತ್ತದೆ. ಈ ಕಂಟೇನರ್ ಅನ್ನು ಡಾಕರ್‌ ಚಲಾಯಿತಗೊಳ್ಳುತ್ತಿರುವ ಇನ್ನೊಂದು ಗಣಕಕ್ಕೆ ವರ್ಗಾಯಿಸಲು, ಮತ್ತು ಯಾವುದೆ ಹೊಂದಾಣಿಕೆಯ ಸಮಸ್ಯೆಗಳು ಇಲ್ಲದೆ ಅಲ್ಲಿ ಚಲಾಯಿಸಲು ಸಾಧ್ಯವಿರುತ್ತದೆ.
  • ಆವೃತ್ತಿ ನಿಯಂತ್ರಣ ಮತ್ತು ಘಟಕದ ಮರುಬಳಕೆ – ನೀವು ಕಂಟೇನರ್‌ನ ಅನುಕ್ರಮಿತ ಆವೃತ್ತಿಗಳ ಜಾಡನ್ನು ಇರಿಸಬಹುದು, ವ್ಯತ್ಯಾಸಗಳನ್ನು ಪರಿಶೀಲಿಸಬಹುದು, ಅಥವ ಹಿಂದಿನ ಆವೃತ್ತಿಗಳಿಗೆ ಹಿಮ್ಮರಳಬಹುದು. ಕಂಟೇನರ್‌ಗಳು ಹಿಂದಿನ ಪದರಗಳಿಂದ ಘಟಕಗಳನ್ನು ಮರುಬಳಕೆ ಮಾಡಬಹುದು, ಇದರಿಂದಾಗಿ ಅವುಗಳ ತೂಕವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
  • ಹಂಚಿಕೆ – ನಿಮ್ಮ ಕಂಟೇನರ್‌ ಅನ್ನು ಇತರರೊಂದಿಗೆ ಹಂಚಿಕೊಳ್ಳಲು ನೀವು ರಿಮೋಟ್ ರೆಪೊಸಿಟರಿಯನ್ನು ಬಳಸಬಹುದು. ಈ ಉದ್ಧೇಶಕ್ಕಾಗಿ Red Hat ಒಂದು ರಿಜಿಸ್ಟ್ರಿಯನ್ನು ಒದಗಿಸುತ್ತದೆ, ಮತ್ತು ನಿಮ್ಮದೆ ಆದ ರೆಪೊಸಟಿರಯನ್ನು ಸಿದ್ಧಗೊಳಿಸಲು ನಿಮಗೆ ಸಾಧ್ಯವಿರುತ್ತದೆ.
  • ಲೈಟ್‌ವೇಟ್ ಫೂಟ್‌ಪ್ರಿಂಟ್ ಮತ್ತು ಕನಿಷ್ಟ ಹೊರೆ – ಡಾಕರ್‌ ಚಿತ್ರಿಕೆಗಳು ಸಾಮಾನ್ಯವಾಗಿ ಅತಿ ಚಿಕ್ಕದಾಗಿರುತ್ತವೆ, ಇದರಿಂದಾಗಿ ಕ್ಷಿಪ್ರವಾದ ರವಾನೆಗೆ ಅನುಕೂಲವಾಗುತ್ತದೆ ಮತ್ತು ಹೊಸ ಅನ್ವಯ ಕಂಟೇನರ್‌ಗಳನ್ನು ನಿಯೋಜಿಸಲು ಅಗತ್ಯವಿರುವ ಸಮಯವನ್ನು ಕಡಿಮೆ ಮಾಡುತ್ತದೆ.
  • ಸರಳೀಕರಿಸಲಾದ ನಿರ್ವಹಣೆ – ಅನ್ವಯ ಅವಲಂಬನೆಗಳೊಂದಿಗಿನ ತೊಂದರೆಗಳ ಪ್ರಯತ್ನಗಳನ್ನು ಮತ್ತು ಅಪಾಯಗಳನ್ನು ಕಡಿಮೆ ಮಾಡುತ್ತದೆ.

10.3. ವರ್ಚುವಲ್ ಗಣಕಗಳೊಂದಿಗೆ ಹೋಲಿಕೆ

ವರ್ಚುವಲ್‌ ಗಣಕವು ಸಂಬಂಧಿಸಿದ ಎಲ್ಲಾ ತಂತ್ರಾಂಶ ಮತ್ತು ನಿರ್ವಹಣೆಯನ್ನು ಹೊಂದಿರುವ ಒಂದು ಸಂಪೂರ್ಣ ಪೂರೈಕೆಗಣಕವನ್ನು ಪ್ರತಿನಿಧಿಸುತ್ತದೆ. ಡಾಕರ್ ಕಂಟೇನರ್‌ಗಳು ಅನ್ವಯದ ಪ್ರತ್ಯೇಕಗೊಳಿಕೆಯನ್ನು (ಐಸೊಲೇಶನ್) ಒದಗಿಸುತ್ತದೆ ಮತ್ತು ಕನಿಷ್ಟ ಚಾಲನಾ-ಸಮಯದ ಪರಿಸರಗಳೊಂದಿಗೆ ಸಂರಚಿಸಲು ಸಾಧ್ಯವಿರುತ್ತದೆ. ಒಂದು ಡಾಕರ್ ಕಂಟೇನರ್‌ನಲ್ಲಿ, ಕರ್ನಲ್ ಮತ್ತು ಕಾರ್ಯಾಚರಣೆ ವ್ಯವಸ್ಥೆಯ ಸಂಪನ್ಮೂಲದ ಭಾಗಗಳನ್ನು ಹಂಚಿಕೊಳ್ಳಲಾಗುತ್ತದೆ. ವರ್ಚುವಲ್‌ ಗಣಕಕ್ಕಾಗಿ, ಒಂದು ಸಂಪೂರ್ಣ ಕಾರ್ಯಾಚರಣೆ ವ್ಯವಸ್ಥೆಯನ್ನು ಸೇರಿಸಲಾಗಿರುತ್ತದೆ.
  • ನೀವು ಕಂಟೇನರ್‌ಗಳನ್ನು ಸುಲಭವಾಗಿ ರಚಿಸಲು ಅಥವ ನಾಶಪಡಿಸಲು ಸಾಧ್ಯವಿರುತ್ತದೆ. ವರ್ಚುವಲ್ ಗಣಕಗಳಿಗೆ ಸಂಪೂರ್ಣ ಅನುಸ್ಥಾಪನೆಗಳ ಅಗತ್ಯವಿರುತ್ತದೆ ಮತ್ತು ಚಲಾಯಿಸಲು ಹೆಚ್ಚಿನ ಗಣಕ ಸಂಪನ್ಮೂಲಗಳ ಅಗತ್ಯವಿರುತ್ತದೆ.
  • ಕಂಟೇನರ್‌ಗಳು ಹಗುರತೂಕದ್ದಾಗಿರುತ್ತವೆ, ಆದ್ದರಿಂದ ಒಂದು ಆತಿಥೇಯ ಗಣಕದಲ್ಲಿ ಏಕಕಾಲದಲ್ಲಿ ವರ್ಚುವಲ್‌ ಗಣಕಗಳಿಗಿಂತ ಹೆಚ್ಚಿನ ಕಂಟೇನರ್‌ಗಳನ್ನು ಚಲಾಯಿಸಲು ಸಾಧ್ಯವಿರುತ್ತದೆ.
  • ಕಂಟೇನರ್‌ಗಳು ಸಂಪನ್ಮೂಲಗಳನ್ನು ಸಕ್ಷಮವಾಗಿ ಹಂಚಿಕೊಳ್ಳುತ್ತವೆ. ವರ್ಚುವಲ್‌ ಗಣಕಗಳು ಪ್ರತ್ಯೇಕವಾಗಿರುತ್ತವೆ. ಆದ್ದರಿಂದ ಕಂಟೇನರ್‌ಗಳಲ್ಲಿ ಚಲಾಯಿತಗೊಳ್ಳುತ್ತಿರುವ ಒಂದು ಅನ್ವಯದ ಅನೇಕ ಭಿನ್ನತೆಗಳೂ ಸಹ ಹಗುರತೂಕದ್ದಾಗಿರುತ್ತವೆ. ಉದಾಹರಣೆಗೆ, ಹಂಚಲಾದ ಬೈನರಿಗಳನ್ನು ವ್ಯವಸ್ಥೆಯಲ್ಲಿ ಪ್ರತಿ ಮಾಡಲಾಗುವುದಿಲ್ಲ.
  • ವರ್ಚುವಲ್ ಗಣಕಗಳನ್ನು ಚಲಾಯಿಸಲಾಗುತ್ತಿರುವಾಗಲೆ ಅವುಗಳನ್ನು ವರ್ಗಾವಣೆ ಮಾಡಲು ಸಾಧ್ಯವಿರುತ್ತದೆ, ಆದರೆ ಕಂಟೇನರ್‌ಗಳು ಚಲಾಯಿತಗೊಳ್ಳುತ್ತಿರುವಾಗಲೆ ಅವುಗಳನ್ನು ವರ್ಗಾಯಿಸಲು ಸಾಧ್ಯವಿರುವುದಿಲ್ಲ ಮತ್ತು ಒಂದು ಆತಿಥೇಯ ಗಣಕದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಮೊದಲು ಅದನ್ನು ನಿಲ್ಲಿಸಬೇಕಿರುತ್ತದೆ.
ಕಂಟೇನರ್‌ಗಳು ಎಲ್ಲಾ ಸನ್ನಿವೇಶಗಳಲ್ಲಿಯೂ ವರ್ಚುವಲ್‌ ಗಣಕಗಳಿಗೆ ಬದಲಿವ್ಯವಸ್ಥೆಯಾಗಿರುವುದಿಲ್ಲ. ನಿಮ್ಮ ಅನ್ವಯಕ್ಕೆ ಯಾವುದು ಉತ್ತಮವಾದುದು ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಿರುತ್ತದೆ.
ಡಾಕರ್‌ ಕಂಟೇನರ್‌ಗಳ ಬಳಕೆಯ ಕುರಿತಾದ ಕ್ಷಿಪ್ರವಾದ ಮಾಹಿತಿಗಾಗಿ, Get Started with Docker Containers ಅನ್ನು ನೋಡಿ.
Docker FAQನಲ್ಲಿ ಲಿನಕ್ಸ್ ಕಂಟೇನರ್‌ಗಳು, ಡಾಕರ್, ಚಂದಾದಾರಿಕೆಗಳು ಮತ್ತು ಬೆಂಬಲದ ಬಗೆಗಿನ ಹೆಚ್ಚಿನ ಮಾಹಿತಿಯು ಇದೆ.

10.4. Red Hat Enterprise Linux 7.1 ನಲ್ಲಿ ಡಾಕರ್ ಅನ್ನು ಬಳಸುವಿಕೆ

ಡಾಕರ್, ಕ್ಯೂಬರ್ನೇಟ್ಸ್, ಮತ್ತು ಡಾಕರ್ ರಿಜಿಸ್ಟ್ರಿಯನ್ನು Red Hat Enterprise Linux ನಲ್ಲಿನ ಎಕ್ಸ್‌ಟ್ರಾಸ್ ಚಾನಲ್‌ನ ಒಂದು ಭಾಗವಾಗಿ ಬಿಡುಗಡೆ ಮಾಡಲಾಗಿದೆ. ಎಕ್ಸ್‌ಟ್ರಾಸ್ ಚಾನಲ್‌ ಅನ್ನು ಸಕ್ರಿಯಗೊಳಿಸಿದ ನಂತರ, ಪ್ಯಾಕೇಜುಗಳನ್ನು ಸಾಮಾನ್ಯವಾದ ವಿಧಾನದಿಂದ ಅನುಸ್ಥಾಪಿಸಲು ಸಾಧ್ಯವಿರುತ್ತದೆ. ಪ್ಯಾಕೇಜುಗಳನ್ನು ಅನುಸ್ಥಾಪಿಸುವ ಅಥವ ಚಾನಲ್‌ಗಳನ್ನು ಸಕ್ರಿಯಗೊಳಿಸುವ ಕುರಿತಾದ ಹೆಚ್ಚಿನ ಮಾಹಿತಿಗಾಗಿ, System Administrator's Guide ಅನ್ನು ನೋಡಿ.
ಪ್ರಮಾಣಿಕೃತ ಡಾಕರ್ ಚಿತ್ರಿಕೆಗಳ ರಿಜಿಸ್ಟ್ರಿಯನ್ನು Red Hat ಒದಗಿಸುತ್ತದೆ. ಈ ರಿಜಿಸ್ಟ್ರಿಯು Red Hat Enterprise Linux 6 ಮತ್ತು Red Hat Enterprise Linux 7 ಕ್ಕಾಗಿ ಅನ್ವಯಗಳನ್ನು ನಿರ್ಮಿಸಲು ಮೂಲ ಚಿತ್ರಿಕೆಯನ್ನು ಮತ್ತು Red Hat Enterprise Linux 7.1 ಅನ್ನು ಡಾಕರ್‌ನೊಂದಿಗೆ ಬಳಸಲು ಸುಲಭವಾಗುವಂತೆ ಪೂರ್ವ-ನಿರ್ಮಿತ ಪರಿಹಾರಗಳನ್ನು ಒದಗಿಸುತ್ತದೆ. ರಿಜಿಸ್ಟ್ರಿ ಬಗೆಗಿನ ಮಾಹಿತಿ ಮತ್ತು ಲಭ್ಯವಿರುವ ಪ್ಯಾಕೇಜುಗಳ ಒಂದು ಪಟ್ಟಿಗಾಗಿ, Docker Images ಅನ್ನು ನೋಡಿ.

ಅಧ್ಯಾಯ 11. ದೃಢೀಕರಣ ಹಾಗು ಇಂಟರ್‌ಆಪರೇಬಿಲಿಟಿ

ಕೈಯಾರೆ ಬ್ಯಾಕ್ಅಪ್ ಹಾಗು ಮರುಸ್ಥಾಪನೆ ಮಾಡುವ ಸೌಲಭ್ಯ

ಈ ಅಪ್‌ಡೇಟ್ ಐಡೆಂಟಿಟಿ ಮ್ಯಾನೇಜ್ಮೆಂಟ್‌ಗೆ (IdM) ipa-backup ಮತ್ತು ipa-restore ಆದೇಶಗಳನ್ನು ಪರಿಚಯಿಸುತ್ತದೆ, ಇದರಿಂದಾಗಿ ಬಳಕೆದಾರರು ತಮ್ಮ IdM ಮಾಹಿತಿಯನ್ನು ಕೈಯಾರೆ ಬ್ಯಾಕ್ ಅಪ್ ಮಾಡಲು ಮತ್ತು ಯಂತ್ರಾಂಶ ವಿಫಲಗೊಂಡಾಗ ಅವುಗಳನ್ನು ಮರಳಿ ಸ್ಥಾಪಿಸಲು ಸಾಧ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ipa-backup(1) ಮತ್ತು ipa-restore(1) ಮ್ಯಾನುವಲ್ ಪುಟವನ್ನು ಅಥವ ಸಂಬಂಧಿತ FreeIPA ದಸ್ತಾವೇಜನ್ನು ನೋಡಿ.

ಪ್ರಮಾಣಪತ್ರ ಅಥಾರಿಟಿ ವ್ಯವಸ್ಥಾಪನಾ ಉಪಕರಣ

ipa-cacert-manage renew ಆದೇಶವನ್ನು ಐಡೆಂಟಿಟಿ ಮ್ಯಾನೇಜ್ಮೆಂಟ್‌ (IdM) ಕ್ಲೈಂಟ್‌ಗೆ ಸೇರಿಸಲಾಗಿದೆ, ಇದು IdM ಸರ್ಟಿಫಿಕೇಶನ್ ಅತಾರಿಟಿ (CA) ಕಡತವನ್ನು ನವೀಕರಿಸಲು ಸಾಧ್ಯವಿರುತ್ತದೆ. ಇದರಿಂದಾಗಿ ಬಳಕೆದಾರರು ಒಂದು ಹೊರಗಿನ CA ಇಂದ ಸಹಿ ಮಾಡಲಾದ ಪ್ರಮಾಣಪತ್ರವನ್ನು ಬಳಸಿಕೊಂಡು IdM ಅನ್ನು ಸುಲಭವಾಗಿ ಅನುಸ್ಥಾಪಿಸಲು ಮತ್ತು ಸಾಧ್ಯವಿರುತ್ತದೆ. ಈ ಸೌಲಭ್ಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ipa-cacert-manage(1) ಮ್ಯಾನುವಲ್ ಪುಟವನ್ನು ಅಥವ ಸಂಬಂಧಿಸಿ FreeIPA ದಸ್ತಾವೇಜನ್ನು ನೋಡಿ.

ಹೆಚ್ಚಿಸಲಾದ ಅತಿ ಸೂಕ್ಷ್ಮವಾದ ಎಕ್ಸೆಸ್ ಕಂಟ್ರೋಲ್‌

(IdM) ಪೂರೈಕೆಗಣಕದ UI ನಲ್ಲಿನ ನಿಶ್ಚಿತ ವಿಭಾಗಗಳ ಓದುವ ಅನುಮತಿಗಳನ್ನು ಈಗ ಕ್ರಮಬದ್ಧಗೊಳಿಸಲು ಸಾಧ್ಯವಿರುತ್ತದೆ. ಇದರಿಂದಾಗಿ IdM ಪೂರೈಕೆಗಣಕದ ವ್ಯವಸ್ಥಾಪಕರು ವಿಶೇಷವಾದ ವಿಷಯವನ್ನು ಕೇವಲ ಆಯ್ದ ಬಳಕೆದಾರರಿಗೆ ಮಾತ್ರ ದೊರೆಯುವಂತೆ ಮಿತಿಗೊಳಿಸಲು ಅವಕಾಶ ನೀಡುತ್ತದೆ. ಇದರೆ ಜೊತೆಗೆ, IdM ಪೂರೈಕೆಗಣಕದಲ್ಲಿರುವ ಎಲ್ಲಾ ವಿಷಯಗಳು ಇನ್ನು ಮುಂದೆ ದೃಢೀಕರಿಸಲಾದ ಬಳಕೆದಾರರು ಪೂರ್ವನಿಯೋಜಿತವಾಗಿ ಓದಲು ಅನುಮತಿ ಇರುವುದಿಲ್ಲ. ಈ ಬದಲಾವಣೆಗಳು IdM ಪೂರೈಕೆ ಗಣಕದಲ್ಲಿನ ದತ್ತಾಂಶದ ಒಟ್ಟಾರೆ ಸುರಕ್ಷತೆಯನ್ನು ಸುಧಾರಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, ಸಂಬಂಧಿಸಿದ FreeIPA ದಸ್ತಾವೇಜನ್ನು ನೋಡಿ.

ಅಧಿಕಾರಗಳನ್ನು ಹೊಂದಿರದ ಬಳಕೆದಾರರಿಗೆ ನಿಯಮಿತ ಡೊಮೇನ್ ಲಭ್ಯತೆ

pam_sss ಮಾಡ್ಯೂಲ್ ಅನ್ನು domains= ಆಯ್ಕೆಗೆ ಸೇರಿಸಲಾಗಿದೆ, ಇದು /etc/sssd/sssd.conf ಕಡತದಲ್ಲಿನ domains= ಆಯ್ಕೆಯನ್ನು ಅತಿಕ್ರಮಿಸುತ್ತದೆ. ಇದರ ಜೊತೆಗೆ, ಈ ಅಪ್‌ಡೇಟ್ pam_trusted_users ಆಯ್ಕೆಯನ್ನು ಸೇರಿಸುತ್ತದೆ, ಇದು ಅಂಕೀಯ UIDಗಳು ಅಥವ SSSD ಡೀಮನ್‌ನಿಂದ ನಂಬಲಾದ ಬಳಕೆದಾರ ಹೆಸರುಗಳ ಪಟ್ಟಿಯನ್ನು ಸೇರಿಸಲು, ಮತ್ತು pam_public_domains ಆಯ್ಕೆ ಮತ್ತು ನಂಬಲು ಸಾಧ್ಯವಾಗದೆ ಇರುವ ಬಳಕೆದಾರರಿಗಾಗಿ ನಿಲುಕಬಹುದಾದ ಡೊಮೇನ್‌ಗಳ ಪಟ್ಟಿಯನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಸೂಚಿಸಲಾದ ಹೆಚ್ಚುವರಿ ಅಂಶಗಳು ವ್ಯವಸ್ಥೆಗಳ ಸಂರಚನೆಗೆ ಅವಕಾಶ ನೀಡುತ್ತದೆ, ಇಲ್ಲಿ ಸಾಮಾನ್ಯ ಬಳಕೆದಾರರು ನಿಶ್ಚಿತ ಅನ್ವಯಗಳನ್ನು ನಿಲುಕಿಸಿಕೊಳ್ಳಲು ಸಾಧ್ಯವಿರುತ್ತದೆ, ಆದರೆ ಸ್ವತಃ ವ್ಯವಸ್ಥೆಗೆ ಪ್ರವೇಶಿಸಲು ಅಧಿಕಾರಗಳನ್ನು ಹೊಂದಿರುವುದಿಲ್ಲ. ಈ ಸೌಲಭ್ಯದ ಕುರಿತು ಹೆಚ್ಚುವರಿ ಮಾಹಿತಿಗಾಗಿ, ಸಂಬಂಧಿತ SSSD ದಸ್ತಾವೇಜನ್ನು ನೋಡಿ.

ಕಾಮನ್ ಇಂಟರ್‌ನೆಟ್ ಫೈಲ್ ಸಿಸ್ಟಮ್‌ಗಾಗಿ SSSD ಸಂಯೋಜನೆ

SSSD ಇಂದ ಒದಗಿಸಲಾದ ಒಂದು ಪ್ಲಗ್‌-ಇನ್ ಸಂಪರ್ಕಸಾಧನವು cifs-utils ಸೌಲಭ್ಯವು ಯಾವ ರೀತಿಯಲ್ಲಿ ID-ಮ್ಯಾಪಿಂಗ್ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ ಎಂಬುದನ್ನು ಸಂರಚಿಸುವಂತೆ ಸೇರಿಸಲಾಗಿದೆ. ಇದರ ಫಲಿತಾಂಶವಾಗಿ, SSSD ಕ್ಲೈಂಟ್ ಈಗ ಒಂದು CIFS ಹಂಚಿಕೆಯನ್ನು Winbind ಸೇವೆಯನ್ನು ಚಲಾಯಿಸುತ್ತಿರುವ ಒಂದು ಕ್ಲೈಂಟ್‌ನ ರೀತಿಯಲ್ಲಿಯೆ ನಿಲುಕಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಸಂಬಂಧಿಸಿದ SSSD ದಸ್ತಾವೇಜನ್ನು ನೋಡಿ.

WinSync ನಿಂದ ಟ್ರಸ್ಟ್‌ಗೆ ವರ್ಗಾಯಿಸುವುದಕ್ಕೆ ಬೆಂಬಲ

ಈ ಅಪ್‌ಡೇಟ್ ಬಳಕೆದಾರ ಸಂರಚನೆಯ ವ್ಯವಸ್ಥೆಯಾದಂತಹ ಹೊಸ ID Views ಅನ್ನು ಅಳವಡಿಸುತ್ತದೆ. ಇದು ಆಕ್ಟೀವ್ ಡಿರಕ್ಟರಿ ಇಂದ ಬಳಸಲಾದ WinSync ಹೊಂದಾಣಿಕೆ-ಆಧರಿತವಾದ ಆರ್ಕಿಟೆಕ್ಚರ್ ಇಂದ ಐಡೆಂಟಿಟಿ ಮ್ಯಾನೇಜ್ಮೆಂಟ್ ಬಳಕೆದಾರರನ್ನು ಒಂದು ಸಂಪನ್ಮೂಲ ಆಧರಿತವಾದ ಕ್ರಾಸ್-ರಿಯಾಲ್ಮ್ ಟ್ರಸ್ಟ್‌ಗಳಿಗೆ ವರ್ಗಾಯಿಸುವುದನ್ನು ಸಕ್ರಿಯಗೊಳಿಸುತ್ತದೆ. ID Views ಮತ್ತು ವರ್ಗಾವಣೆ ವಿಧಾನಕ್ಕಾಗಿನ ವಿವರಗಳಿಗಾಗಿ, ಸಂಬಂಧಿತ FreeIPA ದಸ್ತಾವೇಜನ್ನು ನೋಡಿ.

ಸ್ವಯಂಚಾಲಿತ ದತ್ತಾಂಶ ಒದಗಿಸುವವರ ಸಂರಚನೆ

ipa-client-install ಆದೇಶವು ಈಗ ಪೂರ್ವನಿಯೋಜಿತವಾದ SSSD ಅನ್ನು sudo ಸೇವೆಗಾಗಿ ದತ್ತಾಂಶ ಒದಗಿಸುವ ವ್ಯವಸ್ಥೆಯಾಗಿ ಸಂರಚಿಸುತ್ತದೆ. --no-sudo ಆಯ್ಕೆಯನ್ನು ಬಳಸುವ ಮೂಲಕ ಈ ವರ್ತನೆಯನ್ನು ನಿಷ್ಕ್ರಿಯಗೊಳಿಸಬಹುದು. ಇದರ ಜೊತೆಗೆ, ಐಡೆಂಟಿಟಿ ಮ್ಯಾನೇಜ್ಮೆಂಟ್‌ ಕ್ಲೈಂಟ್ ಅನುಸ್ಥಾಪನೆಗಾಗಿ NIS ಡೊಮೇನ್ ಹೆಸರನ್ನು ಸೂಚಿಸಲು --nisdomain ಆಯ್ಕೆಯನ್ನು ಸೇರಿಸಲಾಗಿದೆ, ಮತ್ತು NIS ಡೊಮೇನ್ ಹೆಸರನ್ನು ಸೂಚಿಸುವುದನ್ನು ತಪ್ಪಿಸಲು --no_nisdomain ಆಯ್ಕೆಯನ್ನು ಸೇರಿಸಲಾಗಿದೆ. ಯಾವುದೆ ಆಯ್ಕೆಯನ್ನು ಬಳಸಲಾಗಿರದೆ ಇದ್ದಲ್ಲಿ, ಬದಲಿಗೆ IPA ಡೊಮೇನ್ ಅನ್ನು ಬಳಸಲಾಗುತ್ತದೆ.

AD ಮತ್ತು LDAP sudo ಪ್ರೊವೈಡರಿನ ಬಳಕೆ

AD ಪ್ರೊವೈಡರ್ ಎನ್ನುವುದು ಒಂದು ಆಕ್ಟೀವ್ ಡಿರಕ್ಟಿರಿಗೆ ಸಂಪರ್ಕಸಾಧಿಸಲು ಬಳಸಲಾಗುವ ಒಂದು ಬ್ಯಾಕೆಂಡ್ ಆಗಿರುತ್ತದೆ. Red Hat Enterprise Linux  7.1 ರಲ್ಲಿ, LDAP ಪ್ರೊವೈಡರಿನೊಂದಿಗೆ AD sudo ಅನ್ನು ಬಳಸುವುದನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲವನ್ನು ನೀಡಲಾಗಿದೆ. AD sudo ಪ್ರೊವೈಡರ್ನ್ನು ಸಕ್ರಿಯಗೊಳಿಸಲು, sssd.conf ಕಡತದ ಡೊಮೇನ್ ವಿಭಾಗದಲ್ಲಿ sudo_provider=ad ಸಿದ್ಧತೆಯನ್ನು ಸೇರಿಸಿ.

ಅಧ್ಯಾಯ 12. ಸುರಕ್ಷತೆ

SCAP ಸುರಕ್ಷತಾ ಮಾರ್ಗದರ್ಶಿ

ಸುರಕ್ಷತೆ ಮಾರ್ಗದರ್ಶನ, ಬೇಸ್‌ಲೈನ್‌ಗಳು, ಮತ್ತು ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್ (SCAP) ಅನ್ನು ಬಳಸುವ ಸಂಬಂಧಿತ ವ್ಯಾಲಿಡೇಶನ್‌ ರಚನಾವ್ಯವಸ್ಥೆಯನ್ನು ಒದಗಿಸುವ scap-security-guide ಪ್ಯಾಕೇಜ್‌ ಅನ್ನು Red Hat Enterprise Linux 7.1 ರಲ್ಲಿ ಸೇರಿಸಲಾಗಿದೆ. ಮಾರ್ಗದರ್ಶನವನ್ನು ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್‌ ನಲ್ಲಿ (SCAP) ಸೂಚಿಸಲಾಗಿದೆ, ಇದು ಪ್ರಾಯೋಗಿಕ ಗಟ್ಟಿಗೊಳಿಕೆಯ ಸಲಹೆಯ ಒಂದು ಕೆಟಲಾಗ್ ಅನ್ನು ಹೊಂದಿರುತ್ತದೆ. SCAP ಸೆಕ್ಯುರಿಟಿ ಗೈಡ್‌ನಲ್ಲಿ ಸೂಚಿಸಲಾದ ಸುರಕ್ಷತಾ ಅಗತ್ಯತೆಗಳಿಗೆ ಸಂಬಂಧಿಸಿದಂತೆ ವ್ಯವಸ್ಥೆಯ ಸುರಕ್ಷತಾ ಅನುಸರಣೆ ಶೋಧನೆಯನ್ನು ಮಾಡಲು ಬೇಕಿರುವ ಮಾಹಿತಿಯನ್ನು ಹೊಂದಿರುತ್ತದೆ; ಬರೆಯಲಾದ ವಿವರಣೆ ಮತ್ತು ಒಂದು ಸ್ವಯಂಚಾಲಿತ ಪರೀಕ್ಷೆಯನ್ನು (ತನಿಖೆ) ಸೇರಿಸಲಾಗಿರುತ್ತದೆ. ಪರೀಕ್ಷೆಯನ್ನು ಸ್ವಯಂಚಾಲಿತಗೊಳಿಸುವುದರಿಂದ, SCAP ಸೆಕ್ಯುರಿಟಿ ಗೈಡ್‌ ಕಾಲಕಾಲಕ್ಕೆ ವ್ಯವಸ್ಥೆಯ ಅನುಸರಣೆಯನ್ನು ಪರೀಕ್ಷಿಸಲು ಸುಲಭವಾದ ಮತ್ತು ನಂಬಿಕಾರ್ಹವಾದ ಮಾರ್ಗವನ್ನು ಒದಗಿಸುತ್ತದೆ.
Red Hat Enterprise Linux 7.1 ವ್ಯವಸ್ಥೆಯ ನಿರ್ವಾಹಕರು ವ್ಯವಸ್ಥೆಯು ಒದಗಿಸಲಾದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿದೆಯೆ ಎಂಬುದನ್ನು openscap-utils ಪ್ಯಾಕೇಜ್‌ನಲ್ಲಿನ oscap ಬಳಸಿಕೊಂಡು ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ scap-security-guide(8) ಮ್ಯಾನುವಲ್ ಪುಟವನ್ನು ನೋಡಿ.

SELinux ಪಾಲಿಸಿ

Red Hat Enterprise Linux 7.1 ರಲ್ಲಿ, SELinux ಪಾಲಿಸಿಯನ್ನು ಮಾರ್ಪಡಿಸಲಾಗಿದೆ; ಈ ಹಿಂದೆ init_t ಡೊಮೇನ್ ನಲ್ಲಿ ಚಲಾಯಿತಗೊಳ್ಳುತ್ತಿದಂತಹ ತಮ್ಮದೆ ಆದ SELinux ಪಾಲಿಸಿಯನ್ನು ಹೊಂದಿರದ ಸೇವೆಗಳು ಈಗ ಹೊಸದಾಗಿ ಸೇರಿಸಲಾದ unconfined_service_t ಡೊಮೇನ್‌ನಲ್ಲಿ ಚಲಾಯಿತಗೊಳ್ಳುತ್ತವೆ. SELinux User's and Administrator's Guide ನಲ್ಲಿನ Red Hat Enterprise Linux 7.1 ಗಾಗಿನ Unconfined Processes ಅಧ್ಯಾಯವನ್ನು ನೋಡಿ.

OpenSSH ನಲ್ಲಿನ ಹೊಸ ಸೌಲಭ್ಯಗಳು

OpenSSH ಉಪಕರಣಗಳ ಸಂಗ್ರಹವನ್ನು ಆವೃತ್ತಿ 6.6.1p1 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಕ್ರಿಪ್ಟೊಗ್ರಫಿಗೆ ಸಂಬಂಧಿಸಿದಂತೆ ಈ ಕೆಳಗಿನ ಹಲವಾರು ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ:
  • Daniel Bernstein ನ Curve25519 ನಲ್ಲಿನ ಎಲಿಪ್ಟಿಕಲ್-ಕರ್ವ್ Diffie-Hellman ಬಳಸಿಕೊಂಡು ಕೀಲಿ ವಿನಿಮಯವನ್ನು ಈಗ ಬೆಂಬಲಿಸಲಾಗುತ್ತದೆ. ಪೂರೈಕೆಗಣಕ ಮತ್ತು ಕ್ಲೈಂಟ್ ಎರಡೂ ಸಹ ಬೆಂಬಲಿಸಿದಲ್ಲಿ ಈ ವಿಧಾನವನ್ನು ಈಗ ಪೂರ್ವನಿಯೋಜಿತವಾಗಿ ಒದಗಿಸಲಾಗುತ್ತದೆ.
  • Ed25519 ಎಲಿಪ್ಟಿಕಲ್ ಸಿಗ್ನೇಚರ್ ಸ್ಕೀಮ್ ಅನ್ನು ಸಾರ್ವಜನಿಕ ಕೀಲಿಯ ಬಗೆಯಾಗಿ ಬಳಸುವುದಕ್ಕೆ ಬೆಂಬಲವನ್ನು ಸೇರಿಸಲಾಗಿದೆ. ಬಳಕೆದಾರ ಮತ್ತು ಆತಿಥೇಯ ಕೀಲಿಗಳಿಗಾಗಿ ಬಳಸಬಹುದಾದ Ed25519 ಯು ECDSA ಮತ್ತು DSA ಗಿಂತ ಉತ್ತಮವಾದ ಸುರಕ್ಷತೆಯನ್ನು ಒದಗಿಸುತ್ತದೆ.
  • bcrypt ಕೀಲಿ-ಡಿರೈವೇಶನ್ ಫಂಕ್ಷನ್ ಅನ್ನು (KDF) ಬಳಸುವ ಒಂದು ಹೊಸ ಖಾಸಗಿ-ಕೀಲಿ ಫಾರ್ಮ್ಯಾಟ್ ಅನ್ನು ಸೇರಿಸಲಾಗಿದೆ. ಪೂರ್ವನಿಯೋಜಿತವಾಗಿ, ಈ ಫಾರ್ಮ್ಯಾಟ್ ಅನ್ನು Ed25519 ಕೀಲಿಗಳಿಗಾಗಿ ಬಳಸಲಾಗುತ್ತದೆ ಆದರೆ ಇತರೆ ಬಗೆಗಳ ಕೀಲಿಗಳಿಗಾಗಿಯೂ ಸಹ ಮನವಿ ಮಾಡಬಹುದಾಗಿದೆ.
  • ಒಂದು ಹೊಸ ವರ್ಗಾವಣೆ ಸಿಫರ್‌ ಆದಂತಹ, chacha20-poly1305@openssh.com ಅನ್ನೂ ಸಹ ಸೇರಿಸಲಾಗಿದೆ. ಇದು Daniel Bernstein ನ ChaCha20 ಸ್ಟ್ರೀಮ್ ಸಿಫರ್ ಮತ್ತು Poly1305 ಮೆಸೇಜ್ ಅತೆಂಟಿಕೇಶನ್ ಕೋಡ್ (MAC) ಅನ್ನು ಒಟ್ಟುಗೂಡಿಸುತ್ತದೆ.

Libreswan ನಲ್ಲಿನ ಹೊಸ ಸೌಲಭ್ಯಗಳು

IPsec VPN ನ ಅಳವಡಿಕೆಯಾದಂತಹ Libreswan ಅನ್ನು ಆವೃತ್ತಿ 3.12 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಹಲವಾರು ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ:
  • ಹೊಸ ಸಿಫರ್‌ಗಳನ್ನು ಸೇರಿಸಲಾಗಿದೆ.
  • IKEv2 ಬೆಂಬಲವನ್ನು ಸುಧಾರಿಸಲಾಗಿದೆ (CP ಪೇಲೋಡ್‌ಗಳಿಗೆ, CREATE_CHILD_SA ಮನವಿಗಳಿಗೆ ಸಂಬಂಧಿಸಿದಂತೆ), ಮತ್ತು Authenticated Header (AH) ಗಾಗಿ ಬೆಂಬಲವನ್ನು ಸೇರಿಸಲಾಗಿದೆ.
  • ಮಧ್ಯಂತರ ಪ್ರಮಾಣಪತ್ರ ಸರಣಿ ಬೆಂಬಲವನ್ನು IKEv1 ಮತ್ತು IKEv2 ಯಲ್ಲಿ ಸೇರಿಸಲಾಗಿದೆ.
  • ಸಂಪರ್ಕವನ್ನು ನಿಭಾಯಿಸುವಿಕೆಯನ್ನು ಸುಧಾರಿಸಲಾಗಿದೆ.
  • OpenBSD, Cisco, ಮತ್ತು Android ವ್ಯವಸ್ಥೆಗಳೊಂದಿಗೆ ಸುಧಾರಿತ ಇಂಟರ್‌ಆಪರೆಬಿಲಿಟಿ.
  • systemd ಬೆಂಬಲವನ್ನು ಸುಧಾರಿಸಲಾಗಿದೆ.
  • ಹ್ಯಾಶ್ ಮಾಡಲಾದ CERTREQ ಮತ್ತು ಟ್ರಾಫಿಕ್ ಅಂಕಿಅಂಶಗಳಿಗಾಗಿ ಬೆಂಬಲವನ್ನು ಸೇರಿಸಲಾಗಿದೆ.

TNC ಯಲ್ಲಿನ ಹೊಸ ಸೌಲಭ್ಯಗಳು

strongimcv ಪ್ಯಾಕೇಜಿನಿಂದ ಒದಗಿಸಲಾಗುವ ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್ (TNC) ಆರ್ಕಿಟೆಕ್ಚರ್ ಅನ್ನು ಅಪ್‌ಡೇಟ್ ಮಾಡಲಾಗಿದೆ, ಮತ್ತು ಈಗ ಅದು strongSwan 5.2.0 ಮೇಲೆ ಆಧರಿತವಾಗಿರುತ್ತದೆ. TNC ಗೆ ಈ ಕೆಳಗಿನ ಹೊಸ ಸೌಲಭ್ಯಗಳು ಮತ್ತು ಸುಧಾರಣೆಗಳನ್ನು ಸೇರಿಸಲಾಗಿದೆ:
  • ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್‌ಗಾಗಿನ PT-EAP ವರ್ಗಾವಣೆ ಪ್ರೊಟೊಕಾಲ್ (RFC 7171) ಅನ್ನು ಸೇರಿಸಲಾಗಿದೆ.
  • ಅಟೆಸ್ಟೇಶನ್ IMC/IMV ಜೋಡಿಯು ಈಗ IMA-NG ಅಳತೆಯ ವಿನ್ಯಾಸವನ್ನು ಬೆಂಬಲಿಸುತ್ತದೆ.
  • ಹೊಸ TPMRA ಕೆಲಸದ ಅಂಶವನ್ನು ಸೇರಿಸುವ ಮೂಲಕ ಅಟೆಸ್ಟೇಶನ್ IMV ಬೆಂಬಲವನ್ನು ಸುಧಾರಿಸಲಾಗಿದೆ.
  • SWID IMV ಯೊಂದಿಗಿನ JSON-ಆಧರಿತವಾದ REST API ಗೆ ಬೆಂಬಲವನ್ನು ಸೇರಿಸಲಾಗಿದೆ.
  • SWID IMC ಯು swidGenerator ಅನ್ನು ಬಳಸಿಕೊಂಡು dpkg, rpm, ಅಥವ pacman ದಿಂದ ಎಲ್ಲಾ ಅನುಸ್ಥಾಪಿತ ಪ್ಯಾಕೇಜುಗಳನ್ನು ಹೊರತೆಗೆಯಬಲ್ಲದು, ಇದು ಹೊಸ ISO/IEC 19770-2:2014 ಶಿಷ್ಟತೆಗೆ ಅನುಸಾರವಾಗಿ SWID ಟ್ಯಾಗ್‌ಗಳನ್ನು ಉತ್ಪಾದಿಸಬಲ್ಲದು.
  • EAP-(T)TLS ಮತ್ತು ಇತರೆ ಪ್ರೊಟೊಕಾಲ್‌ಗಳಿಂದ ಬಳಸಲಾದ libtls TLS 1.2 ಅಳವಡಿಕೆಯನ್ನು AEAD ಮೋಡ್ ಬೆಂಬಲಕ್ಕೆ ಅಪ್‌ಡೇಟ್ ಮಾಡಲಾಗಿದೆ, ಆದರೆ ಇದನ್ನು ಪ್ರಸಕ್ತ AES-GCM ಗೆ ಮಿತಿಗೊಳಿಸಲಾಗಿತ್ತು.
  • aikgen ಉಪಕರಣವು ಈಗ TPM ಗೆ ಬೌಂಡ್ ಆದಂತಹ ಅಟೆಸ್ಟೇಶನ್ ಐಡೆಂಟಿಟಿ ಕೀಲಿಯನ್ನು ಉತ್ಪಾದಿಸುತ್ತದೆ.
  • ಎಕ್ಸೆಸ್ ರಿಕ್ವೆಸ್ಟರ್ ID, ಸಾಧನ ID, ಮತ್ತು ಒಂದು ಎಕ್ಸೆಸ್ ರಿಕ್ವೆಸ್ಟರ್ ಮುಖಾಂತರದ ಉತ್ಪನ್ನ ಮಾಹಿತಿಯನ್ನು ಒಂದು ಸಾಮಾನ್ಯ imv_session ವಸ್ತುವಿನ ಮೂಲಕ ಹಂಚಿಕೆಕೊಳ್ಳುವಿಕೆಗಾಗಿ IMVಗಳ ಬೆಂಬಲನ್ನು ಸುಧಾರಿಸಲಾಗಿದೆ.
  • ಈಗಿರುವ IF-TNCCS (PB-TNC, IF-M (PA-TNC)) ಪ್ರೊಟೊಕಾಲ್‌ಗಳಲ್ಲಿ, ಮತ್ತು OS IMC/IMV ಜೋಡಿಯಲ್ಲಿ ಹಲವಾರು ದೋಷಗಳನ್ನು ಸರಿಪಡಿಸಲಾಗಿದೆ.

GnuTLS ನಲ್ಲಿನ ಹೊಸ ಸೌಲಭ್ಯಗಳು

SSL, TLS, ಮತ್ತು DTLS ಪ್ರೊಟೊಕಾಲ್‌ಗಳ The GnuTLS ಅಳವಡಿಕೆಯನ್ನು ಆವೃತ್ತಿ 3.3.8 ಕ್ಕೆ ಅಪ್‌ಡೇಟ್ ಮಾಡಲಾಗಿದೆ, ಇದು ಹಲವಾರು ಹೊಸ ಸೌಲಭ್ಯಗಳು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ:
  • DTLS 1.2 ಗಾಗಿನ ಬೆಂಬಲವನ್ನು ಸೇರಿಸಲಾಗಿದೆ.
  • ಅಪ್ಲಿಕೇಶನ್ ಲೇಯರ್ ಪ್ರೊಟೊಕಾಲ್ ನೆಗೋಶಿಯೇಶನ್‌ಗೆ (ALPN) ಬೆಂಬಲವನ್ನು ಸೇರಿಸಲಾಗಿದೆ.
  • ಎಲಿಪ್ಟಿಕ್-ಕರ್ವ್ ಸಿಫರ್ ಸೂಟ್‌ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲಾಗಿದೆ
  • ಹೊಸ ಸಿಫರ್ ಸೂಟ್‌ಗಳು, RSA-PSK ಮತ್ತು CAMELLIA-GCM ಅನ್ನು ಸೇರಿಸಲಾಗಿದೆ.
  • ಟ್ರಸ್ಟೆಡ್ ಪ್ಲಾಟ್‌ಫಾರ್ಮ್ ಮಾಡ್ಯೂಲ್ (TPM) ಶಿಷ್ಟತೆಗಾಗಿನ ಸ್ಥಳೀಯ ಬೆಂಬಲವನ್ನು ಸೇರಿಸಲಾಗಿದೆ.
  • PKCS#11 ಸ್ಮಾರ್ಟ್ ಕಾರ್ಡ್‌ಗಳು ಮತ್ತು ಹಾರ್ಡ್‌ವೇರ್ ಸೆಕ್ಯುರಿಟಿ ಮಾಡ್ಯೂಲ್ಸ್‌ (HSM)ಗಾಗಿನ ಬೆಂಬಲವನ್ನು ಹಲವಾರು ರೀತಿಯಲ್ಲಿ ಉತ್ತಮಗೊಳಿಸಲಾಗಿದೆ .
  • FIPS 140 (ಫೆಡರಲ್ ಇನ್‌ಫರ್ಮೇಶನ್ ಪ್ರೊಸಸಿಂಗ್ ಸ್ಟಾಂಡರ್ಡ್ಸ್) ಸುರಕ್ಷತಾ ಶಿಷ್ಟತೆಗಳೊಂದಿಗಿನ ಹೊಂದಾಣಿಕೆಯನ್ನು ಹಲವಾರು ರೀತಿಯಲ್ಲಿ ಉತ್ತಮಗೊಳಿಸಲಾಗಿದೆ.

ಅಧ್ಯಾಯ 13. ಗಣಕತೆರೆ

ಕ್ವಾಡ್-ಬಫರ್‌ ಮಾಡಲಾದ OpenGL ಸ್ಟೀರಿಯೊ ವಿಶುವಲ್‌ಗಳಿಗಾಗಿನ ಬೆಂಬಲ

GNOME ಶೆಲ್ ಮತ್ತು ಮಟರ್ ಸಮ್ಮಿಶ್ರಗೊಳಿಸಲಾದ ಕಿಟಕಿ ವ್ಯವಸ್ಥಾಪಕವು ಈಗ ಬೆಂಬಲಿತ ಯಂತ್ರಾಂಶದಲ್ಲಿ ಕ್ವಾಡ್-ಬಫರ್ ಮಾಡಲಾದ OpenGL ಸ್ಟೀರಿಯೊ ವಿಶುವಲ್‌ ಅನ್ನು ಬಳಸಲು ಅವಕಾಶ ನೀಡುತ್ತದೆ. ಈ ಸೌಲಭ್ಯವನ್ನು ಸರಿಯಾಗಿ ಬಳಸಲು ನೀವು NVIDIA Display Driver ಆವೃತ್ತಿ 337 ಅಥವ ನಂತರದ್ದನ್ನು ಹೊಂದಿರಬೇಕು.

ಆನ್‌ಲೈನ್ ಖಾತೆ ಒದಗಿಸುವವರು

GSettings ಕೀಲಿ org.gnome.online-accounts.whitelisted-providers ಅನ್ನು GNOME ಆನ್‌ಲೈನ್ ಅಕೌಂಟ್ಸ್‌ಗೆ (gnome-online-accounts ಪ್ಯಾಕೇಜಿನಿಂದ ಒದಗಿಸಲಾಗುತ್ತದೆ) ಸೇರಿಸಲಾಗಿದೆ. ಈ ಕೀಲಿಯು ಆರಂಭಗೊಳ್ಳುವಾಗ ಲೋಡ್‌ ಆಗಲು ಸ್ಪಷ್ಟವಾದ ಅನುಮತಿಯನ್ನು ಹೊಂದಿರುವ ಆನ್‌ಲೈನ್ ಖಾತೆಯನ್ನು ಒದಗಿಸುವವರ ಪಟ್ಟಿಯನ್ನು ಒದಗಿಸುತ್ತದೆ. ಈ ಕೀಲಿಯನ್ನು ಸೂಚಿಸುವ ಮೂಲಕ, ವ್ಯವಸ್ಥೆಯ ನಿರ್ವಾಹಕರು ಸೂಕ್ತವಾದ ಒದಗಿಸುವವರನ್ನು ಸಕ್ರಿಯಗೊಳಿಸಬಹುದು ಅಥವ ಬೇಡವಾದ ಇತರರನ್ನು ನಿಷ್ಕ್ರಿಯಗೊಳಿಸಬಹುದು.

ಅಧ್ಯಾಯ 14. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ

ABRT ಅಂಗೀಕೃತ ಕಿರು-ವರದಿ ಮಾಡುವಿಕೆ

Red Hat Enterprise Linux 7.1 ರಲ್ಲಿ, ಆಟೊಮ್ಯಾಟಿಕ್ ಬಗ್ ರಿಪೋರ್ಟಿಂಗ್ ಟೂಲ್ (ABRT) Red Hat ಕಸ್ಟಮರ್ ಪೋರ್ಟಲ್‌ನೊಂದಿಗೆ ಈಗ ಇನ್ನೂ ಹೆಚ್ಚಿನ ಸಕ್ಷಮತೆಯ ಸಂಯೋಜನೆಯನ್ನು ಹೊಂದಿದೆ ಮತ್ತು ಪೋರ್ಟಲ್‌ಗೆ ನೇರವಾಗಿ ಕಿರು-ವರದಿಗಳನ್ನು ಕಳುಹಿಸಲು ಸಾಧ್ಯವಿರುತ್ತದೆ. ಇದರಿಂದಾಗಿ ABRTಯು ಬಳಕೆದಾರರಿಗೆ ಒಟ್ಟಾರೆಯಾದ ಕುಸಿತದ ಅಂಕಿಅಂಶಗಳನ್ನು ಕಳುಹಿಸಲು ಸಾಧ್ಯವಿರುತ್ತದೆ. ಇದರ ಜೊತೆಗೆ, ABRTಯು ಕಿರು-ವರದಿಗಳನ್ನು ದೃಢೀಕರಿಸಲು ಎಂಟೈಟಲ್ಮೆಂಟ್ ಪ್ರಮಾಣಪತ್ರಗಳನ್ನು ಅಥವ ಬಳಕೆದಾರರ ಪೋರ್ಟಲ್ ಪ್ರವೇಶ ರುಜುವಾತುಗಳನ್ನು ಬಳಸುವ ಆಯ್ಕೆಯನ್ನು ನೀಡುತ್ತದೆ, ಇದರಿಂದಾಗಿ ಈ ಸೌಲಭ್ಯವನ್ನು ಸಂರಚಿಸುವ ಪ್ರಕ್ರಿಯೆಯು ಸರಳವಾಗುತ್ತದೆ.
ಸಂಯೋಜಿತ ದೃಢೀಕರಣದಿಂದಾಗಿ ABRTಯು ಕಿರು-ವರದಿಗೆ ಒಂದು ಸಮೃದ್ಧ (ರಿಚ್) ಪಠ್ಯದಿಂದ ಪ್ರತ್ಯುತ್ತರಿಸಲು ಸಾಧ್ಯವಿರುತ್ತದೆ, ಹಾಗೂ ಇದು ಕಿರು-ವರದಿಯಲ್ಲಿನ ತೊಂದರೆಯ ಕಾರಣವನ್ನು ಸರಿಪಡಿಸಲು ಸಾಧ್ಯವಿರುವ ಹಂತಗಳನ್ನೂ ಹೊಂದಿರಬಹುದು. ಈ ದೃಢೀಕರಣವನ್ನು ಬಳಿಸಕೊಂಡು ಕಿರು-ವರದಿಗಳಿಗೆ ಸಂಬಂಧಿಸಿದ ಪ್ರಮುಖ ಅಪ್‌ಡೇಟ್‌ಗಳ ಕುರಿತಾದ ಸೂಚನೆಗಳನ್ನೂ ಸಹ ಸಕ್ರಿಯಗೊಳಿಸಲು ಬಳಸಬಹುದಾಗಿರುತ್ತದೆ, ಮತ್ತು ಈ ಸೂಚನೆಗಳನ್ನು ನೇರವಾಗಿ ವ್ಯವಸ್ಥಾಪಕರಿಗೆ ರವಾನಿಸಲು ಸಾಧ್ಯವಿರುತ್ತದೆ.
ದೃಢೀಕರಿಸಲಾದ ಕಿರು-ವರದಿ ಮಾಡುವಿಕೆಯನ್ನು Red Hat Enterprise Linux 7.0 ರಲ್ಲಿ ABRT ಕಿರು-ವರದಿ ಮಾಡುವಿಕೆಯನ್ನು ಈಗಾಗಲೆ ಸಕ್ರಿಯಗೊಳಿಸಲಾದ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗಿರುತ್ತದೆ ಎನ್ನುವುದನ್ನು ನೆನಪಿಡಿ.
ಈ ಸೌಲಭ್ಯದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ತಾಣಕ್ಕೆ ಭೇಟಿಕೊಡಿ.

ಅಧ್ಯಾಯ 15. Red Hat ತಂತ್ರಾಂಶ ಸಂಗ್ರಹಣೆಗಳು

Red Hat ತಂತ್ರಾಂಶ ಸಂಗ್ರಹಣೆಗಳು Red Hat Enterprise Linux 6 ಮತ್ತು Red Hat Enterprise Linux 7 ರ ಬಿಡುಗಡೆಗಳಿಗಾಗಿ AMD64 ಮತ್ತು Intel 64 ಆರ್ಕಿಟೆಕ್ಚರ್‌ಗಳಲ್ಲಿ ನೀವು ಅನುಸ್ಥಾಪಿಸಲು ಮತ್ತು ಬಳಸಲು ಸಾಧ್ಯವಿರುವಂತಹ ಕ್ರಿಯಾತ್ಮಕ ಪ್ರೊಗ್ರಾಮಿಂಗ್ ಭಾಷೆಗಳು, ಡೇಟಾಬೇಸ್‌ ಸರ್ವರ್‌ಗಳು, ಮತ್ತು ಸಂಬಂಧಿತ ಪ್ಯಾಕೇಜುಗಳನ್ನು ಒದಗಿಸುವ Red Hat ಕಂಟೆಂಟ್‌ಗಳ ಸಮೂಹವಾಗಿದೆ.
Red Hat ತಂತ್ರಾಂಶ ಸಂಗ್ರಹಗಳೊಂದಿಗೆ ವಿತರಿಸಲಾಗುವ ಕ್ರಿಯಾತ್ಮಕ ಪ್ರೊಗ್ರಾಮಿಂಗ್ ಭಾಷೆಗಳು, ಡೇಟಾಬೇಸ್ ಸರ್ವರ್‌ಗಳು, ಮತ್ತು ಇತರೆ ಉಪಕರಣಗಳು Red Hat Enterprise Linux ನೊಂದಿಗೆ ನೀಡಲಾಗುವ ಪೂರ್ವನಿಯೋಜಿತ ವ್ಯವಸ್ಥೆ ಉಪಕರಣಗಳಿಗೆ ಬದಲಿಯಾಗುವುದಿಲ್ಲ, ಅಥವ ಅವುಗಳನ್ನು ಇತರೆ ಉಪಕರಣಗಳೊಂದಿಗೆ ಆದ್ಯತೆಯಲ್ಲಿ ಬಳಸಲಾಗುವುದಿಲ್ಲ.
Red Hat ತಂತ್ರಾಂಶ ಸಂಗ್ರಹವು ಒಂದು ಸಮಾನಾಂತರವಾದ ಪ್ಯಾಕೇಜುಗಳ ಸಂಗ್ರಹವನ್ನು ಒದಗಿಸಲು scl ಸೌಲಭ್ಯಕ್ಕೆ ಆಧರಿತವಾಗಿ ಪರ್ಯಾಯ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಬಳಸುತ್ತದೆ. ಈ ಸಮೂಹವು Red Hat Enterprise Linux ನಲ್ಲಿ ಪರ್ಯಾಯ ಪ್ಯಾಕೇಜ್ ಆವೃತ್ತಿಗಳನ್ನು ಸಕ್ರಿಯಗೊಳಿಸುತ್ತದೆ. scl ಸೌಲಭ್ಯವನ್ನು ಬಳಸುವ ಮೂಲಕ, ಬಳಕೆದಾರರು ತಮಗೆ ಬೇಕಿರುವ ಯಾವುದೆ ಪ್ಯಾಕೇಜ್ ಆವೃತ್ತಿಯನ್ನು ಚಲಾಯಿಸಲು ಆಯ್ಕೆ ಮಾಡಿಕೊಳ್ಳಬಹುದು.

ಮಹತ್ವ

Red Hat ತಂತ್ರಾಂಶ ಸಂಗ್ರಹಗಳು Red Hat Enterprise Linux ನ ಹೋಲಿಕೆಯಲ್ಲಿ ಸಂಕ್ಷಿಪ್ತವಾದ ಜೀವನ ಚಕ್ರವನ್ನು ಮತ್ತು ಬೆಂಬಲದ ಅವಧಿಯನ್ನು ಹೊಂದಿವೆ. ಹೆಚ್ಚಿನ ಮಾಹಿತಿಗಾಗಿ, Red Hat Software Collections Product Life Cycle ಅನ್ನು ನೋಡಿ.
Red Hat ವಿಕಸನೆಗಾರ ಟೂಲ್‌ಸೆಟ್ ಈಗ Red Hat ತಂತ್ರಾಂಶ ಸಂಗ್ರಹಗಳ ಒಂದು ಭಾಗವಾಗಿದ್ದು, ಇದನ್ನು ಒಂದು ಪ್ರತ್ಯೇಕ ತಂತ್ರಾಂಶ ಸಂಗ್ರಹವಾಗಿ ಸೇರಿಸಲಾಗಿದೆ. Red Hat ವಿಕಸನೆಗಾರ ಟೂಲ್‌ಸೆಟ್ ಅನ್ನು Red Hat Enterprise Linux ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವ ವಿಕಸನೆಗಾರರಿಗಾಗಿ ವಿನ್ಯಸಿಸಲಾಗಿದೆ. ಇದು GNU ಕಂಪೈಲರ್ ಸಂಗ್ರಹ, GNU ಡೀಬಗ್ಗರ್, ಎಕ್ಲಿಪ್ಸ್ ವಿಕಸನಾ ಪ್ಲಾಟ್‌ಫಾರ್ಮ್, ಮತ್ತು ಇತರೆ ವಿಕಸನೆ, ಡೀಬಗ್ಗಿಂಗ್, ಮತ್ತು ಕಾರ್ಯನಿರ್ವಹಣಾ ಮೇಲ್ವಿಚಾರಣೆ ಉಪಕರಣಗಳನ್ನು ಹೊಂದಿರುತ್ತದೆ.
ಈ ಸಮೂಹದೊಂದಿಗೆ ನೀಡಲಾದ ಘಟಕಗಳು, ವ್ಯವಸ್ಥೆಯ ಅಗತ್ಯತೆಗಳು, ಗೊತ್ತಿರುವ ತೊಂದರೆಗಳು, ಬಳಕೆ, ಮತ್ತು ಪ್ರತ್ಯೇಕ ತಂತ್ರಾಂಶ ಸಂಗ್ರಹಗಳ ನಿಶ್ಚಿತ ಮಾಹಿತಿಗಾಗಿ Red Hat Software Collections documentation ಅನ್ನು ನೋಡಿ.
ಈ ತಂತ್ರಾಂಶ ಸಂಗ್ರಹಣೆಯಲ್ಲಿ ಸೇರಿಸಲಾದ ಘಟಕಗಳು, ಅನುಸ್ಥಾಪನೆ, ಬಳಕೆ ಮತ್ತು ಗೊತ್ತಿರುವ ತೊಂದರೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ Red Hat Developer Toolset documentation ಅನ್ನು ನೋಡಿ.

ಭಾಗ II. ಸಾಧನದ ಚಾಲಕಗಳು

ಈ ಅಧ್ಯಾಯವು Red Hat Enterprise Linux 7.1 ನಲ್ಲಿ ಅಪ್‌ಡೇಟ್ ಮಾಡಲಾದ ಎಲ್ಲಾ ಸಾಧನ ಚಾಲಕಗಳ ವ್ಯಾಪಕವಾದ ಒಂದು ಪಟ್ಟಿಯನ್ನು ಒದಗಿಸುತ್ತದೆ.

ಅಧ್ಯಾಯ 16. ಶೇಖರಣಾ ಚಾಲಕ ಅಪ್‌ಡೇಟ್‌ಗಳು

  • hpsa ಚಾಲಕವನ್ನು ಆವೃತ್ತಿ 3.4.4-1-RH1 ಗೆ ನವೀಕರಿಸಲಾಗಿದೆ.
  • qla2xxx ಚಾಲಕವನ್ನು ಆವೃತ್ತಿ 8.07.00.08.07.1-k1 ಕ್ಕೆ ಅಪ್‌ಡೇಟ್‌ ಮಾಡಲಾಗಿದೆ.
  • qla4xxx ಚಾಲಕವನ್ನು ಆವೃತ್ತಿ 5.04.00.04.07.01-k0 ಗೆ ನವೀಕರಿಸಲಾಗಿದೆ.
  • qlcnic ಚಾಲಕವನ್ನು ಆವೃತ್ತಿ 5.3.61 ಗೆ ನವೀಕರಿಸಲಾಗಿದೆ.
  • netxen_nic ಚಾಲಕವನ್ನು ಆವೃತ್ತಿ 4.0.82 ಗೆ ನವೀಕರಿಸಲಾಗಿದೆ.
  • qlge ಚಾಲಕವನ್ನು ಆವೃತ್ತಿ 1.00.00.34 ಗೆ ನವೀಕರಿಸಲಾಗಿದೆ.
  • bnx2fc ಚಾಲಕವನ್ನು ಆವೃತ್ತಿ 2.4.2 ಗೆ ನವೀಕರಿಸಲಾಗಿದೆ.
  • bnx2i ಚಾಲಕವನ್ನು ಆವೃತ್ತಿ 2.7.10.1 ಗೆ ನವೀಕರಿಸಲಾಗಿದೆ.
  • cnic ಚಾಲಕವನ್ನು ಆವೃತ್ತಿ 2.5.20 ಗೆ ನವೀಕರಿಸಲಾಗಿದೆ.
  • bnx2x ಚಾಲಕವನ್ನು ಆವೃತ್ತಿ 1.710.51-0 ಗೆ ನವೀಕರಿಸಲಾಗಿದೆ.
  • bnx2 ಚಾಲಕವನ್ನು ಆವೃತ್ತಿ 2.2.5 ಗೆ ನವೀಕರಿಸಲಾಗಿದೆ.
  • megaraid_sas ಚಾಲಕವನ್ನು ಆವೃತ್ತಿ 06.805.06.01-rc1 ಗೆ ನವೀಕರಿಸಲಾಗಿದೆ.
  • mpt2sas ಚಾಲಕವನ್ನು ಆವೃತ್ತಿ 18.100.00.00 ಗೆ ನವೀಕರಿಸಲಾಗಿದೆ.
  • ipr ಚಾಲಕವನ್ನು ಆವೃತ್ತಿ 2.6.0 ಗೆ ನವೀಕರಿಸಲಾಗಿದೆ.
  • kmod-lpfc ಪ್ಯಾಕೇಜುಗಳನ್ನು Red Hat Enterprise Linux 7 ಕ್ಕೆ ಸೇರಿಸಲಾಗಿದ್ದು, ಇದು lpfc ಚಾಲಕವನ್ನು ಫೈಬರ್ ಚಾನಲ್ (FC) ಮತ್ತು ಫೈಬರ್ ಚಾನಲ್ ಓವರ್ ಎತರ್ನೆಟ್ (FCoE) ಅಡಾಪ್ಟರ್‌ಗಳೊಂದಿಗೆ ಬಳಸಿದಾಗ ಹೆಚ್ಚಿನ ಸ್ಥಿರತೆಯನ್ನು ಖಾತ್ರಿ ಪಡಿಸುತ್ತದೆ. lpfc ಚಾಲಕವನ್ನು ಆವೃತ್ತಿ 0:10.2.8021.1 ಕ್ಕೆ ನವೀಕರಿಸಲಾಗಿದೆ.
  • be2iscsi ಚಾಲಕವನ್ನು ಆವೃತ್ತಿ 10.4.74.0r ಗೆ ನವೀಕರಿಸಲಾಗಿದೆ.
  • nvme ಚಾಲಕವನ್ನು ಆವೃತ್ತಿ 0.9 ಗೆ ನವೀಕರಿಸಲಾಗಿದೆ.

ಅಧ್ಯಾಯ 17. ಜಾಲಬಂಧ ಚಾಲಕ ಅಪ್‌ಡೇಟ್‌ಗಳು

  • bna ಚಾಲಕವನ್ನು ಆವೃತ್ತಿ 3.2.23.0r ಗೆ ನವೀಕರಿಸಲಾಗಿದೆ.
  • cxgb3 ಚಾಲಕವನ್ನು ಆವೃತ್ತಿ 1.1.5-ko ಗೆ ನವೀಕರಿಸಲಾಗಿದೆ.
  • cxgb3i ಚಾಲಕವನ್ನು ಆವೃತ್ತಿ 2.0.0 ಗೆ ನವೀಕರಿಸಲಾಗಿದೆ.
  • iw_cxgb3 ಚಾಲಕವನ್ನು ಆವೃತ್ತಿ 1.1 ಗೆ ನವೀಕರಿಸಲಾಗಿದೆ.
  • cxgb4 ಚಾಲಕವನ್ನು ಆವೃತ್ತಿ 2.0.0-ko ಗೆ ನವೀಕರಿಸಲಾಗಿದೆ.
  • cxgb4vf ಚಾಲಕವನ್ನು ಆವೃತ್ತಿ 2.0.0-ko ಗೆ ನವೀಕರಿಸಲಾಗಿದೆ.
  • cxgb4i ಚಾಲಕವನ್ನು ಆವೃತ್ತಿ 0.9.4 ಗೆ ನವೀಕರಿಸಲಾಗಿದೆ.
  • iw_cxgb4 ಚಾಲಕವನ್ನು ಆವೃತ್ತಿ 0.1 ಗೆ ನವೀಕರಿಸಲಾಗಿದೆ.
  • e1000e ಚಾಲಕವನ್ನು ಆವೃತ್ತಿ 2.3.2-k ಗೆ ನವೀಕರಿಸಲಾಗಿದೆ.
  • igb ಚಾಲಕವನ್ನು ಆವೃತ್ತಿ 5.2.13-k ಗೆ ನವೀಕರಿಸಲಾಗಿದೆ.
  • igbvf ಚಾಲಕವನ್ನು ಆವೃತ್ತಿ 2.0.2-k ಗೆ ನವೀಕರಿಸಲಾಗಿದೆ.
  • ixgbe ಚಾಲಕವನ್ನು ಆವೃತ್ತಿ 3.19.1-k ಗೆ ನವೀಕರಿಸಲಾಗಿದೆ.
  • ixgbevf ಚಾಲಕವನ್ನು ಆವೃತ್ತಿ 2.12.1-k ಗೆ ನವೀಕರಿಸಲಾಗಿದೆ.
  • i40e ಚಾಲಕವನ್ನು ಆವೃತ್ತಿ 1.0.11-k ಗೆ ನವೀಕರಿಸಲಾಗಿದೆ.
  • i40evf ಚಾಲಕವನ್ನು ಆವೃತ್ತಿ 1.0.1 ಗೆ ನವೀಕರಿಸಲಾಗಿದೆ.
  • e1000 ಚಾಲಕವನ್ನು ಆವೃತ್ತಿ 7.3.21-k8-NAPI ಗೆ ನವೀಕರಿಸಲಾಗಿದೆ.
  • mlx4_en ಚಾಲಕವನ್ನು ಆವೃತ್ತಿ 2.2-1 ಗೆ ನವೀಕರಿಸಲಾಗಿದೆ.
  • mlx4_ib ಚಾಲಕವನ್ನು ಆವೃತ್ತಿ 2.2-1 ಗೆ ನವೀಕರಿಸಲಾಗಿದೆ.
  • mlx5_core ಚಾಲಕವನ್ನು ಆವೃತ್ತಿ 2.2-1 ಗೆ ನವೀಕರಿಸಲಾಗಿದೆ.
  • mlx5_ib ಚಾಲಕವನ್ನು ಆವೃತ್ತಿ 2.2-1 ಗೆ ನವೀಕರಿಸಲಾಗಿದೆ.
  • ocrdma ಚಾಲಕವನ್ನು ಆವೃತ್ತಿ 10.2.287.0u ಗೆ ನವೀಕರಿಸಲಾಗಿದೆ.
  • ib_ipoib ಚಾಲಕವನ್ನು ಆವೃತ್ತಿ 1.0.0 ಗೆ ನವೀಕರಿಸಲಾಗಿದೆ.
  • ib_qib ಚಾಲಕವನ್ನು ಆವೃತ್ತಿ 1.11 ಗೆ ನವೀಕರಿಸಲಾಗಿದೆ.
  • enic ಚಾಲಕವನ್ನು ಆವೃತ್ತಿ 2.1.1.67 ಗೆ ನವೀಕರಿಸಲಾಗಿದೆ.
  • be2net ಚಾಲಕವನ್ನು ಆವೃತ್ತಿ 10.4r ಗೆ ನವೀಕರಿಸಲಾಗಿದೆ.
  • tg3 ಚಾಲಕವನ್ನು ಆವೃತ್ತಿ 3.137 ಗೆ ನವೀಕರಿಸಲಾಗಿದೆ.
  • r8169 ಚಾಲಕವನ್ನು ಆವೃತ್ತಿ 2.3LK-NAPI ಗೆ ನವೀಕರಿಸಲಾಗಿದೆ.

ಅಧ್ಯಾಯ 18. ಗ್ರಾಫಿಕ್ಸ್ ಚಾಲಕ ಅಪ್ಡೇಟುಗಳು

  • vmwgfx ಚಾಲಕವನ್ನು ಆವೃತ್ತಿ 2.6.0.0 ಗೆ ನವೀಕರಿಸಲಾಗಿದೆ.

ಪರಿಷ್ಕರಣೆಯ ಇತಿಹಾಸ

ಪರಿಷ್ಕರಣೆಯ ಇತಿಹಾಸ
ಪರಿಷ್ಕರಣೆ 1.0-9.9Wed Jan 29 2015Prasad Shankar
Kannada translation of the Red Hat Enterprise Linux 7.1 Release Notes.
ಪರಿಷ್ಕರಣೆ 1.0-9Wed Jan 14 2015Milan Navrátil
Red Hat Enterprise Linux 7.1 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.
ಪರಿಷ್ಕರಣೆ 1.0-8Thu Dec 15 2014Jiří Herrmann
Red Hat Enterprise Linux 7.1 ಬೀಟಾದ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.